ETV Bharat / business

ಕೊರೊನಾ ಬಳಿಕ ಕಪ್ಪು ವಜ್ರಕ್ಕೆ ಎಲ್ಲಿಲ್ಲದ ಬೇಡಿಕೆ: 'ಈಗಿಂದಲೇ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಿ'

author img

By

Published : Jan 9, 2021, 5:08 PM IST

ಕೋವಿಡ್ ನಂತರದ ಅವಧಿಯಲ್ಲಿ ಹೆಚ್ಚುತ್ತಿರುವ ಕೈಗಾರಿಕಾ ಚಟುವಟಿಕೆಗಳಿಂದಾಗಿ ಒಣ ಇಂಧನಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಕಲ್ಲಿದ್ದಲು ಗಣಿಗಾರಿಕೆ ಉದ್ಯಮ ಬೇಡಿಕೆ ಪೂರೈಸಲು ಅಧಿಕ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೋಲ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಅಗ್ರವಾಲ್ ಕರೆ ನೀಡಿದರು.

Coal
ಕಲ್ಲಿದ್ದಲು

ಭುವನೇಶ್ವರ: ಕೋವಿಡ್ ಬಳಿಕ ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಗಳೊಂದಿಗೆ ಒಣ ಇಂಧನದ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಡಿಶಾದ ಸಿಐಎಲ್​​ನ ಅಂಗಸಂಸ್ಥೆ ಮಹಾನದಿ ಕೋಲ್​ಪೋಲ್ಡ್ಸ್ ಲಿಮಿಟೆಡ್ (ಎಂಸಿಎಲ್) ಟಾಲ್ಚರ್ ಬೆಲ್ಟ್​ನಲ್ಲಿ ಅಗ್ರವಾಲ್ ಗಣಿಗಾರಿಕೆ ಕಾರ್ಯಾಚರಣೆ ಪರಿಶೀಲಿಸಿ ಬಳಿಕ ಮಾತನಾಡಿದ, ಕೋಲ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಅಗ್ರವಾಲ್, ಗಣಿಗಾರಿಕೆ ನಡೆಸುತ್ತಿರುವವರು ದೇಶದ ಉತ್ಪಾದನಾ ಅಗತ್ಯ ಪೂರೈಸಲು ಬದ್ಧವಾಗಿದ್ದಾರೆ. ಅವರೆಲ್ಲ ಉತ್ಪಾದನೆ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ ಎಂದರು.

ಕೋವಿಡ್ ನಂತರದ ಅವಧಿಯಲ್ಲಿ ಹೆಚ್ಚುತ್ತಿರುವ ಕೈಗಾರಿಕಾ ಚಟುವಟಿಕೆಗಳಿಂದಾಗಿ ಒಣ ಇಂಧನಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಕಲ್ಲಿದ್ದಲು ಗಣಿಗಾರಿಕೆ ಉದ್ಯಮ ಬೇಡಿಕೆ ಪೂರೈಸಲು ಅಧಿಕ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಬಜೆಟ್ ತಯಾರಿ, ಲಸಿಕೆ ಖುಷಿಯಲ್ಲಿರುವ ಮೋದಿ ಸರ್ಕಾರ: ₹ 16 ಲಕ್ಷ ಕೋಟಿಯತ್ತ ನೋಡಿ ಎಂದ ತಜ್ಞರು!

ಮಹಾರತ್ನ ಪಿಎಸ್‌ಯು 2020-21ರ ಆರ್ಥಿಕ ವರ್ಷದಲ್ಲಿ 650 ಮಿಲಿಯನ್ ಟನ್ ಉತ್ಪಾದನಾ ಗಡಿ ದಾಟಲಿದೆ. ಉತ್ಪಾದನೆ, ರವಾನೆ ಮತ್ತು ಹೊರೆಯ ತೆಗೆದುಹಾಕುವಿಕೆಯ ಎಲ್ಲ ಪ್ರಮುಖ ನಿಯತಾಂಕಗಳಲ್ಲಿ ಬೆಳವಣಿಗೆ ಸಾಧಿಸಿದ್ದಕ್ಕಾಗಿ ಅಗ್ರವಾಲ್ ಅವರು ಎಂಸಿಎಲ್ ಅನ್ನು ಶ್ಲಾಘಿಸಿದರು.

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಕಲ್ಲಿದ್ದಲು ಬೆಹೆಮೊಥ್ 405 ಮಿಲಿಯನ್ ಟನ್ ಉತ್ಪಾದಿಸಿದೆ. ಒಡಿಶಾ ಮೂಲದ ಎಂಸಿಎಲ್ ಕೊಡುಗೆ 101.8 ಮಿಲಿಯನ್ ಟನ್ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.