ನವದೆಹಲಿ: ಸ್ವೀಡನ್ನಲ್ಲಿ ನಡೆದ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಉಡುಪು ಧರಿಸಿ ಪ್ರಶಸ್ತಿ ಸ್ವೀಕರಿಸಿದ್ದ ಭಾರತ ಮೂಲದ ಅಭಿಜಿತ್ ಬ್ಯಾನರ್ಜಿ, ಅವರ ಪತ್ನಿ ಎಸ್ತರ್ ಡಪ್ಲೊ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಪಂಚೆ ಧರಿಸಿದ್ದ ಅಭಿಜಿತ್ ಹಾಗೂ ಸೀರೆ ಧರಿಸಿದ್ದ ಡಪ್ಲೊ ಅವರ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದರು. 'ವಿಶ್ವದ ಪ್ರತಿಯೊಂದು ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೆ ಒಂದು ಘನ ನಂಬಿಕೆಯಂತೆ ಘನತೆಯನ್ನು ಖಚಿತಪಡಿಸುತ್ತದೆ' ಎಂದು ನೊಬೆಲ್ ಪುರಸ್ಕೃತ ದಂಪತಿಗಳು ಹೇಳಿದರು.
ಆರ್ಥಿಕವಾಗಿ ಹಿಂದುಳಿದವರನ್ನು ವೈಫಲ್ಯ ಹೊಂದಿದವರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದು ದೊಡ್ಡ ಗೆಲುವಿನ ವಿಧಾನವಾಗಿರುತ್ತದೆ ಎಂದು 'ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್' ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಬ್ಯಾನರ್ಜಿ ಹೇಳಿದರು.
ಬಡವರಿಗೆ ಸ್ವತ್ತುಗಳನ್ನು ನೀಡಿದರೆ, ಉದಾ; ಹಸು, ಮೇಕೆಗಳು ಮತ್ತು ವ್ಯವಹಾರ ಆರಂಭಿಸಲು ಕೆಲ ಸಮಯದವರೆಗೆ ತರಬೇತಿ ಒದಗಿಸಿದರೆ ಅವರು ತಮ್ಮ ಕಾಲು ಮೇಲೆ ತಾವು ನಿಂತು ತಮ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಇದನ್ನು ಮೊದಲು ಬಾಂಗ್ಲಾದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ. ಬಳಿಕ ಇತರ ಏಳು ದೇಶಗಳಲ್ಲಿ ಜಾರಿಗೆ ತಂದಿದ್ದೇವೆ ಎಂದು ಬ್ಯಾನರ್ಜಿ ಹೇಳಿದರು.
ಭಾರತದ ಆರ್ಥಿಕ ಕುಸಿತದ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಕಾರ್ಪೊರೇಟ್ ತೆರಿಗೆಗಳಲ್ಲಿ ಹೆಚ್ಚಿನ ಕಡಿತಗಳಾಗದಿರುವುದು ಮುಖ್ಯವಾದ ಅಂಶ ಎಂದರು.
ಕಾರ್ಪೊರೇಟ್ ವಲಯದಲ್ಲಿ ಹಣದ ಕೊರತೆಯಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದು ಹೂಡಿಕೆ ಮಾಡುತ್ತಿಲ್ಲ. ನೀವು ಮಾಡಬೇಕಾಗಿರುವುದು ಬೇಡಿಕೆಯ ವಿಭಾಗವನ್ನು ವೃದ್ಧಿಸುವುದು. ಹಣವನ್ನು ಜನರ ಕೈಯಲ್ಲಿಟ್ಟರೆ ಅವರು ಖರ್ಚು ಮಾಡುತ್ತಾರೆ. ಈ ಸರ್ಕಾರವು ಬಹುತೇಕ ಎಲ್ಲರಿಗೂ ಬ್ಯಾಂಕ್ ಖಾತೆಗಳು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿದೆ. ಆರ್ಥಿಕತೆಯ ಕೆಳ ಮುಖವಾದಾಗ ಅದನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಬ್ಯಾನರ್ಜಿ ಹೇಳಿದರು.
ಸಾಲ ಮನ್ನಾ ಬಹಳ ಪರಿಣಾಮಕಾರಿ ಎಂದು ನಾನು ಭಾವಿಸುವುದಿಲ್ಲ. ಬರಗಾಲ ಬೆಳೆಗಳನ್ನು ನಾಶಮಾಡಿದರೆ, ಸಾಲ ಪಡೆದ ರೈತರಿಗೆ ಮಾತ್ರ ಮನ್ನಾದ ಫಲ ಸಿಗುತ್ತದೆ. ಇತರರಿಗೆ ಇದು ಏನೂ ಪ್ರಯೋಜನವಿಲ್ಲ. ಅವರು ಯಾವುದೇ ರೀತಿಯ ಪರಿಹಾರವನ್ನೂ ಪಡೆಯುವುದಿಲ್ಲ ಎಂದು ಹೇಳಿದರು.
ಬಡವರಿಗೆ ಕರಪತ್ರಗಳನ್ನು ನೀಡುವುದರಿಂದ ಸೋಮಾರಿಯಾಗುತ್ತಾರೆ ಎಂದು ಭಾವಿಸುವುದು ತಪ್ಪು ಎನ್ನುವ ಮೂಲಕ ಎಸ್ತರ್ ಡಪ್ಲೊ ಕಾರ್ಯಕ್ರಮದ ಗಮನ ಸೆಳೆದರು.