ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾನೂನುಬದ್ಧ ಕುಡಿಯುವ ಈಗಿನ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ನಗರದಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ. ದೆಹಲಿಯಲ್ಲಿ ಯಾವುದೇ ಸರ್ಕಾರಿ ಮದ್ಯದಂಗಡಿಗಳು ಇರುವುದಿಲ್ಲ. ಕ್ಯಾಬಿನೆಟ್ ಅನುಮೋದಿಸಿದ ಅಬಕಾರಿ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಇದನ್ನೂ ಓದಿ: ಅತಿಯಾದ ಮದ್ಯ ಸೇವನೆಯಿಂದ ಸಾವು: ಕುಟುಂಬಸ್ಥರಿಗೆ ವಿಮೆ ಕ್ಲೈಮ್ ಆಗುತ್ತಾ? ಸುಪ್ರೀಂಕೋರ್ಟ್ ಹೇಳುವುದೇನು?
ಈ ನೀತಿಯು 'ಮದ್ಯ ಮಾಫಿಯಾ'ವನ್ನು ಪರಿಶೀಲಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈಗಿನ ಮದ್ಯ ಮಾರಾಟದ ವಾರ್ಷಿಕ ಬೆಳವಣಿಗೆಯ 5 ಪ್ರತಿಶತವು ಮುಂದೆ ಶೇ 20ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಇತರ ಮೆಟ್ರೋಪಾಲಿಟನ್ ನಗರಗಳ ಪೈಕಿ ಮುಂಬೈಯಲ್ಲಿ 25 ವರ್ಷದೊಳಗಿನವರಿಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಭಾರತದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ 21 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿವೆ.