ನವದೆಹಲಿ: ರೈತರು ವಿವಾದಿತ ನೂತನ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ನಡೆಸುತ್ತಿರುವ ಆಂದೋಲನ ಬೆಂಬಲಿಸಿ ಕಾಂಗ್ರೆಸ್ ಸಂಸದರು ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬಣ್ಣದ ನಿಲುವಂಗಿ ಧರಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021- 22ನೇ ಸಾಲಿನ ಕೇಂದ್ರ ಬಜೆಟ್‌ಅನ್ನು ಸಂಸತ್‌ನಲ್ಲಿ ಮಂಡಿಸುತ್ತಿದ್ದಾರೆ.
ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಮತ್ತು ಗುರ್ಜೀತ್ ಸಿಂಗ್ ಆಜ್ಲಾ ಅವರು ಮೂರು ಫಾರ್ಮ್ ಮಸೂದೆಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಸಂಸತ್ತಿಗೆ ಕಪ್ಪು ಬಣ್ಣದ ನಿಲುವಂಗಿ ಧರಿಸಿದ್ದಾರೆ. ದೆಹಲಿ ಗಡಿಯಲ್ಲಿ ಈಗ ಎರಡು ತಿಂಗಳುಗಳಿಂದ ಸಾವಿರಾರು ರೈತರು ಈ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.