ಇಸ್ಲಾಮಾಬಾದ್: '6 ಬಿಲಿಯನ್ ಡಾಲರ್ ಪಡೆಯಬೇಕಾದರೇ ಸಾಲಕ್ಕೆ ಏನನ್ನಾದರು ಜಾಮೀನು ಇಡುವಂತೆ ಬೀಜಿಂಗ್ ಕೇಳಿದೆ' ಎಂಬ ಮಾಧ್ಯಮಗಳ ವರದಿ ತಳ್ಳಿಹಾಕಿದ ಬೀಜಿಂಗ್, 'ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಡಿ ವಾಗ್ದಾನ ನೀಡಿದ್ದ ಹಣಕಾಸಿನ ನೆರವು ಕ್ರಮೇಣ ಕೊನೆಗೊಳ್ಳುತ್ತಿದೆ ಎಂಬ ವದಂತಿಗಳು ಸತ್ಯಕ್ಕೆ ದೂರವಾದವು' ಎಂದಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಮಾಧ್ಯಮಗಳ ವರದಿಗಳನ್ನು ಕಳಂಕಿತಗೊಳಿಸಿ, ಅವೆಲ್ಲವೂ ಆಧಾರರಹಿತ ಎಂದಿದ್ದು, ಪಾಕಿಸ್ತಾನ ಮತ್ತು ಚೀನಾ ಎರಡೂ ಮೆಗಾ ಯೋಜನೆಯ ನಿರ್ಮಾಣದಲ್ಲಿ ಮುಂದೆ ಸಾಗುತ್ತಿವೆ. ಉಭಯ ರಾಷ್ಟ್ರಗಳ ನಾಯಕರು ತಮ್ಮ ಒಮ್ಮತದ ಒಪ್ಪಂದಿತ ಯೋಜನಗೆಳ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ತನ್ನ ಆರ್ಥಿಕ ಬಿಕ್ಕಟ್ಟು ಮತ್ತು ಸಾಲ ಮರುಪಾವತಿಯಿಂದ ಪಾಕಿಸ್ತಾನಕ್ಕೆ ಚೀನಾ ಜಾಮೀನು ನೀಡುತ್ತಿದೆ. ಇದಕ್ಕೂ ಮೊದಲು ಡಿಸೆಂಬರ್‌ನಲ್ಲಿ ಸೌದಿ ಅರೇಬಿಯಾದ 2 ಬಿಲಿಯನ್ ಸಾಲ ಮರುಪಾವತಿಸಲು ಚೀನಾ ಪಾಕಿಸ್ತಾನಕ್ಕೆ 1.5 ಬಿಲಿಯನ್ ಹಣಕಾಸು ನೆರವು ನೀಡಿತ್ತು.
ಇದನ್ನೂ ಓದಿ: ವರ್ಷಾಂತ್ಯಕ್ಕೆ ಐಟಿ ರಿಟರ್ನ್ಸ್ದಾರರಿಗೆ ಸಿಹಿ ಸಮಾಚಾರ: ₹ 1.56 ಲಕ್ಷ ಕೋಟಿ ತೆರಿಗೆ ಬಾಕಿ ವಾಪಸ್
ಸರ್ಕಾರದ ಮೂಲವೊಂದು ಚೀನಾ ತನ್ನ ವಿದೇಶಿ ವಿನಿಮಯ ಆಡಳಿತದಿಂದ ಸಾಲ ನೀಡಿಲ್ಲ. ಸುರಕ್ಷಿತ ಠೇವಣಿ ಅಡಿ ಹಣ ನೀಡಿದೆ ಎಂದಿದೆ.
2011ರ ದ್ವಿಪಕ್ಷೀಯ ಕರೆನ್ಸಿ - ಸ್ವಾಪ್ ಒಪ್ಪಂದದ (ಸಿಎಸ್ಎ) ಗಾತ್ರವನ್ನು ಹೆಚ್ಚುವರಿ 10 ಬಿಲಿಯನ್ ಯೆನ್ ಅಥವಾ ಸುಮಾರು 1.5 ಬಿಲಿಯನ್ ಡಾಲರ್ಗೆ ಹೆಚ್ಚಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್ಐ) ಮತ್ತು ಸಿಪಿಇಸಿ ಅಭಿವೃದ್ಧಿಯ ಸಕಾರಾತ್ಮಕ ವೇಗ ಕಾಯ್ದುಕೊಂಡಿವೆ. ಇವುಗಳ ನಿರ್ಮಾಣದಲ್ಲಿ ಯಾವುದೇ ಅಡೆತಡೆ ಇಲ್ಲ. ಉದ್ಯೋಗ ಕಡಿತವಿಲ್ಲ ಮತ್ತು ಸಿಪಿಇಸಿ ಯೋಜನೆಗಳಿಂದ ಉದ್ಯೋಗಿಗಳನ್ನು ಹಿಂತೆಗೆದುಕೊಳ್ಳುವುದಿಲ್ಲ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮತ್ತು ಆರ್ಥಿಕತೆ ಸ್ಥಿರಗೊಳಿಸಲು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಲಿಜಿಯಾನ್ ಹೇಳಿದರು.
ಕಳೆದ ವರ್ಷದಿಂದ ಪಾಕಿಸ್ತಾನ ತನ್ನ ಹಣದುಬ್ಬರವು ಸ್ಥಿರ ಏರಿಕೆ ಕಂಡಿದೆ. ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರ ದರವು 2018-19ರಲ್ಲಿ ಶೇ. 6.8ರಷ್ಟಿತ್ತು. 2019-20ರ ಆರ್ಥಿಕ ವರ್ಷದಲ್ಲಿ ಹಣದುಬ್ಬರ ದರವು ಶೇ.10.7ಕ್ಕೆ ತಲುಪಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನ ಹಣದುಬ್ಬರವಾಗಿದೆ. ದುರ್ಬಲ ಚಟುವಟಿಕೆಯ ಹೊರತಾಗಿಯೂ ಗ್ರಾಹಕರ ಬೆಲೆ ಸೂಚ್ಯಂಕದ ಹಣದುಬ್ಬರವು 2019ರ ಹಣಕಾಸು ವರ್ಷದಲ್ಲಿ ಸರಾಸರಿ ಶೇ.6.8 ರಿಂದ 2020ರ ವಿತ್ತೀಯ ವರ್ಷದಲ್ಲಿ ಸರಾಸರಿ ಶೇ.10.7ಕ್ಕೆ ಏರಿದೆ. ಹೀಗಾಗಿ, ಪಾಕ್ ತನ್ನ ಆಪ್ತ ರಾಷ್ಟ್ರಗಳಲ್ಲಿ ಸಾಲಕ್ಕಾಗಿ ಕೈಚಾಚುತ್ತಿದೆ. ಈಗಾಗಲೇ ಚೀನಾ ಸಾಲದ ಹೊರೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಕತೆ ರಫ್ತು, ನಾಯಿ ಸಾಗಣೆ, ದೇಶಿ ಗಡಿಯಲ್ಲಿ ಮೀನುಗಾರಿಕೆಗಾಗಿ ಚೀನಾಗೆ ಅವಕಾಶ ನೀಡಿದೆ.