ETV Bharat / business

ಇಂದು ಕೇಂದ್ರ ಬಜೆಟ್‌: ಮಧ್ಯಮ ವರ್ಗದವರಿಗೆ ಬಜೆಟ್ ಮೇಲಿನ ನಿರೀಕ್ಷೆಗಳೇನು? - ಬಜೆಟ್‌ 2022ರ ನಿರೀಕ್ಷೆಗಳು

Budget 2022 expectations : ಕೋವಿಡ್‌ ಹೊಡೆತದಿಂದ ಅಸಮರ್ಪಕ ನಿರ್ವಹಣೆಯಿಂದಾಗಿ ಅನೇಕ ಕಂಪನಿಗಳು ಮತ್ತು ಕೈಗಾರಿಕೆಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿವೆ. ಹೊಸ ಉದ್ಯೋಗಗಳು ಸೃಷ್ಟಿಯಾಗದ ಹಿನ್ನೆಲೆಯಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ದೇಶದ ಜನಸಂಖ್ಯೆಯ ಪ್ರಕಾರ ಸರಾಸರಿ 60 ಕೋಟಿ ಜನರಿಗೆ ಉದ್ಯೋಗವಿರಬೇಕು..

budget 2022 expectations:Middle class hopes annual budget will provide a cushion to improve the economic
ಬಜೆಟ್‌ 2022: ಮಧ್ಯಮ ವರ್ಗದವರಿಗೆ ನಾಳಿನ ಬಜೆಟ್ ಮೇಲಿನ ನಿರೀಕ್ಷೆಗಳೇನು..?
author img

By

Published : Jan 31, 2022, 7:14 PM IST

Updated : Feb 1, 2022, 5:04 AM IST

ಹೈದರಾಬಾದ್‌ : ದೇಶದ ಆರ್ಥಿಕತೆಯನ್ನು ನಿರ್ವಹಿಸುವುದು ಎಂದರೆ ಹರಿತವಾದ ಕತ್ತಿಯ ಮೇಲಿನ ನಡಿಗೆ ಇದ್ದಂತೆ. ಆದಾಯಕ್ಕೆ ಅನುಗುಣವಾಗಿ ಅತ್ಯಂತ ಎಚ್ಚರಿಕೆಯಿಂದ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಕೋವಿಡ್‌ ಬಂದ ನಂತರ ಆದಾಯ ಕಡಿಮೆಯಾಗಿ ಆರ್ಥಿಕತೆ ನಿರ್ವಹಣೆ ಪ್ರಸ್ತುತ ದೊಡ್ಡ ಸವಾಲು ಆಗಿದೆ.

ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಬಜೆಟ್ ಅನ್ನು ಎಚ್ಚರಿಕೆಯಿಂದ ರೂಪಿಸಿದರೆ ಮಾತ್ರ ದೇಶ ಮುನ್ನಡೆಸಲು ಸಾಧ್ಯವಾಗುತ್ತದೆ. ಈ ಸವಾಲುಗಳ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಲಿರುವ 2022-23ನೇ ಸಾಲಿನ ವಾರ್ಷಿಕ ಬಜೆಟ್ ಬಗ್ಗೆ ವ್ಯಾಪಕ ಕುತೂಹಲ ಕೆರಳಿಸಿದೆ.

ಕೋವಿಡ್‌ ಮುಕ್ತ ಉದ್ಯೋಗಗಳು, ಹಾನಿಗೊಳಗಾದ ಸ್ವ-ಉದ್ಯೋಗ, ಅಸ್ತಿತ್ವದಲ್ಲಿರುವ ಉದ್ಯೋಗಗಳಲ್ಲಿನ ವೇತನ ಕಡಿತ, ಆರೋಗ್ಯ ರಕ್ಷಣೆಯ ವೆಚ್ಚಗಳು ಹಾಗೂ ಪೆಟ್ಟು ತಿಂದಿರುವ ಶಿಕ್ಷಣ ವಲಯವನ್ನು ಸರಿಪಡಿಸಿ ಹಳಿಗೆ ತರಬೇಕಿದೆ. ಈ ಹಿನ್ನೆಲೆಯಲ್ಲಿ ಇಂದಿನ ಬಜೆಟ್‌ನಲ್ಲಿ ಸ್ವಲ್ಪ ಸಮಾಧಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮಧ್ಯಮ ವರ್ಗವಿದೆ.

ದೇಶದ ಜನಸಂಖ್ಯೆಯಲ್ಲಿ ಮಧ್ಯಮ ವರ್ಗದ ಪಾಲು ಶೇ.28ರಷ್ಟಿದೆ. ಇವರಲ್ಲಿ ತೆರಿಗೆ ಪಾವತಿ ಮಾಡುವವರು ಶೇ.79ರಷ್ಟು ಮಂದಿ ಇದ್ದಾರೆ. ಬಳಕೆಯ ವೆಚ್ಚದ ಶೇ.70ರಷ್ಟು ಇವರದ್ದೇ ಪಾಲು. ಮಧ್ಯಮ ವರ್ಗದ ಹೆಚ್ಚಿನವರು ಉದ್ಯೋಗ ಮಾಡುತ್ತಲೇ ಆದಾಯ ತೆರಿಗೆಯನ್ನೂ ಪಾವತಿ ಮಾಡುತ್ತಿದ್ದಾರೆ.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆದಾಯ ತೆರಿಗೆ ಪಾವತಿದಾರರಿಗೆ ಪರಿಹಾರ ನೀಡಲು ಕನಿಷ್ಠ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದು, ಸೆಕ್ಷನ್ 80ಸಿ ಅಡಿಯಲ್ಲಿ ಪ್ರಮಾಣಿಕರಿಗೆ ತೆರಿಗೆ ಕಡಿತ ಹಾಗೂ ಐಚ್ಛಿಕ ತೆರಿಗೆ ಸ್ಲ್ಯಾಬ್ ದರಗಳ ಪರಿಚಯದಂತಹ ಕ್ರಮಗಳನ್ನು ಕೈಗೊಂಡಿದೆ.

ಆದರೆ, ಕೋವಿಡ್ ನಂತರ ತೆರಿಗೆದಾರರಿಗೆ ಮಾತ್ರ ಪರಿಹಾರ ಸೀಮಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಳಿಕೆಯು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ. ಹೀಗಾಗಿ, ಆದಾಯ ತೆರಿಗೆ ವಿಷಯದಲ್ಲಿ ಬಜೆಟ್‌ನಲ್ಲಿ ವಿಶೇಷ ನೀತಿಯನ್ನು ತರಲು ವೇತನದಾರರು ಬಯಸಿದ್ದಾರೆ. ಐಚ್ಛಿಕ ತೆರಿಗೆ ಸ್ಲ್ಯಾಬ್ ದರಗಳೊಂದಿಗೆ ಆಗಾಗ್ಗೆ ತೊಂದರೆಗಳಿಂದಾಗಿ ಇದನ್ನು ಸುಲಭಗೊಳಿಸಲು ಬಜೆಟ್‌ನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಯಸುತ್ತಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯಕ್ಕೆ ಸೂಕ್ತ ಅನುದಾನ

ಕೋವಿಡ್‌ನಿಂದಾಗಿ ವೈದ್ಯಕೀಯ ಚಿಕಿತ್ಸೆಗಳ ವೆಚ್ಚಗಳು ಹೆಚ್ಚಾಗಿವೆ. ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಿದ ಪರಿಣಾಮ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಿದೆ. ಇಂತಹ ಪರಿಸ್ಥಿತಿಯಿಂದ ಹೊರ ಬರಲು ಈ ಕ್ಷೇತ್ರಗಳಿಗೆ ಅನುದಾನ ಹೆಚ್ಚಿಸಬೇಕೆಂಬ ನಿರೀಕ್ಷೆಯನ್ನು ಮಧ್ಯಮ ವರ್ಗ ಇಟ್ಟುಕೊಂಡಿದೆ. 2020-21ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆಯಲ್ಲಿ ಭಾರತವು 189 ದೇಶಗಳಲ್ಲಿ 17ನೇ ಸ್ಥಾನದಲ್ಲಿದೆ.

2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ವೈದ್ಯಕೀಯ ಕ್ಷೇತ್ರದ ಮೇಲಿನ ವೆಚ್ಚವು 2025ರ ವೇಳೆಗೆ ಜಿಡಿಪಿಯ ಶೇ.2.5ರಷ್ಟು ಇರಬೇಕೆಂದು ಅಂದಾಜಿಸಲಾಗಿದೆ. ಸಾರ್ವಜನಿಕ ವಲಯದಲ್ಲಿನ ಆರೋಗ್ಯದ ಮೇಲಿನ ವೆಚ್ಚವು 2015-16ರ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ. 0.9ರಿಂದ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಆದರೆ, 2020-21ರಲ್ಲಿ ಇದು ಜಿಡಿಪಿಯ ಶೇ.1.1 ಮಾತ್ರ ಇದೆ. ಎಕನಾಮಿಕ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.40ರಷ್ಟು ಜನರು ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಾಕಷ್ಟು ಅನುದಾನ ಮೀಸಲಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೂಲಿಕಾರರು, ನಿರುದ್ಯೋಗಿಗಳ ಕೋಟಿ ಆಶಾಕಿರಣ..

ಕೋವಿಡ್‌ ಹೊಡೆತದಿಂದ ಅಸಮರ್ಪಕ ನಿರ್ವಹಣೆಯಿಂದಾಗಿ ಅನೇಕ ಕಂಪನಿಗಳು ಮತ್ತು ಕೈಗಾರಿಕೆಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿವೆ. ಹೊಸ ಉದ್ಯೋಗಗಳು ಸೃಷ್ಟಿಯಾಗದ ಹಿನ್ನೆಲೆಯಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ದೇಶದ ಜನಸಂಖ್ಯೆಯ ಪ್ರಕಾರ ಸರಾಸರಿ 60 ಕೋಟಿ ಜನರಿಗೆ ಉದ್ಯೋಗವಿರಬೇಕು.

ಆದರೆ, ಪ್ರಸ್ತುತ 40 ಕೋಟಿ ಜನರಿಗೆ ಮಾತ್ರ ಉದ್ಯೋಗವಿದೆ. ದೇಶದಲ್ಲಿ ನಿರುದ್ಯೋಗದ ಕುರಿತು ಎಕನಾಮಿಕ್ ಟೈಮ್ಸ್ ಸಮೀಕ್ಷೆಯ ಪ್ರಕಾರ, ನಾಲ್ಕು ಜನರಲ್ಲಿ ಒಬ್ಬರಿಗೆ ಕೆಲಸ ಸಿಗುವುದು ಕಷ್ಟ. ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಮುದ್ರಾ ಸಾಲ ಯೋಜನೆ ಮತ್ತು ಜನಧನ ಯೋಜನೆ ಜಾರಿಗೆ ತಂದಿದ್ದರೂ ಅವುಗಳ ಅನುಷ್ಠಾನದಲ್ಲಿನ ಲೋಪಗಳಿಂದ ನಿರೀಕ್ಷಿತ ಲಾಭ ಸಿಕ್ಕಿಲ್ಲ ಎಂಬ ವಾದವಿದೆ.

ಮೋದಿ ಸರ್ಕಾರದ ಅಡಿಯಲ್ಲಿ ನೀತಿಗಳು ಒಂದೇ ಸ್ಥಳದಲ್ಲಿ ಕೇಂದ್ರೀಕೃತವಾಗಿವೆ. ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಯಿಂದಾಗಿ ದೇಶದಲ್ಲಿ ಬಡತನ ನಿರಂತರವಾಗಿ ಹೆಚ್ಚುತ್ತಿದೆ. ಕೊರೊನಾ ಹೊಡೆತದಿಂದ ಬಡವರ ಸಂಖ್ಯೆ 2011ರಲ್ಲಿ 34 ಕೋಟಿಯಿಂದ 2020ರಲ್ಲಿ 13 ಕೋಟಿ 40 ಲಕ್ಷಕ್ಕೆ ಗಣನೀಯವಾಗಿ ಇಳಿದಿದೆ. ಕೋವಿಡ್‌ ಬಂದ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ವಲಸೆ ಹೋಗಿದ್ದಾರೆ. ಕೈಗಾರಿಕೆಗಳು ಮತ್ತು ನಿರ್ಮಾಣ ವಲಯದ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ.

ಹಾಗಾಗಿಯೇ, ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್ ಮೇಲೆ ಮಧ್ಯಮ ವರ್ಗ, ಕೂಲಿ ಕಾರ್ಮಿಕರು, ನಿರುದ್ಯೋಗಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಎಲ್ಲ ರೀತಿಯಲ್ಲೂ ಜೀವನವನ್ನು ಹಾಳು ಮಾಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತೊಡೆದು ಹಾಕುವ ಕ್ರಮಗಳು ಬಜೆಟ್‌ನಲ್ಲಿ ಇರುತ್ತವೆ ಎಂದು ಆಯಾ ವರ್ಗಗಳು ಭಾವಿಸಿವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 5:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.