ETV Bharat / business

ಶ್ಯೂರಿಟಿ ಇಲ್ಲದೇ 3 ಲಕ್ಷ ಕೋಟಿ ರೂ. ಸಾಲಕ್ಕೆ ಕೇಂದ್ರ ಸಂಪುಟ ಅಸ್ತು: ಶೇ 9.25 ರಷ್ಟು ಬಡ್ಡಿ - ಎಂಎಸ್​ಎಂಇ ಸಾಲ ಯೋಜನೆಗೆ ಸಂಪುಟ ಅನುಮೋದನೆ

ಎಂಎಸ್ ಎಂಇಗಳಿಗೆ ಶ್ಯೂರಿಟಿ ಇಲ್ಲದೇ ಆಟೋಮ್ಯಾಟಿಕ್​​​ ಆಗಿ ಸಾಲ ದೊರೆಯಲಿದೆ. ಇದಕ್ಕಾಗಿ 3 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ನಾಲ್ಕು ವರ್ಷದಲ್ಲಿ ಮರುಪಾವತಿ ಮಾಡಬಹುದು. ಮೊದಲ ಹನ್ನೆರಡು ತಿಂಗಳು ವಿನಾಯಿತಿ ದೊರೆಯಲಿದೆ ಎಂದು ಸೀತಾರಾಮನ್ ಅವರು ಹೇಳಿದ್ದರು. ಈ ಯೋಜನೆಗೆ ಇಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Pm Modi
ಪ್ರಧಾನಿ ಮೋದಿ
author img

By

Published : May 20, 2020, 5:36 PM IST

ನವದೆಹಲಿ: ಕೊರೊನಾವೈರಸ್ ಬಿಕ್ಕಟ್ಟಿನಿಂದ ತೀವ್ರವಾಗಿ ತತ್ತರಿಸಿರುವ ಎಂಎಸ್‌ಎಂಇ ವಲಯಕ್ಕೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಮೂಲಕ ಶೇ 9.25ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ 3 ಲಕ್ಷ ಕೋಟಿ ರೂ. ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.

ಕಳೆದ ವಾರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ 21 ಲಕ್ಷ ಕೋಟಿ ರೂ. ಸಮಗ್ರ ಪ್ಯಾಕೇಜ್‌ನ ಎರಡನೇ ಅತಿದೊಡ್ಡ ಘಟಕ ಇಸಿಎಲ್‌ಜಿಎಸ್ ಹೊಂದಿದೆ.

ಈ ಯೋಜನೆಯಡಿ ಅರ್ಹ ಎಂಎಸ್‌ಎಂಇಗಳು ಮತ್ತು ಆಸಕ್ತ ಮುದ್ರಾ ಸಾಲಗಾರರು ಖಾತರಿಪಡಿಸಿದ ತುರ್ತು ಕ್ರೆಡಿಟ್ ಲೈನ್ (ಜಿಇಸಿಎಲ್) ರೂಪದಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚುವರಿ ಹಣವನ್ನು ರಾಷ್ಟ್ರೀಯ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ (ಎನ್‌ಸಿಜಿಟಿಸಿ) ಒದಗಿಸುತ್ತದೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ಮತ್ತು ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ಕೇಂದ್ರ ಸರ್ಕಾರವು 41,600 ಕೋಟಿ ರೂ. ಕಾರ್ಪಸ್ ಒದಗಿಸುತ್ತದೆ ಎಂದು ಹೇಳಿದೆ.

ಎಂಎಸ್ ಎಂಇಗಳಿಗೆ ಶ್ಯೂರಿಟಿ ಇಲ್ಲದ ಆಟೋಮೆಟಿಕ್ ಸಾಲ ದೊರೆಯಲಿದೆ. ಇದಕ್ಕಾಗಿ 3 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ನಾಲ್ಕು ವರ್ಷದಲ್ಲಿ ಮರುಪಾವತಿ ಮಾಡಬಹುದು. ಮೊದಲ ಹನ್ನೆರಡು ತಿಂಗಳು ವಿನಾಯಿತಿ ದೊರೆಯಲಿದೆ. ಇದಕ್ಕೆ ಯಾವುದೇ ಖಾತ್ರಿ, ಅಡಮಾನ ಬೇಕಾಗಿಲ್ಲ. 2020ರ ಅಕ್ಟೋಬರ್ 31ರ ತನಕ ಈ ಸಾಲ ದೊರೆಯಲಿದೆ. ನಲವತ್ತೈದು ಲಕ್ಷ ಘಟಕಗಳಿಗೆ ನೆರವಾಗಲಿದೆ ಎಂದು ಸೀತಾರಾಮನ್ ಅವರು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.