ETV Bharat / business

ಆರ್ಥಿಕತೆ ಚೇತರಿಕೆ ಕಂಡು ಹೊಸ ಉದ್ಯೋಗಗಳನ್ನ ಸೃಷ್ಟಿಸಲಿದೆ: ರಾಜನಾಥ್​ ಸಿಂಗ್​​ ವಿಶ್ವಾಸ

author img

By

Published : Feb 1, 2020, 4:48 PM IST

ಇಂದಿನ ಬಜೆಟ್​​ ಆರ್ಥಿಕ ವ್ಯವಸ್ಥೆ ಪುನರುಜ್ಜೀವನಗೊಳಿಸಿ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ತಿಳಿಸಿದ್ರು.

Budget will revive economic growth and create new job opportunities: Rajnath
ರಾಜನಾಥ್​ ಸಿಂಗ್​​

ನವದೆಹಲಿ : 2020-21ರ ಬಜೆಟ್​ ಬಗ್ಗೆ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​ ಸಂತಸ ವ್ಯಕ್ತಪಡಿಸಿದ್ದು, ಇಂದಿನ ಬಜೆಟ್ ​ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಆರ್ಥಿಕತೆಯಲ್ಲಿ ಬೇಡಿಕೆ ಪ್ರಮಾಣ ಹೆಚ್ಚಿಸುವಂತಿದೆ ಎಂದಿದ್ದಾರೆ.

ಕೇವಲ ಪೂರಕ ಬಂಡವಾಳ ಹೂಡಿಕೆ ಹೆಚ್ಚಳ ಮಾತ್ರವಲ್ಲದೇ ಇಂದಿನ ಬಜೆಟ್​​ನಲ್ಲಿರುವ ಅಂಶಗಳು ದೀರ್ಘಾವಧಿಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ನಷ್ಟದಲ್ಲಿರುವ ಕೈಗಾರಿಕೆಗಳನ್ನು ಪುನಶ್ಚೇತಗೊಳಿಸಲು ಸಹಕಾರಿಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಮಂಡಿಸಿದ ಈ ಬಜೆಟ್​​ ''ವಿಶ್ವಾಸಾರ್ಹ ಭಾರತ''ಕ್ಕೆ ಹೊಸರೂಪುರೇಷೆ ಬರೆಯಲಿದ್ದು, ಮುಂದಿನ ವರ್ಷಗಳಲ್ಲಿ ಭಾರತವನ್ನು ಶ್ರೀಮಂತಗೊಳಿಸುವ ಮತ್ತು ಆರ್ಥಿಕತೆಯನ್ನು ಸುಸ್ಥಿರಗೊಳಿಸುವ ಪ್ರಗತಿಪರ ಬಜೆಟ್​ ಇದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್​​ನಾಥ್​ ಸಿಂಗ್​​ ಹೇಳಿದ್ರು. ವಿಶೇಷವಾಗಿ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ವಲಯಗಳ ಸರ್ವತೋಮುಖ ಅಭಿವೃದ್ಧಿಗೆ ಈ ಬಾರಿಯ ಬಜೆಟ್​​ನಲ್ಲಿ ಗಮನ ಹರಿಸಲಾಗಿದೆ ಎಂದು ತಿಳಿಸಿದ್ರು. ಜೊತೆಗ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದ್ರು.

ಇಂದಿನ ಬಜೆಟ್ ತೆರಿಗೆದಾರರು, ಹೂಡಿಕೆದಾರರು ಮತ್ತು ಬಂಡವಾಳಗಾರರಿಗೆ ​​ತೆರಿಗೆ ಕಿರುಕುಳದಿಂದ ರಕ್ಷಣೆ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಈ ಬಾರಿಯ ಬಜೆಟ್​​​ನಲ್ಲಿ ಪರಿಚಯಿಸಲಾಗಿರುವ ನೂತನ ತೆರಿಗೆ ಸುಧಾರಣೆಗಳು ಅತ್ಯಂತ ಪ್ರಗತಿದಾಯಕವಾಗಿದ್ದು, ಸಾಮಾನ್ಯ ಜನರ ತೆರಿಗೆ ಹೊರೆ ಕಡಿಮೆ ಮಾಡಲಿವೆ ಎಂದು ತಿಳಿಸಿದ್ರು. ಉತ್ತಮ ತೆರಿಗೆ ವ್ಯವಸ್ಥೆಗೆ ಈ ಬಜೆಟ್​​​ ಸೂಕ್ತ ಹಾದಿ ನಿರ್ಮಿಸಿದೆ ಎಂದು ಹೇಳಿದ್ರು.

ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಮೂಲಕ ಜ್ಞಾನಾಧಾರಿತ ಆರ್ಥಿಕತೆ ರೂಪಿಸಲು ಹಸ್ತಕ್ಷೇಪ ನೀತಿ ಪ್ರಸ್ತಾವನೆ ಮಾಡಿದ್ದಕ್ಕಾಗಿ ರಾಜ್​​ನಾಥ್​​ ಸಿಂಗ್​​ ಸಚಿವೆ ನಿರ್ಮಲಾ ಸೀತಾರಾಮನ್​​ ಅವರನ್ನು ಅಭಿನಂದಿಸಿದ್ರು. ಈ ಹೊಸ ನೀತಿ ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಬಣ್ಣಿಸಿದರು. 2024-25 ರ ವೇಳೆಗೆ 5 ಟ್ರಿಲಿಯನ್​​ ಯುಎಸ್​​ಡಿ ಯಷ್ಟು ಆರ್ಥಿಕ ಪ್ರಗತಿ ಸಾಧಿಸುವ ಗುರಿಯತ್ತ ಇಂದಿನ ಬಜೆಟ್ ಹೆಚ್ಚಿನ ಒತ್ತು ನೀಡಿದೆ ಎಂದು ತಿಳಿಸಿದ್ರು.​​

ಹಾಗೆಯೇ ದೇಶದ ಗುರಿ ಸಾಧನೆಗೆ ಅಗತ್ಯವಿರುವಂತ ಅಂಶಗಳುಳ್ಳ ಇಂತಹ ಉತ್ತಮ ಬಜೆಟ್​​ ನೀಡಿದ್ದಕ್ಕಾಗಿ ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.