ನವದೆಹಲಿ: ಪ್ರಸ್ತುತ ಆರ್ಥಿಕತೆಯು 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ-23.9ರಷ್ಟು ಕುಗ್ಗಿದ ಬೆನ್ನಲ್ಲೇ ವಿತ್ತೀಯ ಕೊರತೆ ಏರಿಕೆ ಆಗಲಿದೆ ಎಂದು ದಲ್ಲಾಳಿಗಳು ಅಂದಾಜಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಅಡೆತಡೆಗಳು ದೀರ್ಘಾವಧಿಯ ಸಂಕಷ್ಟಕ್ಕೆ ಸಜ್ಜಾಗಿವೆ. ಸರ್ಕಾರದ ಒಟ್ಟು ಆದಾಯ ಮತ್ತು ಖರ್ಚಿನ ನಡುವಿನ ಅಂತರವು 2021ರ ಹಣಕಾಸು ವರ್ಷದಲ್ಲಿ 14.6 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ 7.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕೊರತೆಯ ಸಂಖ್ಯೆ ವಿಶ್ಲೇಷಿಸುವ ದಲ್ಲಾಳಿಗಳು ತಿಳಿಸಿದ್ದಾರೆ.
ಏಪ್ರಿಲ್-ಜುಲೈ ಅವಧಿಯಲ್ಲಿ ದೇಶದ ಹಣಕಾಸಿನ ಕೊರತೆಯು ಬಜೆಟ್ ಅಂದಾಜಿನ ಶೇ.103.1ಕ್ಕೆ ವಿಸ್ತರಿಸಿದೆ ಎಂದು ಈ ತಿಂಗಳ ಆರಂಭದಲ್ಲಿ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಹೇಳಿತ್ತು. ತಗ್ಗಿದ ತೆರಿಗೆ ಸಂಗ್ರಹ ಮತ್ತು ಕೋವಿಡ್ -19 ಪರಿಹಾರಕ್ಕಾಗಿ ಹೆಚ್ಚಿನ ಖರ್ಚುಗಳು ಹಣಕಾಸಿನ ಕೊರತೆಯು 2021 ಹಣಕಾಸು ವರ್ಷದ ಬಜೆಟ್ ಗುರಿಗಳನ್ನು ದ್ವಿಗುಣಗೊಳಲಿದೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಸ್ಪಷ್ಟ ಸೂಚಕಗಳಾಗಿವೆ ಎಂದು ಅಂದಾಜಿಸಿದ್ದಾರೆ.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ನ ಇಕೋಸ್ಕೋಪ್ ವರದಿಯ ಪ್ರಕಾರ, ಈ ವರ್ಷ ಶೇ 7.6ರಷ್ಟು ಹಣಕಾಸಿನ ಕೊರತೆಯು ಒಟ್ಟು ಸ್ವೀಕೃತಿಯಲ್ಲಿ ಶೇ.18ರಷ್ಟು ವರ್ಷದಿಂದ ವರ್ಷಕ್ಕೆ ಸಂಕೋಚನ ಮತ್ತು ಒಟ್ಟು ಖರ್ಚಿನಲ್ಲಿ ಶೇ.8ರಷ್ಟು ಬೆಳವಣಿಗೆ ಆಗುತ್ತಿದೆ.
ತುರ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹೂಡಿಕೆಯ ವಾತಾವರಣವನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯಲ್ಲಿ ಬೇಡಿಕೆಯನ್ನು ಸೃಜಿಸಲು ನೆರವಾಗುವಂತೆ ಸರ್ಕಾರದ ಖರ್ಚು ಯಾವಾಗಲೂ ಅಧಿಕವಾಗುತ್ತದೆ. ಆದರೆ ಸಾಂಕ್ರಾಮಿಕ ಸಮಯದಲ್ಲಿ ಈ ವರ್ಷದ ಆತಂಕಕಾರಿ ಅಂಶಗಳು ಕಂಡುಬಂದಿವೆ. ಈ ವರ್ಷ ಆರ್ಥಿಕ ಖರ್ಚು ಏರಿಕೆಯೊಂದಿಗೆ ಬಂಡವಾಳ ವೆಚ್ಚವು ಕುಸಿತದ ಜತೆಗೆ ಸರ್ಕಾರದ ಖರ್ಚು ಆದಾಯ (ಅಥವಾ ಪ್ರಸ್ತುತ) ಖರ್ಚಿನತ್ತ ಹೆಚ್ಚು ಓರೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸರ್ಕಾರದ ಆದಾಯದ ಖರ್ಚು (ಸಂಬಳ ಮತ್ತು ಪಿಂಚಣಿ ಮಸೂದೆ ಪಾವತಿ) 2021ರ ಹಣಕಾಸು ವರ್ಷದಲ್ಲಿ ಶೇ.10ಕ್ಕೆ ಬೆಳೆಯಬಹುದಾದರೂ ಬಂಡವಾಳ ಖರ್ಚು ಶೇ.2-3ರಷ್ಟು ಕಡಿಮೆ ಆಗಬಹುದು ಎಂದು ದಲ್ಲಾಳಿ ವರದಿ ತೋರಿಸಿದೆ.
ಈ ಪ್ರವೃತ್ತಿ ಮುಂದುವರಿದರೆ ಉಳಿದ ಎಂಟು ತಿಂಗಳ 2021ರ ಹಣಕಾಸು ವರ್ಷದಲ್ಲಿ ಬಂಡವಾಳ ಖರ್ಚು ಮತ್ತಷ್ಟು ಉಂಟಾಗಬಹುದು. ಶೇ.5ರಷ್ಟು ಕಡಿಮೆಯಾಗಬಹುದು (ಏಪ್ರಿಲ್-ಜುಲೈ 20ಕ್ಕೆ ಹೋಲಿಸಿದರೆ ಶೇ 3.9ರಷ್ಟು ಬೆಳವಣಿಗೆ). ಮತ್ತೊಂದೆಡೆ ಆದಾಯದ ಖರ್ಚು ಆಗಸ್ಟ್ -20-ಮಾರ್ಚ್ 21ರ ಅವಧಿಯಲ್ಲಿ ಶೇ 8ರಷ್ಟು ಬೆಳೆಯುತ್ತದೆ (ಏಪ್ರಿಲ್-ಜುಲೈ 20ಕ್ಕೆ ಹೋಲಿಸಿದರೆ ಶೇ 12.2ರಷ್ಟು ವೃದ್ಧಿ).