ETV Bharat / business

ಕೊರೊನಾದಿಂದ ವಿಶ್ವ ಆರ್ಥಿಕತೆಗೆ 14 ಕೋಟಿ 79 ಲಕ್ಷ ಕೋಟಿ ನಷ್ಟ!

ವಿಶ್ವಾಂದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

author img

By

Published : Mar 10, 2020, 10:40 AM IST

Corona virus effect on economy ಜಾಗತಿಕ ಆರ್ಥಿಕತೆಗೆ 2 ಟ್ರಿಲಿಯನ್ ಡಾಲರ್ ನಷ್ಟ
ಕೊರೊನಾ ವೈರಸ್

ನವದೆಹಲಿ : ವಿಶ್ವಾಂದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಜಾಗತಿಕ ಆರ್ಥಿಕತೆಗೆ ಸುಮಾರು 2 ಟ್ರಿಲಿಯನ್ ಡಾಲರ್​ಗಳಷ್ಟು ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 14ಕೋಟಿ 79 ಲಕ್ಷ ಕೋಟಿ ರೂ ನಷ್ಟ ಆಗಲಿದೆ ಎಂದು ಅಂದಾಜಿಸಿದೆ. ಇದರಿಂದ ಜಾಗತಿಕ ವಾರ್ಷಿಕ ಬೆಳವಣಿಗೆ ಶೇ. 2.5 ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಯುಎನ್‌ನ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.

COVID-19 ದುರಂತ ಮಾನವ ಪರಿಣಾಮಗಳ ಹೊರತಾಗಿಯೂ 2020 ರಲ್ಲಿ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಿದೆ ಎಂದು ಯುಎನ್ ಸಂಸ್ಥೆ ಹೇಳಿದೆ.

ಓದಿ : ಕೊರಾನಾ ಭೀತಿಗೆ ಕೆಲವೇ ಗಂಟೆಯಲ್ಲಿ ಭಾರತೀಯರ 5 ಲಕ್ಷ ಕೋಟಿ ರೂ. ಸಂಪತ್ತು ಮಂಗಮಾಯ..!

ಜಾಗತಿಕ ಆದಾಯದಲ್ಲಿ 2 ಟ್ರಿಲಿಯನ್ ಡಾಲರ್​ ಕೊರೆತ ಉಂಟಾಗಿದ್ದು, ಚೀನಾ ಹೊರತುಪಡಿಸಿ ಉಳಿದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 220 ಬಿಲಿಯನ್ ಡಾಲರ್​ ನಷ್ಟವಾಗಿದೆ. ತೈಲ ರಫ್ತು ಮಾಡುವ ದೇಶಗಳು ಅತೀ ಹೆಚ್ಚು ಆರ್ಥಿಕ ಕುಸಿತವನ್ನು ಅನುಭವಿಸಲಿವೆ. ಇವುಗಳಿಗಿಂತ ಶೇ. 1ಕ್ಕಿಂತ ಹೆಚ್ಚು ನಷ್ಟ ಇತರ ಸರಕು ರಫ್ತುದಾರ ದೇಶಗಳಿಗೆ ಆಗಲಿದೆ.

ಕೆನಡಾ, ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಂತ ಪ್ರದೇಶಗಳಲ್ಲಿ ಶೇ. 0.7 ರಿಂದ 0.9 ರಷ್ಟು ಬೆಳವಣಿಗೆಯ ಕುಸಿತ ಸಂಭವಿಸುವ ಸಾಧ್ಯತೆಯಿದೆ.

ಓದಿ : ಮುಂದುವರಿದ ಕಚ್ಚಾ ತೈಲ ಬೆಲೆ ಇಳಿಕೆ ಸಮರ: ಮತ್ತೆ ಕಡಿಮೆಯಾದ ದರ

ಭಾರತಕ್ಕೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮ ಸುಮಾರು 348 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿ ಉತ್ಪಾದನೆಯ ಮಂದಗತಿಯು ವಿಶ್ವ ವ್ಯಾಪಾರಕ್ಕೆ ಹೊಡೆತ ನೀಡಲಿದ್ದು, ರಫ್ತು ಪ್ರಮಾಣದಲ್ಲಿ 50 ಬಿಲಿಯನ್ ಡಾಲರ್​ ಇಳಿಕೆಗೆ ಕಾರಣವಾಗಬಹುದೆಂದು ಯುಎನ್‌ಸಿಟಿಎಡಿ ಅಂದಾಜಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.