ನವದೆಹಲಿ: ಕೊರಾನಾ ಹಾಗೂ ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ದೇಶದ ಎಂಟು ಕೈಗಾರಿಕಾ ವಲಯಗಳ ಸೂಚ್ಯಂಕದ ಬೆಳವಣಿಗೆ ದರವು ಏಪ್ರಿಲ್ ಮಾಸಿಕದಲ್ಲಿ ದಾಖಲೆಯ ಶೇ 38.1ರಷ್ಟು ಕುಸಿತ ಕಂಡುಬಂದಿದೆ.
ಮಾರ್ಚ್ ತಿಂಗಳಲ್ಲಿ ಶೇ 9ರಷ್ಟು ಕುಸಿತಕ್ಕೆ ಹೋಲಿಸಿದರೆ ಏಪ್ರಿಲ್ ನಲ್ಲಿ ಶೇ 38.1ರಷ್ಟು ಇಳಿಕೆಯಾಗಿದೆ. ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‍ಡೌನ್ ಘೋಷಿಸಲಾಗಿತ್ತು. ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.
ಕಲ್ಲಿದ್ದಲು, ಉಕ್ಕು, ನೈಸರ್ಗಿಕ ಅನಿಲ, ಸಂಸ್ಕರಣಾಗಾರ, ಸಿಮೆಂಟ್, ಕಚ್ಚಾ ತೈಲ, ವಿದ್ಯುತ್, ಗಣಿಗಾರಿಕೆ ಹಾಗೂ ಗೊಬ್ಬರ ಕೈಗಾರಿಕೆಗಳು ಉತ್ಪಾದನೆಯಲ್ಲಿ ಸಾಕಷ್ಟು ಕುಸಿತವನ್ನು ಅನುಭವಿಸಿವೆ. ಮಾರ್ಚ್ ತಿಂಗಳಲ್ಲಿ ಇವುಗಳ ಶೇ 9ರಷ್ಟಿತ್ತು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020ರ ಏಪ್ರಿಲ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದ ಕಲ್ಲಿದ್ದಲು, ಸಿಮೆಂಟ್, ಉಕ್ಕು, ನೈಸರ್ಗಿಕ ಅನಿಲ, ಸಂಸ್ಕರಣಾಗಾರ, ಕಚ್ಚಾ ತೈಲ ಇತ್ಯಾದಿ ಉತ್ಪಾದನೆಗಳು ಗಣನೀಯ ಪ್ರಮಾಣದ ಉತ್ಪಾದನಾ ನಷ್ಟವನ್ನು ಅನುಭವಿಸಿದವು ಎಂದು ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.