ETV Bharat / business

40 ವರ್ಷಗಳಲ್ಲಿಯೇ ಕರಾಳ GDP: ಕಿವುಡು ಸರ್ಕಾರಕ್ಕೆ ವಿತ್ತ ತಜ್ಞರ ಸಲಹೆ ಕೇಳಲಿಲ್ಲ - ಚಿದು ಕಿಡಿ

ಖ್ಯಾತ ಅರ್ಥಶಾಸ್ತ್ರಜ್ಞರ ಉತ್ತಮ ಸಲಹೆಯನ್ನು ಸರ್ಕಾರ ಕಡೆಗಣಿಸಿದೆ. ಖ್ಯಾತ ಸಂಸ್ಥೆಗಳ ಸೂಚನೆಗಳನ್ನು ಇಲ್ಲಿಯತನಕ ನಿರಾಕರಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರು ಹಣವನ್ನು ಮುದ್ರಿಸಲು ಮತ್ತು ಖರ್ಚು ಹೆಚ್ಚಿಸಲು ಕರೆ ನೀಡಿದ್ದನ್ನು ನಾವು ಗಮನಿಸಬಹುದು. ಆದರೂ, ನಿನ್ನೆ ಬೆಳಗ್ಗೆಯಷ್ಟೇ, ಹಣಕಾಸು ಸಚಿವರು ಕೆಲ ಪತ್ರಿಕೆಗಳಿಗೆ ಸುದೀರ್ಘ ಸಂದರ್ಶನವೊಂದನ್ನು ನೀಡಿದರು..

Chidambaram
Chidambaram
author img

By

Published : Jun 1, 2021, 9:46 PM IST

ನವದೆಹಲಿ : 2021ರ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ ಕುಸಿತದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ವಾಗ್ದಾಳಿ ನಡೆಸಿದ್ದಾರೆ.

ಹಣವನ್ನು ಸಾಲ ಪಡೆದು ಅಥವಾ ನೋಟುಗಳನ್ನು ಮುದ್ರಿಸುವಂತೆ ಸರ್ಕಾರವನ್ನು ಕೇಳಿದರೂ ಹಣಕಾಸಿನ ಕೊರತೆಯ ಬಗ್ಗೆ ಚಿಂತಿಸದೆ ಆಕ್ರಮಣಕಾರಿಯಾಗಿ ಖರ್ಚು ಮಾಡಿದರು ಎಂದು ಕೇಂದ್ರದ ವಿತ್ತೀಯ ನೀತಿಯನ್ನು ಟೀಕಿಸಿದರು.

ರಾಷ್ಟ್ರೀಯ ಸಾಂಖಿಕ್ಯ ಕಚೇರಿಯು 2020-21ರ ಹಣಕಾಸು ವರ್ಷದಲ್ಲಿ ಜಿಡಿಪಿ 7.3 ಪ್ರತಿಶತದಷ್ಟು ಸಂಕುಚಿತಗೊಂಡಿದೆ ಎಂದು ತೋರಿಸಿದ್ದು, ಇದು ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಕೆಟ್ಟ ಸಾಧನೆಯಾಗಿದೆ.

ನಾಲ್ಕು ದಶಕಗಳಲ್ಲಿ ಇದನ್ನು 'ಕರಾಳ ವರ್ಷ' ಎಂದು ಚಿದಂಬರಂ ವ್ಯಾಖ್ಯಾನಿಸಿ, ಮೊದಲ ಎರಡು ತ್ರೈಮಾಸಿಕಗಳು ಆರ್ಥಿಕ ಹಿಂಜರಿತಕ್ಕೆ (-24.4 ಮತ್ತು -7.4 ಪ್ರತಿಶತ) ಸಾಕ್ಷಿಯಾದವು. ಮೂರನೆಯ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿನ ಸಾಧನೆ ಚೇತರಿಕೆ ಕಾಣಲಿಲ್ಲ.

ಹಿಂದಿನ ವರ್ಷದ ತ್ರೈಮಾಸಿಕಗಳಲ್ಲಿ ಕ್ರಮವಾಗಿ ಅಂದಾಜು ಶೇ.0.5ರಷ್ಟು ಮತ್ತು ಶೇ.1.6ರಷ್ಟು ಕಡಿಮೆ 3.3 ಮತ್ತು 3.0 ಪ್ರತಿಶತದಷ್ಟು ಕಂಡಿದೆ. ಇದಲ್ಲದೆ, ಈ ದರಗಳು ಹಲವು ಎಚ್ಚರಿಕೆಗಳೊಂದಿಗೆ ಬರುತ್ತವೆ ಎಂದರು.

ಕಳೆದ ವರ್ಷ ಸಾಂಕ್ರಾಮಿಕ ರೋಗದ ಮೊದಲ ಅಲೆ ಕಡಿಮೆಯಾದಾಗ, ಹಣಕಾಸು ಸಚಿವರು ಮತ್ತು ಮುಖ್ಯ ಆರ್ಥಿಕ ಸಲಹೆಗಾರರು ಚೇತರಿಕೆಯ ಕಥೆಗಳನ್ನು ಮಾರಾಟ ಮಾಡಲು ಶುರು ಮಾಡಿದರು. ಬೇರೆ ಯಾರೂ ದನಿ ಎತ್ತದೆ ಇದ್ದಾಗ ಅವರು ಮಾತ್ರ, 'ಆರ್ಥಿಕತೆಯಲ್ಲಿ ಹಸಿರಿನ ಚಿಗುರುಗಳು ಕಾಣುತ್ತಿವೆ' ಎಂದು 'ವಿ' ಆಕಾರದ ಚೇತರಿಕೆಯ ಭವಿಷ್ಯ ನುಡಿದರು. ಇದು ಸುಳ್ಳು ಕಥೆ ಮತ್ತು ನಾವು ನಮ್ಮ ಬಲವಾದ ನಗದು ಮೊತ್ತ ವ್ಯಕ್ತಪಡಿಸಿದ್ದೆವು. ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ ಎಂಬ ಎಚ್ಚರಿಕೆ ಸಹ ನೀಡಿದ್ದೆವು ಎಂದು ಹರಿಹಾಯ್ದರು.

ಇದನ್ನೂ ಓದಿ: ಜಾಗತಿಕ ಸಾಂಕ್ರಾಮಿಕ ಒಪ್ಪಂದ ಮಾಡಿಕೊಳ್ಳುವ ಸಮಯ ಬಂದೊದಗಿದೆ: ವಿಸ್ವಾಸಂ ಮುಖ್ಯಸ್ಥ ಟೆಡ್ರೊಸ್ ಕರೆ

ಆರ್ಥಿಕತೆಗೆ ಬೇಕಾಗಿರುವುದು ವ್ಯಾಪಕವಾದ ಸರ್ಕಾರಿ ಖರ್ಚು. ಬಡವರಿಗೆ ನೇರ ಹಣ ವರ್ಗಾವಣೆ ಮತ್ತು ಉಚಿತ ಪಡಿತರ ವಿತರಣೆ ಸೇರಿದಂತೆ ಉತ್ತೇಜನೆಯ ಬಲವಾದ ಪ್ರಮಾಣ ಎಂದು ತಿಳಿಸಿದ್ದೆವು. ನಮ್ಮ ಮನವಿ ಕಿವುಡು ಕಿವಿಗೆ ಹಾಕಿಕೊಳ್ಳಲಿಲ್ಲ. ಇದರ ಫಲಿತಾಂಶವು ಋಣಾತ್ಮಕ ಬೆಳವಣಿಗೆಯಾಗಿದೆ, ಮೈನಸ್ ಶೇ.7.3ರಷ್ಟಿದೆ ಎಂದು ಹೇಳಿದರು

2020-21ರಲ್ಲಿ ನಡೆದದ್ದನ್ನು 2021-22ರಲ್ಲಿ ಪುನರಾವರ್ತಿಸಬಾರದು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ತನ್ನ ಕಮಿಷನ್​ ಮತ್ತು ಲೋಪಗಳ ದೋಷಗಳನ್ನು ಒಪ್ಪಿಕೊಳ್ಳಬೇಕು. ಅದರ ನೀತಿಗಳನ್ನು ಹಿಮ್ಮೆಟ್ಟಿಸಬೇಕು. ಅರ್ಥಶಾಸ್ತ್ರಜ್ಞರು ಹಾಗೂ ಪ್ರತಿಪಕ್ಷಗಳ ಸಲಹೆಯನ್ನು ಆಲಿಸಬೇಕು ಎಂದು ಚಿದಂಬರಂ ತಾಕೀತು ಮಾಡಿದರು.

ಖ್ಯಾತ ಅರ್ಥಶಾಸ್ತ್ರಜ್ಞರ ಉತ್ತಮ ಸಲಹೆಯನ್ನು ಸರ್ಕಾರ ಕಡೆಗಣಿಸಿದೆ. ಖ್ಯಾತ ಸಂಸ್ಥೆಗಳ ಸೂಚನೆಗಳನ್ನು ಇಲ್ಲಿಯತನಕ ನಿರಾಕರಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರು ಹಣವನ್ನು ಮುದ್ರಿಸಲು ಮತ್ತು ಖರ್ಚು ಹೆಚ್ಚಿಸಲು ಕರೆ ನೀಡಿದ್ದನ್ನು ನಾವು ಗಮನಿಸಬಹುದು. ಆದರೂ, ನಿನ್ನೆ ಬೆಳಗ್ಗೆಯಷ್ಟೇ, ಹಣಕಾಸು ಸಚಿವರು ಕೆಲ ಪತ್ರಿಕೆಗಳಿಗೆ ಸುದೀರ್ಘ ಸಂದರ್ಶನವೊಂದನ್ನು ನೀಡಿದರು.

ಈ ವಿಷಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ, 'ಹಣಕಾಸಿನ ಕೊರತೆಯ ಬಗ್ಗೆ ಚಿಂತೆ ಮಾಡುವ ಸಮಯ ಇದಲ್ಲ. ಹಾಗಾದರೆ, ಕೊರತೆ ಶೇ.6.5ರಷ್ಟಕ್ಕೆ ವಿಸ್ತರಿಸಿದರೆ ಏನು? ನಾವು ಕಳೆದ ವರ್ಷ ಕಳೆದುಕೊಂಡಂತೆ ಮತ್ತೊಂದು ವರ್ಷವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.

ಆದರೆ, ಸರ್ಕಾರ ಪ್ರತಿಕ್ರಿಯಿಸುವ ರೀತಿ ನೋಡಿದರೇ ನಾವು ಇನ್ನೊಂದು ವರ್ಷವನ್ನು ಹೀಗೆ ಕಳೆದುಕೊಳ್ಳಲಿದ್ದೇವೆ. ಸರ್ಕಾರಕ್ಕೆ ನನ್ನ ಸಲಹೆ ಧೈರ್ಯದಿಂದ ಮುನ್ನಡೆದು ಖರ್ಚು ಮಾಡುವುದು. ಎರವಲು ಅಥವಾ ಹಣ ಮುದ್ರಿಸಿ ಖರ್ಚು ಮಾಡಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.