ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 25.55 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 95,853 ಕೋಟಿ ರೂ. ತೆರಿಗೆ ಬಾಕಿ ಹಣ ಪಾವತಿಸಿದೆ.
ಒಟ್ಟು ಮರುಪಾವತಿಯಲ್ಲಿ 29,361 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 66,493 ಕೋಟಿ ರೂ. ಒಳಗೊಂಡಿದೆ ಎಂದು ತಿಳಿಸಿದೆ.
ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2020ರ ಆಗಸ್ಟ್ 25ರ ನಡುವೆ 25.55 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 95,853 ಕೋಟಿ ರೂ. ಮರುಪಾವತಿ ಮಾಡಿರುತ್ತದೆ. 23,91,517 ಪ್ರಕರಣಗಳಲ್ಲಿ 29,361 ಕೋಟಿ ರೂ. ಆದಾಯ ತೆರಿಗೆ ಮರುಪಾವತಿಯಾಗಿದೆ. 66,493 ಕೋಟಿ ರೂ. ಮೊತ್ತ 1,63,272 ಪ್ರಕರಣಗಳಲ್ಲಿ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟ್ಟರ್ನಲ್ಲಿ ತಿಳಿಸಿದೆ
ಸಾಂಕ್ರಾಮಿಕ ರೋಗದಿಂದ ಉಂಟಾಗುವ ವಿತ್ತೀಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಮರುಪಾವತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಒತ್ತು ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಈ ಹಿಂದೆ ತಿಳಿಸಿತ್ತು.