ETV Bharat / business

2021ರ ವೇಳೆಗೆ ವಿದ್ಯುತ್ ವಿತರಣಾ ಕಂಪನಿಗಳ ಸಾಲ 4.5 ಲಕ್ಷ ಕೋಟಿ ರೂ.ಗೆ ಏರಿಕೆ - ವಿದ್ಯುತ್ ಸರಬರಾಜು ಕಂಪನಿಗಳು

ಕೋವಿಡ್​-19 ಸಾಂಕ್ರಾಮಿಕದ ಮಧ್ಯೆ ವಿದ್ಯುತ್ ಬೇಡಿಕೆ ದುರ್ಬಲವಾಗಿ ನಗದು ನಷ್ಟ ಹೆಚ್ಚಾಗಿದೆ. ಡಿಸ್ಕಾಮ್​​ಗಳ ಸಾಲದ ಪ್ರಮಾಣ 2020-21ರ ಅಂತ್ಯದ ವೇಳೆಗೆ 4.5 ಲಕ್ಷ ಕೋಟಿ ರೂ. ಅಥವಾ ಕಳೆದ ಹಣಕಾಸು ವರ್ಷಕ್ಕಿಂತ ಶೇ 30ರಷ್ಟು ಹೆಚ್ಚಾಗಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ.

Discoms
ಡಿಸ್ಕಾಮ್
author img

By

Published : Jun 7, 2020, 12:55 AM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಡಿಸ್ಕಾಮ್​ಗಳ​ (ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳ) ಸಾಲ ಸಾರ್ವಕಾಲಿಕ ಗರಿಷ್ಠ 4.5 ಲಕ್ಷ ಕೋಟಿ ರೂ.ಗೆ ತಲುಪಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ತಿಳಿಸಿದೆ.

ಕಳೆದ ತಿಂಗಳು ಸರ್ಕಾರ ಘೋಷಿಸಿದ 90,000 ಕೋಟಿ ರೂ. ದ್ರವ್ಯತೆ ಪ್ಯಾಕೇಜ್ ಕಂಪನಿಗಳಿಗೆ ತಾತ್ಕಾಲಿಕ ರಿಲೀಫ್​ ನೀಡುತ್ತದೆ. ಆದರೆ, ಡಿಸ್ಕಾಮ್​ಗಳ ಸುಸ್ಥಿರತೆಗೆ ರಚನಾತ್ಮಕ ಸುಧಾರಣೆಗಳು ನಿರ್ಣಾಯಕವಗಲಿವೆ ಎಂದು ರೇಟಿಂಗ್ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್​-19 ಸಾಂಕ್ರಾಮಿಕದ ಮಧ್ಯೆ ವಿದ್ಯುತ್ ಬೇಡಿಕೆ ದುರ್ಬಲವಾಗಿ ನಗದು ನಷ್ಟ ಹೆಚ್ಚಾಗಿದೆ. ಡಿಸ್ಕಾಮ್​​ಗಳ ಸಾಲದ ಪ್ರಮಾಣ 2020-21ರ ಅಂತ್ಯದ ವೇಳೆಗೆ 4.5 ಲಕ್ಷ ಕೋಟಿ ರೂ. ಅಥವಾ ಕಳೆದ ಹಣಕಾಸು ವರ್ಷಕ್ಕಿಂತ ಶೇ 30ರಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ.

ಸಾಲದ ಏರಿಕೆಯು ಡಿಸ್ಕಾಮ್​ಗಳ ಕ್ರೆಡಿಟ್ ಪ್ರೊಫೈಲ್‌ ಹದಗೆಡಿಸುತ್ತದೆ. ಅವುಗಳ ಸುಸ್ಥಿರತೆಗೆ ರಚನಾತ್ಮಕ ಸುಧಾರಣೆಗಳನ್ನು ನಿರ್ಣಾಯಕವಾಗಿಸಲಿವೆ. 15 ರಾಜ್ಯಗಳಿಂದ 34 ರಾಜ್ಯ ಡಿಸ್ಕೋಮ್‌ಗಳು ಭಾರತದ ವಿದ್ಯುತ್ ಬೇಡಿಕೆಯ ಶೇ 80ಕ್ಕಿಂತಲೂ ಹೆಚ್ಚಿನದನ್ನು ಪೂರೈಸುತ್ತವೆ ಎಂದು ಕ್ರೈಸಿಲ್ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.