ETV Bharat / business

ನಿರ್ಮಲಾ ಬಜೆಟ್​.. ಭಾರತೀಯ ಸಂಚಾರದ ಜೀವನಾಡಿ ರೈಲ್ವೆಗೆ ಏನೆಲ್ಲಾ ಸಿಗಲಿದೆ?

ರೈಲ್ವೆ ಬಜೆಟ್‌ನ ಈಗ ಕೇಂದ್ರ ಬಜೆಟ್​​ ಜೊತೆಗೆ ವಿಲೀನಗೊಳಿಸಲಾಗಿದೆ. ಈ ವರ್ಷ ಬೃಹತ್​ ಮೂಲಸೌಕರ್ಯ ಯೋಜನೆಗಳು ಮತ್ತು ಸುರಕ್ಷತಾ ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ಭಾರತೀಯ ರೈಲ್ವೆಗೆ ಹೆಚ್ಚಿನ ಹಂಚಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ..

author img

By

Published : Jan 30, 2021, 7:49 PM IST

Budget 2021:
Budget 2021:

ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ತೀವ್ರ ಹೊಡೆತಕ್ಕೆ ಒಳಗಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2021-22 ಸಾಲಿನ ಮುಂಗಡ ಪತ್ರ ಮಂಡಿಸಲು ಸಜ್ಜಾಗಿದ್ದಾರೆ.

ರೈಲ್ವೆ ಬಜೆಟ್‌ನ ಈಗ ಕೇಂದ್ರ ಬಜೆಟ್​​ ಜೊತೆಗೆ ವಿಲೀನಗೊಳಿಸಲಾಗಿದೆ. ಈ ವರ್ಷ ಬೃಹತ್​ ಮೂಲಸೌಕರ್ಯ ಯೋಜನೆಗಳು ಮತ್ತು ಸುರಕ್ಷತಾ ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ಭಾರತೀಯ ರೈಲ್ವೆಗೆ ಹೆಚ್ಚಿನ ಹಂಚಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವರ್ಷದ ಬಜೆಟ್‌ನಲ್ಲಿ ರೈಲ್ವೆಗೆ ಶೇ.3-5ರಷ್ಟು ಅನುದಾನ ಹೆಚ್ಚಳವಾಗಬಹುದು. ಒಟ್ಟು ಬಜೆಟ್ ಬೆಂಬಲ ಸುಮಾರು 80,000 ಕೋಟಿ ರೂ. ಮೀಸಲಿಟ್ಟು, ರಾಷ್ಟ್ರೀಯ ರೈಲು ಯೋಜನೆ 2024 ದೃಷ್ಟಿಯಲ್ಲಿ ಇರಿಸಿಕೊಂಡು ಹಂಚಿಕೆ ಮಾಡಲಾಗುತ್ತದೆ.

ಬುಲೆಟ್ ರೈಲು ಯೋಜನೆ ಸಹ ಕೇಂದ್ರ ಸರ್ಕಾರದ ಪ್ರಮುಖ ಕೇಂದ್ರಬಿಂದುವಾಗಿದೆ. ಇದು ರೈಲ್ವೆ ಕ್ಷೇತ್ರದಲ್ಲಿ ವೆಚ್ಚ ಹೆಚ್ಚಿಸಬಹುದು. ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ರಾಷ್ಟ್ರೀಯ ರೈಲ್ವೆ ಯೋಜನೆ 2024ರ ಕರಡಿನಲ್ಲಿ 2051ರ ವೇಳೆಗೆ 8,000 ಕಿ.ಮೀ ಉದ್ದದ ಅತಿವೇಗದ ರೈಲ್ವೆ ಜಾಲ ಪ್ರಸ್ತಾಪಿಸಿದೆ.

ಕರಡು ಯೋಜನೆಯು ಪಾಟ್ನಾ-ಗುವಾಹಟಿ, ಅಮೃತಸರ-ಜಮ್ಮು, ವಾರಣಾಸಿ-ಪಾಟ್ನಾ ಮತ್ತು ಹೈದರಾಬಾದ್-ಬೆಂಗಳೂರು ಮಾರ್ಗಗಳ ನಡುವೆ ಅತಿ ವೇಗದ ಕಾರಿಡಾರ್‌ಗಳನ್ನು ಸಹ ಪ್ರಸ್ತಾಪಿಸಿದೆ. ಪ್ರವಾಸಿ ಮತ್ತು ತೀರ್ಥಯಾತ್ರೆಯ ಸ್ಥಳಗಳಲ್ಲಿ ರೈಲ್ವೆ ಮೂಲಸೌಕರ್ಯಗಳ ವಿಸ್ತರಣೆಗಾಗಿ ಹಣಕಾಸು ಸಚಿವರು ಹೆಚ್ಚಿನ ಸಂಖ್ಯೆಯ ಖಾಸಗಿ ರೈಲುಗಳನ್ನ ಓಡಿಸುವ ಸಾಧ್ಯತೆಯಿದೆ. ಭಾರತೀಯ ರೈಲ್ವೆ ಈಗಾಗಲೇ 12 ಕ್ಲಸ್ಟರ್‌ಗಳಲ್ಲಿ 151 ಖಾಸಗಿ ರೈಲುಗಳನ್ನು ಘೋಷಿಸಿದ್ದು, ಖಾಸಗಿ ಸಂಸ್ಥೆಗಳಿಂದ ಸುಮಾರು 13,000 ಕೋಟಿ ರೂ. ಹೂಡಿಕೆ ಹರಿದು ಬರಲಿದೆ.

ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ರಾಷ್ಟ್ರೀಯ ರೈಲು ಸಂರಕ್ಷಣಾ ಸೆಲ್​ನಲ್ಲಿ 20,000 ಕೋಟಿ ರೂ. ಬಳಸಿದೆ. ರೈಲ್ವೆ ಹಳಿಗಳಲ್ಲಿ ಅಪಘಾತ ತಡೆಗಟ್ಟುವ ಕ್ರಮಗಳನ್ನು ಬಲಪಡಿಸಲು ಈ ವರ್ಷ ರೈಲ್ವೆ ಮುಂದಿನ ಐದು ವರ್ಷಗಳ ಹಂಚಿಕೆಯಲ್ಲಿ ಕನಿಷ್ಠ ಶೇ. 50ರಷ್ಟು ಹೆಚ್ಚಳ ಕೋರಿದೆ.

ಕಳೆದ ವರ್ಷ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು 2030ರ ವೇಳೆಗೆ ಭಾರತೀಯ ರೈಲ್ವೆಯ 'ಹಸಿರು ರೈಲ್ವೆ' ಆಗಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದ್ದರು. ಈ ವರ್ಷ ರೈಲ್ವೆ 7,000 ಮಾರ್ಗ ಕಿಲೋಮೀಟರ್ ವಿದ್ಯುದ್ದೀಕರಣದ ಗುರಿ ಹೊಂದಿದ್ದು, ಇದಕ್ಕಾಗಿ ಕೇಂದ್ರವು ಹೆಚ್ಚಾಗುವ ನಿರೀಕ್ಷೆಯಿದೆ. ಅದರ ಹಸಿರು ಉಪಕ್ರಮಗಳ ಅಡಿಯಲ್ಲಿ ಹೆಚ್ಚಿನ ಹಂಚಿಕೆ ಮಾಡಬಹುದು.

ಹೊಸ ರೈಲುಗಳು ಮತ್ತು ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕೇಂದ್ರ ಸರ್ಕಾರವು ರೈಲ್ವೆಯ ಆಧುನೀಕರಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರೆ, ರೈಲ್ವೆ ಪ್ರಯಾಣಿಕರು ಶುಲ್ಕ ರಚನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಲಿದೆ.

ಪ್ರಯಾಣಿಕರೊಬ್ಬರು ಈಟಿವಿ ಭಾರತ ಜತೆಗೆ ಮಾತನಾಡುತ್ತಾ, ಬುಲೆಟ್ ರೈಲು ಭಾರತದ ಅಭಿವೃದ್ಧಿಗೆ ಒಳ್ಳೆಯದು. ಆದರೆ, ಅಂತಹ ರೈಲುಗಳಲ್ಲಿ ಪ್ರಯಾಣ ಪಡೆಯಲು ಸಾಧ್ಯವಾಗದ ಕೆಳವರ್ಗದ ಜನರ ಗತಿ ಏನು? ಹೆಚ್ಚಿದ ಶುಲ್ಕವು ನಮಗೆ ಕಳವಳಕಾರಿಯಾಗಿದೆ ಈ ಬಗ್ಗೆ ಸರ್ಕಾರ ಯೋಚಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.