ETV Bharat / business

ವಿಳಂಬ ಜಿಎಸ್​ಟಿ ಪಾವತಿಯ ₹ 46,000 ಕೋಟಿ ಬಡ್ಡಿ ಮೇಲೆ ಕಣ್ಣಿಟ್ಟ ಕೇಂದ್ರ

2020 ಫೆಬ್ರವರಿ 1ರಂದು ಪ್ರಧಾನ ಎಡಿಜಿ (ಸಿಸ್ಟಮ್​) ತಮ್ಮ ಜಿಎಸ್‌ಟಿಆರ್ 3 ಬಿ ರಿಟರ್ನ್‌ಗಳನ್ನು ತಡವಾಗಿ ಸಲ್ಲಿಸುವಾಗ ಬಡ್ಡಿ ಹೊಣೆಗಾರಿಕೆಯನ್ನು ಬಿಡುಗಡೆ ಮಾಡದ ನೋಂದಾಯಿತ ವ್ಯಕ್ತಿಗಳ ಜಿಎಸ್‌ಟಿಐಎನ್ ಪಟ್ಟಿಯನ್ನು ಹಂಚಿಕೊಂಡಿದೆ. ಈ ವರದಿ ಪರಿಶೀಲಿಸಿದಾಗ ತೆರಿಗೆ ಪಾವತಿಸಲು ವಿಳಂಬವಾದ ಕಾರಣ 45,996 ಕೋಟಿ ರೂ.ಗಳ ಬಡ್ಡಿಯನ್ನು ಸರ್ಕಾರಕ್ಕೆ ಪಾವತಿಸಲು ಆಗುವುದಿಲ್ಲ ಎಂಬುದನ್ನು ಗಮನಿಸಿದೆ.

GST
ಜಿಎಸ್​ಟಿ​
author img

By

Published : Feb 12, 2020, 8:26 PM IST

ನವದೆಹಲಿ: ಜಿಎಸ್​​ಟಿ ಸಂಗ್ರಹದಲ್ಲಿನ ಕೊರತೆಯನ್ನು ನೀಗಿಸಲು ತಡವಾಗಿ ತೆರಿಗೆ ಪಾವತಿಸುವ ಬಡ್ಡಿಯಾಗಿ 46,000 ಕೋಟಿ ರೂ. ಪಡೆಯುವ ಹೊಸ ಆದಾಯದ ಹರಿವನ್ನು ಕೇಂದ್ರ ಸರ್ಕಾರ ಕಂಡುಕೊಂಡಿದೆ.

ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಸ ಪರೋಕ್ಷ ತೆರಿಗೆ ವಿಧಾನಕ್ಕೆ ವಲಸೆ ಹೋಗುವ ತೆರಿಗೆದಾರರಿಗೆ ಬಡ್ಡಿ ಮತ್ತು ದಂಡವನ್ನು ಬಿಡುವ ಮೂಲಕ ಅವರ ಕೈಹಿಡಿಯುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ತೆರಿಗೆ ತಜ್ಞರು ಹೇಳಿದ್ದಾರೆ. ಇದು ಈಗಿನ ತೆರಿಗೆ ಕಿಟ್ಟಿ ಹೆಚ್ಚಿಸಲು ಅತ್ಯಂತ ಕಠಿಣ ಕ್ರಮಗಳನ್ನು ಆಶ್ರಯಿಸಬೇಕಿದೆ. ಬಡ್ಡಿ ವಿಧಿಸುವುದರಿಂದ ತೆರಿಗೆದಾರರು ತಮ್ಮ ಬೇಡಿಕೆಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡುಬಹುದು ಎಂದು ಎಚ್ಚರಿಸಿದ್ದಾರೆ.

ತೆರಿಗೆ ಪಾವತಿದಾರರ ಐಟಿ ರಿಟರ್ನ್ಸ್​ಗೆ ವಿಳಂಬ ಮಾಡಿದರೆ ಪಾವತಿಯ ಬಡ್ಡಿಯನ್ನು ನಿರ್ಣಯಿಸುವ ಮತ್ತು ಪಾವತಿ ಕಾನೂನಿನಡಿ ತೆರಿಗೆದಾರರ ಮೇಲೆ ಹೊಣೆಗಾರಿಕೆ ಹೊಂದಿದೆ ಎಂದು ಸಿಬಿಡಿಟಿ ಸದಸ್ಯ, ವಿಶೇಷ ಕಾರ್ಯದರ್ಶಿ ಎ.ಕೆ. ಪಾಂಡೆ ಅವರು ಪ್ರಧಾನ ಮುಖ್ಯ ಆಯುಕ್ತರು ಹಾಗೂ ಕೇಂದ್ರ ತೆರಿಗೆ ಆಯುಕ್ತರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ತೆರಿಗೆ ವಿಳಂಬವಾಗಿ ಪಾವತಿಸಬೇಕಾದ ಬಡ್ಡಿಯನ್ನು ಸೆಕ್ಷನ್ 75ರ (12) ಜೊತೆಗೆ ಸಿಜಿಎಸ್​​ಟಿ ಕಾಯ್ದೆಯ ಸೆಕ್ಷನ್ 79ರ ನಿಬಂಧನೆಗಳ ಅಡಿಯಲ್ಲಿ ಮರುಪಡೆಯಬಹುದು. ಇದರ ಮೂಲಕ ಸರಿಯಾದ ಅಧಿಕಾರಿ ಪಾವತಿಸಬೇಕಾದ ಯಾವುದೇ ಮೊತ್ತವನ್ನು ಮರುಪಡೆಯಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದ ಪ್ರಕಾರ, 2020 ಫೆಬ್ರವರಿ 1ರಂದು ಪ್ರಧಾನ ಎಡಿಜಿ (ಸಿಸ್ಟಮ್​) ತಮ್ಮ ಜಿಎಸ್‌ಟಿಆರ್ 3 ಬಿ ರಿಟರ್ನ್‌ಗಳನ್ನು ತಡವಾಗಿ ಸಲ್ಲಿಸುವಾಗ ಬಡ್ಡಿ ಹೊಣೆಗಾರಿಕೆಯನ್ನು ಬಿಡುಗಡೆ ಮಾಡದ ನೋಂದಾಯಿತ ವ್ಯಕ್ತಿಗಳ ಜಿಎಸ್‌ಟಿಐಎನ್ ಪಟ್ಟಿಯನ್ನು ಹಂಚಿಕೊಂಡಿದೆ. ಈ ವರದಿ ಪರಿಶೀಲಿಸಿದಾಗ ತೆರಿಗೆ ಪಾವತಿಸಲು ವಿಳಂಬವಾದ ಕಾರಣ 45,996 ಕೋಟಿ ರೂ.ಗಳ ಬಡ್ಡಿಯನ್ನು ಸರ್ಕಾರಕ್ಕೆ ಪಾವತಿಸಲು ಆಗುವುದಿಲ್ಲ ಎಂಬುದನ್ನು ಗಮನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.