ETV Bharat / business

ಈಗಿನ ಮಾರುಕಟ್ಟೆಯನ್ನು ಕೌರವ-ಪಾಂಡವರಿಗೆ ಹೋಲಿಸಿದ ಶಾ: ಇದರಲ್ಲಿ ಅಭಿಮನ್ಯು ಯಾರು ಗೊತ್ತೆ? - ಭಾರತದ ಜಿಡಿಪಿ ಸುಧಾರಣೆ

ಆರ್ಥಿಕ ಬೆಳವಣಿಗೆಯು 2021ರ ಮಾರ್ಚ್ ಅಥವಾ ಜೂನ್ ತ್ರೈಮಾಸಿಕದ ವೇಳೆಗೆ ಸಕಾರಾತ್ಮಕ ಪ್ರದೇಶಕ್ಕೆ ಮರಳಲಿದೆ. ಆದರೆ ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಭಾರತವು ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಬೇಕಾಗುತ್ತದೆ ಎಂದು ಪ್ರಧಾನಿ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯ ನಿಲೇಶ್ ಶಾ ಹೇಳಿದ್ದಾರೆ.

Mahabharata
ಮಹಾಭಾರತ
author img

By

Published : Sep 2, 2020, 4:22 PM IST

ಮುಂಬೈ: ಪ್ರಧಾನಿ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯ ನಿಲೇಶ್ ಶಾ ಅವರು ಭಾರತೀಯ ಉದ್ಯಮಿಗಳ ಪ್ರಸ್ತುತ ಸ್ಥಿತಿಯನ್ನು ಮಹಾಭಾರತದಲ್ಲಿನ ಅಭಿಮನ್ಯು ಪಾತ್ರದೊಂದಿಗೆ ಹೋಲಿಸಿದ್ದಾರೆ.

ಈಗಿನ ಮಾರುಕಟ್ಟೆಯ ಶಕ್ತಿಗಳು ಕೌರವರಿಗೆ ಹೋಲುತ್ತವೆ ಮತ್ತು ಪಾಂಡವರ ಪಾತ್ರವನ್ನು ನಿಯಂತ್ರಣ, ಮೂಲಸೌಕರ್ಯ ಬೆಂಬಲ ಮತ್ತು ನೀತಿಗಳಿಂದ ನಿರ್ವಹಿಸಲಾಗುತ್ತದೆ ಎಂದು ಮಹಾಭಾರತವನ್ನು ಇಂದಿನ ಸನ್ನಿವೇಶಕ್ಕೆ ಬಳಸಿಕೊಂಡು ರೂಪಕವಾಗಿ ವ್ಯಾಖ್ಯಾನಿಸಿದರು.

ಮಾರುಕಟ್ಟೆಗಳ ಉಲ್ಬಣಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಲಾಕ್‌ಡೌನ್‌ಗಳ ಬಗೆ, ಭವಿಷ್ಯತ್ತಿನ ಭಾರತದ ಬೆಳವಣಿಗೆಯ ಕಕ್ಷೆ ಬದಲಿಸುವ ಸುಧಾರಣೆಗಳ ಬಗ್ಗೆ ಮತ್ತು ಮಾರುಕಟ್ಟೆಗಳು ಒಂದೇ ರೀತಿಯಾಗಿ ಅರ್ಥೈಸಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.

ಆರ್ಥಿಕ ಬೆಳವಣಿಗೆಯು 2021ರ ಮಾರ್ಚ್ ಅಥವಾ ಜೂನ್ ತ್ರೈಮಾಸಿಕದ ವೇಳೆಗೆ ಸಕಾರಾತ್ಮಕ ಪ್ರದೇಶಕ್ಕೆ ಮರಳಲಿದೆ. ಆದರೆ ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಭಾರತವು ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಬೇಕಾಗುತ್ತದೆ ಎಂದು ಹೇಳಿದರು.

ಕೋಟಾಕ್ ಮಹೀಂದ್ರಾ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶಾ, ಈಕ್ವಿಟಿ ಮಾರುಕಟ್ಟೆಗಳ ಏರಿಕೆಯು ಭವಿಷ್ಯ ನೋಡುವ ಮೂಲಕ ಆಶಾವಾದಿಂದ ಕೂಡಿದೆ. ಹಿಂದಿನ ದತ್ತಾಂಶಗಳಲ್ಲ.

2020ರ ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ವರ್ಷದಿಂದ ವರ್ಷಕ್ಕೆ ಶೇ 23.9ರಷ್ಟು ಸಂಕುಚಿತಗೊಂಡಿದೆ. ಇದು ಕೋವಿಡ್​-19 ಲಾಕ್‌ಡೌನ್‌ ಮತ್ತು ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ವಿಶ್ವದಾದ್ಯಂತ ಕೆಟ್ಟ ಪ್ರದರ್ಶನ ನೀಡುವ ದೇಶಗಳಲ್ಲಿ ಭಾರತ ಸಹ ಒಂದಾಗಿದೆ.

ಪ್ರಸ್ತುತ ಮಟ್ಟದಲ್ಲಿನ ಬೆಳವಣಿಗೆ 2021ರಮಾರ್ಚ್ ತ್ರೈಮಾಸಿಕ ಅಥವಾ 2021 ಜೂನ್ ತ್ರೈಮಾಸಿಕದಲ್ಲಿ ಸಕಾರಾತ್ಮಕ ಜಿಡಿಪಿ ಬೆಳವಣಿಗೆ ಕಾಣಬಹುದು ಎಂದು ವೃತ್ತಿಪರ ನೆಟ್ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್‌ಡಿನ್ ಆಯೋಜಿಸಿದ ವೆಬ್‌ನಾರ್‌ನಲ್ಲಿ ಶಾ ಹೇಳಿದರು.

ಎರಡು ವರ್ಷಗಳ ಕಾಲ ಜಿಡಿಪಿಯು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದೆ. ಆದರೆ ನಾವು ಸವಾಲಿನ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕು. ವಿದೇಶಿ ವಿನಿಮಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು 1991ರಲ್ಲಿ ಮಾಡಿದ ರೀತಿಯಲ್ಲಿಯೇ ಬೆಳವಣಿಗೆಯ ವೇಗದ ಹೊಸ ಕಕ್ಷೆಯಲ್ಲಿ ಇರಿಸಬೇಕಿದೆ ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತೀಯ ಸರಕುಗಳನ್ನು ಸ್ಪರ್ಧಾತ್ಮಕವಾಗಿಸದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಬೇಕಾಗಿದೆ. ಇದಲ್ಲದೆ, ರೈತರಿಗೆ ಸಬ್ಸಿಡಿ ಪೂರೈಕೆಯು ಉದ್ಯಮಕ್ಕೆ ವಿದ್ಯುತ್ ಪಡೆಯಲು ದುಬಾರಿ ಆಗುವುದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗಬೇಕಿದೆ. ಹೆಚ್ಚಿನ ಬಂಡವಾಳ ಹರಿವು, ಕಡಿಮೆ ತೈಲ ಬೆಲೆ, ಉತ್ತಮ ಮಾನ್ಸೂನ್ ಭವಿಷ್ಯದ ಬಗ್ಗೆ ಭರವಸೆಯಿಡುವ ಅಂಶಗಳಾಗಿವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.