ETV Bharat / business

ಕೋವಿಡ್​ 2ನೇ ಅಲೆ ನಡುವೆ ಆರ್ಥಿಕ ಹಿಂಜರಿತದ ಭೀತಿ.. ಆದರೂ ಚೇತರಿಕೆ ನಿರೀಕ್ಷೆ!

ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಪ್ರಕಟಿಸಿದ ಏಪ್ರಿಲ್ 2021 ರ 'ಮಾಸಿಕ ಆರ್ಥಿಕ ವಿಮರ್ಶೆ’ ಈ ಅಂಶದ ಮೇಲೆ ಬೆಳಕು ಚೆಲ್ಲಿದೆ. ಎರಡನೇ ತರಂಗದ ಮಧ್ಯೆ ಆರ್ಥಿಕ ಸ್ಥಿತಿಸ್ಥಾಪಕತ್ವದ ಬೆಳ್ಳಿ ಪರದೆ ಮೂಡುವಂತೆ ಮಾಡಿದೆ ಎಂದು ಹೇಳಿದೆ..

ಕೋವಿಡ್​ 2ನೇ ಅಲೆ ನಡುವೆ ಆರ್ಥಿಕ ಹಿಂಜರಿತದ ಭೀತಿ.. ಆದರೂ ಚೇತರಿಕೆ ನಿರೀಕ್ಷೆ!
ಕೋವಿಡ್​ 2ನೇ ಅಲೆ ನಡುವೆ ಆರ್ಥಿಕ ಹಿಂಜರಿತದ ಭೀತಿ.. ಆದರೂ ಚೇತರಿಕೆ ನಿರೀಕ್ಷೆ!
author img

By

Published : May 7, 2021, 3:59 PM IST

ನವದೆಹಲಿ : ತೀವ್ರ ಕೋವಿಡ್ ಬಿಕ್ಕಟ್ಟಿನ ಮಧ್ಯೆ ರಾಜ್ಯಗಳು ಲಾಕ್‌ಡೌನ್‌ಗಳಿಗೆ ಮುಂದಾಗುತ್ತಿವೆ. ಕೋವಿಡ್​ 2ನೇ ಅಲೆ ಏಪ್ರಿಲ್-ಜೂನ್ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಪ್ರಕಟಿಸಿದ ಏಪ್ರಿಲ್ 2021ರ 'ಮಾಸಿಕ ಆರ್ಥಿಕ ವಿಮರ್ಶೆ’ ಈ ಅಂಶದ ಮೇಲೆ ಬೆಳಕು ಚೆಲ್ಲಿದೆ. ಎರಡನೇ ತರಂಗದ ಮಧ್ಯೆ ಆರ್ಥಿಕ ಸ್ಥಿತಿ ಸ್ಥಾಪಕತ್ವದ ಬೆಳ್ಳಿ ಪರದೆ ಮೂಡಿದೆ ಎಂದು ಇದೇ ವೇಳೆ ಹೇಳಿದೆ.

"COVID-19ರ ಎರಡನೇ ಅಲೆಯು 2021-22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗೆ ತೊಂದರೆಯಾಗಿದೆ. ಆದಾಗ್ಯೂ, ಮೊದಲ ಅಲೆಗೆ ಹೋಲಿಸಿದರೆ ಇದು ದೊಡ್ಡ ಹೊಡೆತ ನೀಡಿಲ್ಲವಾದರೂ ಲಾಕ್​​​ಡೌನ್​ ಮಾಡಿದರೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಗಳನ್ನ ಅಲ್ಲಗಳೆಯುವಂತಿಲ್ಲ.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜಾಗತಿಕ ಆರ್ಥಿಕತೆಯು ಮತ್ತಷ್ಟು ಚೇತರಿಸಿದೆ. ಇತ್ತೀಚೆಗಷ್ಟೇ ಚೇತರಿಕೆಯ ಹಳಿಗೆ ಮರಳುತ್ತಿರುವ ಭಾರತದಲ್ಲಿ ಎರಡನೇ ಅಲೆ ದೊಡ್ಡ ಹೊಡೆತ ನೀಡುವ ಸಾಧ್ಯತೆಗಳಿವೆ. ಈ ಬಾರಿ ಸಾಮಾನ್ಯ ಮಾನ್ಸೂನ್ ಮುನ್ಸೂಚನೆ ಹಿನ್ನೆಲೆ ದಾಖಲೆಯ ಆಹಾರ ಧಾನ್ಯ ಉತ್ಪಾದನೆಯ ನಿರೀಕ್ಷೆ ಹೊಂದಲಾಗಿದೆ.

ಟ್ರ್ಯಾಕ್ಟರ್ ಮಾರಾಟದಂತಹ ಗ್ರಾಮೀಣ ಬೇಡಿಕೆಯ ಸೂಚಕಗಳು ಮಾರ್ಚ್ 2020ರಲ್ಲಿ ಕಡಿಮೆ ನೆಲೆಗೆ ಹೋಲಿಸಿದರೆ ಶೇ.172 ಮತ್ತು ಶೇ.36ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕೈಗಾರಿಕಾ ಉತ್ಪಾದನೆಯು ಮಿಶ್ರ ಪ್ರವೃತ್ತಿಯನ್ನು ತೋರಿಸಿದೆ.

ಫೆಬ್ರವರಿ 2021ರಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಜನವರಿ 2021ಕ್ಕೆ ಹೋಲಿಸಿದರೆ 3.6 ಶೇಕಡಾ (YOY) ಮತ್ತು 3.9ರಷ್ಟು ವಿಶಾಲ ಆಧಾರಿತ ಕುಸಿತವನ್ನು ದಾಖಲಿಸಿದರೆ, ಎಂಟು - ಕೋರ್ ಸೂಚ್ಯಂಕವು 6.8% (YOY) ಬೆಳವಣಿಗೆಯನ್ನು ದಾಖಲಿಸಿದೆ. ಫೆಬ್ರವರಿ 2021 ಕ್ಕೆ ಹೋಲಿಸಿದರೆ ಮಾರ್ಚ್ 2021 ಮತ್ತು ಶೇ 11.1ರಷ್ಟಿದೆ ಎಂದು ಹೇಳಿದೆ.

2020-21ರ ಹಣಕಾಸು ವರ್ಷ ಹಾಗೂ 2019-20ನೇ ಹಣಕಾಸು ವರ್ಷದಲ್ಲಿ 0.4 ಶೇಕಡಾ ಬೆಳವಣಿಗೆಗೆ ಹೋಲಿಸಿದರೆ ಕೋರ್ ವಲಯವು ಶೇ.7ರಷ್ಟು ಸಂಕುಚಿತಗೊಂಡಿದೆ. ರಸಗೊಬ್ಬರವು ಏಕೈಕ ಬೆಳೆಯುತ್ತಿರುವ ವಲಯವಾಗಿದೆ ಮತ್ತು ದ್ವಿತೀಯಾರ್ಧದಲ್ಲಿ ವಿದ್ಯುತ್ ರಂಗ ಸ್ಥಿರವಾಗಿ ಚೇತರಿಕೆ ಕಾಣುತ್ತಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.