ನವದೆಹಲಿ: ಕೋವಿಡ್ ಸಾಂಕ್ರಾಮಿಕ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವದ ಹಿನ್ನೆಲೆಯಲ್ಲಿ ಜಾಗತಿಕ ಸಾಲವು 2020ರಲ್ಲಿ 32 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿ 290.6 ಟ್ರಿಲಿಯನ್ ಡಾಲರ್ಗೆ ತಲುಪಿದೆ ಎಂದು ಮೂಡಿಸ್ ಹೇಳಿದೆ.
ಆಫ್ರಿಕಾ ಮತ್ತು ಕೆರಿಬಿಯನ್ ದೇಶಗಳಲ್ಲಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಉತ್ಪಾದಕತೆಯ ಕುಸಿತವು ಆ ದೇಶಗಳ ಸಾಲದ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಉತ್ಪಾದಕತೆ ಮತ್ತು ಮಾನವ ಸಂಪನ್ಮೂಲ ತೊಂದರೆಗಳ ಕಾಣುತ್ತಿವೆ. ಸಾಲಗಳ ಮರುಪಾವತಿ ಸಾಮರ್ಥ್ಯವು ಒಂದು ದೊಡ್ಡ ಸವಾಲಾಗಿ ಉಳಿದಿದೆ ಎಂದು ಹೇಳಿದೆ.
ಓದಿ: ಕೋವಿನ್ ಲಸಿಕೆ ಪ್ರಮಾಣಪತ್ರ ಅಂತಾರಾಷ್ಟ್ರೀಯ ಪ್ರಯಾಣಿಕರ ಪಾಸ್‌ಪೋರ್ಟ್‌ಗೆ ಲಿಂಕ್
ಕೋವಿಡ್ ಬಿಕ್ಕಟ್ಟಿನಿಂದ ವಿಶ್ವದ ರಾಷ್ಟ್ರಗಳ ಪುನರುತ್ಥಾನವು ಗೊಂದಲಮಯವಾಗಿರುತ್ತದೆ. ಅಮೆರಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದ್ದಂತೆ, ಸಂಪೂರ್ಣ ಸೇವಾ ಆಧಾರಿತ ದಕ್ಷಿಣ ಯುರೋಪಿಯನ್ ದೇಶಗಳು ಹಿಂದೆ ಉಳಿಯುತ್ತವೆ. ಅನುತ್ಪಾದಕ ಸಾಲ (ಎನ್‌ಪಿಎಲ್) ಏರಿಕೆಯ ಹೊರತಾಗಿಯೂ, ಈಗಾಗಲೇ ಸಾಕಷ್ಟು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ ಬ್ಯಾಂಕಿಂಗ್ ವ್ಯವಸ್ಥೆಯು ಸದೃಢವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಮೂಡಿಸ್ ತಿಳಿಸಿದೆ.
ಒಟ್ಟು ಸಾಲದ ಸರ್ಕಾರದ ಪಾಲು 2020ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಜಾಗತಿಕ ಜಿಡಿಪಿಯ ಶೇ 105ಕ್ಕೆ ಬೆಳೆಯುವ ನಿರೀಕ್ಷೆಯಿದೆ. ಎರಡನೆಯ ಮಹಾಯುದ್ಧದ ನಂತರ ಇದೇ ಮೊದಲ ಬಾರಿಗೆ ಸರ್ಕಾರದ ಸಾಲವು ಈ ಮಟ್ಟವನ್ನು ತಲುಪಿದೆ ಎಂದು ಮೂಡಿಸ್ ವರದಿ ತಿಳಿಸಿದೆ.