ETV Bharat / business

ಶೀಘ್ರವೇ ಭಾರತದಲ್ಲಿ ಇನ್ನಷ್ಟು ಕೊರೊನಾ ಲಸಿಕೆಗಳು ಬರಲಿವೆ: ಜಾಗತಿಕ ರಾಷ್ಟ್ರಗಳಿಗೆ ನಮೋ ಅಭಯ - ವಿಶ್ವ ಆರ್ಥಿಕ ವೇದಿಕೆ ಲೆಟೆಸ್ಟ್​ ಸುದ್ದಿ

ಮುಂದಿನ ದಿನಗಳಲ್ಲಿ ಭಾರತದಿಂದ ಇನ್ನೂ ಅನೇಕ ಲಸಿಕೆಗಳು ಹೊರಬರಲಿವೆ ಎಂಬುದನ್ನು ತಿಳಿದುಕೊಂಡರೆ ವಿಶ್ವ ಆರ್ಥಿಕ ವೇದಿಕೆಯು ನಿರಾಳವಾಗುತ್ತದೆ. ನಾವು ಈಗ ಭಾರತದಲ್ಲಿ ಎರಡು ಲಸಿಕೆಗಳನ್ನು ಹೊಂದಿದ್ದೇವೆ. ಇದು ಶೀಘ್ರದಲ್ಲೇ ಜಗತ್ತಿಗೆ ಲಭ್ಯವಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಮಾವೇಶದಲ್ಲಿ ಜಾಗತಿಕ ಸಮುದಾಯಕ್ಕೆ ಅಭಯ ನೀಡಿದರು.

PM Modi
PM Modi
author img

By

Published : Jan 28, 2021, 6:36 PM IST

ನವದೆಹಲಿ: ಕೊರೊನಾದಂತಹ ಕಠಿಣ ಕಾಲದಲ್ಲಿಯೂ ಭಾರತ ಮೊದಲಿನಿಂದಲೂ ತನ್ನ ಜಾಗತಿಕ ಜವಾಬ್ದಾರಿ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ 'ನಾಲ್ಕನೇ ಕೈಗಾರಿಕಾ ಕ್ರಾಂತಿ: ಮನುಕುಲದ ಒಳಿತಿಗಾಗಿ ತಂತ್ರಜ್ಞಾನದ ಬಳಕೆ' ಕುರಿತು ಮಾತನಾಡಿದ ಪ್ರಧಾನಿ, ಅನೇಕ ದೇಶಗಳಲ್ಲಿ ವಾಯುಯಾನಕ್ಕೆ ನಿರ್ಬಂಧ ವಿಧಿಸಿದ್ದಾಗ ಭಾರತವು 1 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ತಮ್ಮ ದೇಶಗಳಿಗೆ ಕರೆದೊಯ್ದು 150ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ತಲುಪಿಸಿತು ಎಂದರು.

ಮುಂದಿನ ದಿನಗಳಲ್ಲಿ ಭಾರತದಿಂದ ಇನ್ನೂ ಅನೇಕ ಲಸಿಕೆಗಳು ಹೊರಬರಲಿವೆ ಎಂಬುದನ್ನು ತಿಳಿದುಕೊಂಡರೆ ವಿಶ್ವ ಆರ್ಥಿಕ ವೇದಿಕೆಯು ನಿರಾಳವಾಗುತ್ತದೆ. ನಾವು ಈಗ ಭಾರತದಲ್ಲಿ ಎರಡು ಲಸಿಕೆಗಳನ್ನು ಹೊಂದಿದ್ದೇವೆ. ಇದು ಶೀಘ್ರದಲ್ಲೇ ಜಗತ್ತಿಗೆ ಲಭ್ಯವಾಗಲಿದೆ. ಸ್ವಾವಲಂಬನೆಗಾಗಿ ಭಾರತವು ಜಾಗತೀಕರಣದ ಹೊಸ ಯುಗವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಆಯುರ್ವೇದವು ಹೇಗೆ ಸಹಾಯ ಮಾಡಿದೆ ಎಂದು ನಾವು ತೋರಿಸಿದ್ದೇವೆ. ಕೇವಲ 12 ದಿನಗಳಲ್ಲಿ ಭಾರತವು 2.3 ದಶಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ 300 ಮಿಲಿಯನ್ ವೃದ್ಧರಿಗೆ ಮತ್ತು ಅಗತ್ಯ ಇರುವವರಿಗೆ ಲಸಿಕೆ ಹಾಕುವ ಗುರಿಯನ್ನು ಸಾಧಿಸುತ್ತೇವೆ ಎಂದು ಹೇಳಿದರು.

ನಾವು ಕೋವಿಡ್​-19 ವಿರುದ್ಧ ಹೋರಾಡಲು ಕಿಟ್‌ಗಳನ್ನು ತಯಾರಿಸಿದ್ದು ಮಾತ್ರವಲ್ಲದೆ ಇತರ ದೇಶಗಳಿಗೂ ಸಹಾಯ ಮಾಡಿದ್ದೇವೆ. ನಾವು 30 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿದ್ದೇವೆ. ನಮ್ಮ ಮುಂದಿನ ಹಂತದಲ್ಲಿ ಅಗತ್ಯ ಇರುವ ಜನರಿಗೆ ಲಸಿಕೆ ಹಾಕಲಿದ್ದೇವೆ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ: ನಾಳೆ ಮುಂಬೈಯಲ್ಲಿ ಚಾಲಕರಹಿತ ಮೆಟ್ರೋ ರೈಲಿಗೆ ಚಾಲನೆ

ಡಿಸೆಂಬರ್‌ನಲ್ಲಿ ಯುಪಿಐ ವ್ಯವಸ್ಥೆಗಳ ಮೂಲಕ 4 ಟ್ರಿಲಿಯನ್ ರೂ.ನಷ್ಟು ವಹಿವಾಟು ನಡೆದಿದೆ. ಅನೇಕ ದೇಶಗಳು ಯುಪಿಐ ನೆಟ್‌ವರ್ಕ್‌ಗಳನ್ನು ಪುನರಾವರ್ತಿಸಲು ಎದುರು ನೋಡುತ್ತಿವೆ. ಕೋವಿಡ್ ಸಮಯದಲ್ಲಿ 1.8 ಟ್ರಿಲಿಯನ್ ರೂಪಾಯಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು. ಜಾಗತೀಕರಣವನ್ನು ಬಲಪಡಿಸುವ ಆತ್ಮ ನಿರ್ಭರ ಭಾರತ ಅಭಿಯಾನ ಕೈಗೊಳ್ಳಲಾಗಿದೆ. ಆತ್ಮ ನಿರ್ಭರ ಅಭಿಯಾನವು ಉದ್ಯಮ 4.0ರಿಂದ ಬೆಂಬಲ ಪಡೆಯಲಿದೆ. ಕಳೆದ 6 ವರ್ಷಗಳಲ್ಲಿನ ಭಾರತದ ಡಿಜಿಟಲ್ ಚಾಲನೆಯು ಡಬ್ಲ್ಯುಇಎಫ್ ತಜ್ಞರನ್ನು ಸೆಳೆದಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.