ETV Bharat / business

ಕೊರೊನಾ ಕಾಡ್ಗಿಚ್ಚಿಗೆ ಬೆಣ್ಣೆಯಂತೆ ಕರಗಲಿದೆ ಜಾಗತಿಕ ಆರ್ಥಿಕತೆ, ಚೀನಾ ಚಿಂತಾಜನಕ!

author img

By

Published : Feb 7, 2020, 8:43 PM IST

ಮಾರಣಾಂತಿಕವಾಗಿ ಕೊರೊನಾ ವೈರಾಣುವನ್ನು ನಿಯಂತ್ರಣಕ್ಕೆ ತರದೇ ಇದ್ದರೆ ಚೀನಾ ಮಾತ್ರವಲ್ಲ, ಜಗತ್ತಿನ ಎಲ್ಲ ವ್ಯಾಪಾರ ಚಟುವಟಿಕೆಗಳು ಮುಖ್ಯವಾಗಿ ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಂಬಂಧಿತ ವಹಿವಾಟಿನ ಮೇಲೆ ಆಘಾತಕಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Coronavirus
ಕೊರೊನಾ

ನವದೆಹಲಿ: ಕೊರೊನಾ ವೈರಸ್ ಜಗತ್ತಿನಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವುದರ ತತ್ಪರಿಣಾಮ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಚೀನಾದಿಂದ ತಯಾರಾಗುವ ಯಂತ್ರಗಳ ಬಿಡಿಭಾಗಗಳು ದಕ್ಷಿಣ ಕೊರಿಯಾದ ಕಡಲ ತೀರ ತಲುಪಲು ಸಾಧ್ಯವಾಗದ ಕಾರಣ, ಸಿಯೋಲ್ ಮೂಲದ ಹ್ಯುಂಡೈ ಕಂಪನಿಯು ತನ್ನ ಹದಿಮೂರು ವಾಹನ ತಯಾರಿಕಾ ಘಟಕಗಳ ಪೈಕಿ ಏಳು ಘಟಕಗಳನ್ನು ಸ್ಥಗಿತಗೊಳಿಸಿದೆ.

ಆಂಧ್ರಪ್ರದೇಶದಿಂದ ಮೆಣಸಿನಕಾಯಿ ಮತ್ತು ಮಹಾರಾಷ್ಟ್ರದಿಂದ ಹತ್ತಿಯಂತಹ ವಿವಿಧ ರಫ್ತು ಉತ್ಪನ್ನಗಳನ್ನು ಚೀನಾ ಆಮದಿಗೆ ನಿರಾಕರಿಸಿದ ಕಾರಣ ಸ್ಥಳೀಯ ರೈತರ ಮತ್ತು ಕೈಗಾರಿಕೆಗಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ.

ಚೀನಾ, ಮ್ಯಾನ್ಮಾರ್ ಮತ್ತು ಆಗ್ನೇಯ ಏಷ್ಯಾದ ದೇಶಗಳಿಂದ ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳ ಆಮದನ್ನು ಈಶಾನ್ಯ ರಾಜ್ಯ ಮಣಿಪುರ ನಿಷೇಧಿಸಿದೆ. ಈ ರಾಷ್ಟ್ರಗಳು ಎಫ್​ಎಸ್​ಎಸ್​ಎಐ ನಿಯಮಗಳು ಪಾಲಿಸದಿರುವುದೇ ನಿಷೇಧಕ್ಕೆ ಕಾರಣವೆಂದು ಸ್ಪಷ್ಟನೆ ನೀಡಿದೆ.

ಮಾರಣಾಂತಿಕವಾಗಿ ಹಬ್ಬುತ್ತಿರುವ ಈ ವೈರಾಣು ನಿಯಂತ್ರಣ ಬರದಿದ್ದಲ್ಲಿ ಚೀನಾ ಮಾತ್ರವಲ್ಲ, ಜಗತ್ತಿನ ಎಲ್ಲ ವ್ಯಾಪಾರ ಚಟುವಟಿಕೆಗಳು ಮುಖ್ಯವಾಗಿ ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಂಬಂಧಿತ ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ವಿತ್ತೀಯ ನೀತಿಯ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು, ಆರ್ಥಿಕತೆಯ ಮೇಲೆ ವೈರಸ್‌ನ ಪ್ರಭಾವವನ್ನು ಎದುರಿಸಲು ಆಕಸ್ಮಿಕ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ಎಚ್‌ಐಎಸ್ ಮಾರ್ಕೆಟ್ ವರದಿಯ ಪ್ರಕಾರ, 2003ರಲ್ಲಿನ ಸಾರ್ಸ್ (ತೀವ್ರ ಉಸಿರಾಟದ ಸಿಂಡ್ರೋಮ್) ವೈರಸ್​ಗಿಂತ ಕೊರೊನಾ ಅಪಾಯಕಾರಿಯಾಗಿದೆ. ಇದು ಏಕಾಏಕಿ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಋಣಾತ್ಮಕ ಪರಿಣಾಮ ಬೀರುತ್ತಿದೆ.

ಸಾರ್ಸ್​ ಸೋಂಕು ಹಬ್ಬಿದ್ದ ಸಮಯದಲ್ಲಿ ಚೀನಾ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿತ್ತು. ಆಗ ವಿಶ್ವದ ಜಿಡಿಪಿಯಲ್ಲಿ ಕೇವಲ ಶೇ 4.2ರಷ್ಟು ಚೀನಾದ ಜಿಡಿಪಿ ಇತ್ತು. ಚೀನಾ ಈಗ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದ ಜಿಡಿಪಿಯ ಶೇ 16.3ರಷ್ಟಿದೆ. ಆದ್ದರಿಂದ, ಚೀನಾದ ಆರ್ಥಿಕತೆಯ ಯಾವುದೇ ಕುಸಿತವು ಪ್ರಪಂಚದಾದ್ಯಂತ ಏರಿಳಿತದ ಅಲೆಗಳಿಗೆ ಕಾರಣವಾಗಲಿದೆ ಎಂದು ಎಚ್​ಐಎಸ್​ ವರದಿ ಹೇಳಿದೆ.

ಏಷ್ಯಾದ ದೇಶಗಳಲ್ಲಿ ಹೆಚ್ಚುವರಿಯಾಗಿ ಪೆಸಿಫಿಕ್ ಪ್ರದೇಶ, ಮಧ್ಯಪ್ರಾಚ್ಯ ತೈಲಗಳ ಮೇಲೆ ಚೀನಾ ಹೆಚ್ಚು ಅವಲಂಬಿತವಾಗಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ. 2019ರಲ್ಲಿ ಚೀನಾದ ತೈಲ ಬೇಡಿಕೆ ನಿತ್ಯ 13.9 ಮಿಲಿಯನ್​ ಬ್ಯಾರೆಲ್​ನಷ್ಟು ಇತ್ತು. ಇದು ಜಾಗತಿಕ ಮಾರುಕಟ್ಟೆಯ ಶೇ 14ರಷ್ಟು ಬೇಡಿಕೆಯಾಗಿದೆ. 2003ರಲ್ಲಿ ನಿತ್ಯ 5.6 ಮಿಲಿಯನ್ ಬ್ಯಾರೆಲ್​​ನಷ್ಟು ಅಂದರೇ ಶೇ 7ರಷ್ಟಿತ್ತು. ಹೀಗಾಗಿ, ಚೀನಾದ ಪ್ರತಿಯೊಂದು ಆರ್ಥಿಕ ವಿದ್ಯಮಾನ ವಿಶ್ವದ ಯಾವುದೇ ರಾಷ್ಟ್ರದ ಮೇಲೋ ಒಂದಿಲ್ಲೊಂದು ರೀತಿಯಲ್ಲಿ ಕರಿನೆರಳು ಬೀರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.