ETV Bharat / business

ICUನಲ್ಲಿರುವ ಆರ್ಥಿಕತೆ ಮೇಲೆತ್ತಲು ಮೋದಿಗೆ ಮಾಜಿ ಪ್ರಧಾನಿ ಡಾ. ಸಿಂಗ್​ ಕೊಟ್ಟ 6 ಟಿಪ್ಸ್​ - ಆಟೋಮೊಬೈಲ್

ಪ್ರಸ್ತುತದ ಆರ್ಥಿಕತೆಯು 'ಬಹಳ ಚಿಂತಾಜನಕ'ವಾಗಿದ್ದು, ಮಂದಗತಿಯಿಂದ ಹೊರಬರಲು ಕೆಲವು ವರ್ಷಗಳು ಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿರಾಕರಣೆ ವಲಯದಿಂದ ಹೊರಬಂದು ನಿಧಾನಗತಿಯ ಆರ್ಥಿಕ ಚಕ್ರಕ್ಕೆ ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುವಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 12, 2019, 6:49 PM IST

ನವದೆಹಲಿ: ಮಾಜಿ ಪ್ರಧಾನಿ, ಹಣಕಾಸು ತಜ್ಞ ಡಾ. ಮನಮೋಹನ್ ಸಿಂಗ್ ಅವರು, ನಿಧಾನಗತಿಯ ಆರ್ಥಿಕತೆಯನ್ನು ಸರಿಪಡಿಸಲು ಸಂವೇದನಾಶೀಲವಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಪ್ರಸ್ತುತದ ಆರ್ಥಿಕತೆಯು 'ಚಿಂತಾಜನಕ'ವಾಗಿದ್ದು, ಮಂದಗತಿಯಿಂದ ಹೊರಬರಲು ಕೆಲವು ವರ್ಷಗಳು ಬೇಕಾಗುತ್ತದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ನಿರಾಕರಣೆ ಮನೋಸ್ಥಿತಿಯಿಂದ ಹೊರಬಂದು ನಿಧಾನಗತಿಯ ಆರ್ಥಿಕ ಚಕ್ರಕ್ಕೆ ಉತ್ತೇಜನ ನೀಡಲು ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುವಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ನೀಡಿರುವ 6 ಟಿಪ್ಸ್‌ಗಳು ಇಂತಿವೆ.

1.ಜಿಎಸ್‌ಟಿ ಪದ್ಧತಿಯನ್ನು ಕೆಂದ್ರ ಸರ್ಕಾರವು ಆಮೂಲಾಗ್ರವಾಗಿ ಸರಳೀಕರಿಸಬೇಕು ಮತ್ತು ಅದನ್ನು ತರ್ಕಬದ್ಧಗೊಳಿಸಬೇಕು. ಇದರರ್ಥ ಅಲ್ಪಾವಧಿಯಲ್ಲಿ ಆದಾಯದ ನಷ್ಟ ಕಡಿತಗೊಳಿಸಬೇಕು

2.ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಕೃಷಿ ಪುನರುಜ್ಜೀವನಕ್ಕೆ ಸರ್ಕಾರವು ನವೀನ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ

3. ಬಂಡವಾಳ ಸೃಷ್ಟಿಗೆ ತೊಡಕಾದ ಸಾಲದ ಕೊರತೆಯನ್ನು ಸರ್ಕಾರ ಸರಿಯಾಗಿ ನಿಭಾಯಿಸಬೇಕು. ಇದು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮಾತ್ರವಲ್ಲ ಎನ್‌ಬಿಎಫ್‌ಸಿಗಳನ್ನು ಉಸಿರುಗಟ್ಟಿಸುವಂತೆ ಮಾಡುತ್ತಿದೆ.

4. ಜವಳಿ, ಆಟೋಮೊಬೈಲ್​, ಎಲೆಕ್ಟ್ರಾನಿಕ್ಸ್ ಮತ್ತು ಕೈಗೆಟುಕುವ ವಸತಿ ಸಮುಚ್ಚಯದಂತಹ ಪ್ರಮುಖ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಪುನಶ್ಚೇತನಗೊಳಿಸಬೇಕು. ಆದ್ಯತೆಯ ಸಾಲ ನೀಡಿಕೆಯನ್ನು ಖಾತರಿಪಡಿಸಬೇಕು.

5. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದ ಪರಿಣಾಮವಾಗಿ ತೆರೆದಿರುವ ರಫ್ತು ಮಾರುಕಟ್ಟೆಗಳನ್ನು ಪರಿಹರಿಸಲು ನಾವು ಹೊಸ ಮಾರ್ಗಗಳನ್ನು ಹುಡುಕಬೇಕಾಗಿದೆ.

6. ಖಾಸಗಿ ಹೂಡಿಕೆಯ ಸೇರಿದಂತೆ ಇತರೆ ಮಾರ್ಗದ ಮುಖೇನ ಬೃಹತ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ವಿಶ್ವಾಸಾರ್ಹ ಮಾರ್ಗಸೂಚಿಗಳನ್ನು ಗುರುತಿಸಿಕೊಳ್ಳಬೇಕು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.