ETV Bharat / business

ಇಕ್ಕಳದಲ್ಲಿ ಸಿಲುಕಿದ ನಿರ್ಮಲಾ: ನಮಗೂ ಶೇ 27ರಷ್ಟು ತೆರಿಗೆ ವಿಧಿಸಿ - ವಿದೇಶಿ ಕಂಪನಿಗಳ ಬೇಡಿಕೆ - ವಿದೇಶಿ ಕಂಪನಿಗಳ ಬಜೆಟ್ ನಿರೀಕ್ಷೆ

ಭಾರತ ಮತ್ತು ಬ್ರಿಟನ್​ ನಡುವೆ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಶ್ರಮಿಸುವ ಉದ್ಯಮಿ ಒಕ್ಕೂಟ ಯುಕೆ - ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಕೆಐಬಿಸಿ) ,ವಿದೇಶಿ ಮತ್ತು ದೇಶೀಯ ಕಂಪನಿಗಳ ನಡುವಿನ ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಸಮಾನತೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

tax parity
ತೆರಿಗೆ
author img

By

Published : Jan 16, 2021, 2:19 PM IST

ನವದೆಹಲಿ: ಕೇಂದ್ರ ಬಜೆಟ್ ಮಂಡಿಸುವ ದಿನಾಂಕ ಹತ್ತಿರವಾಗುತ್ತಿದ್ದಂತೆ ವಿದೇಶಿ ಕಂಪನಿಗಳು ಮತ್ತು ಭಾರತೀಯ ಕಂಪನಿಗಳಿಗೆ ಎರಡು ವಿಭಿನ್ನ ತೆರಿಗೆ ದರವನ್ನು ಮತ್ತೊಮ್ಮೆ ಎತ್ತಿವೆ.

ವಿದೇಶಿ ಸಂಸ್ಥೆಗಳ ಮೇಲೆ ಹೆಚ್ಚಿನ ಕಾರ್ಪೊರೇಟ್ ತೆರಿಗೆ ದರ ವಿಧಿಸಲಾಗಿದೆ ಎಂದು ಹೇಳಿದ್ದಾರೆ ಅವುಗಳನ್ನು ಅನಾನುಕೂಲಗೊಳಿಸುತ್ತದೆ. ಭಾರತ ಮತ್ತು ಬ್ರಿಟನ್​ ನಡುವೆ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಶ್ರಮಿಸುವ ಉದ್ಯಮಿ ಒಕ್ಕೂಟ ಯುಕೆ - ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಕೆಐಬಿಸಿ), ವಿದೇಶಿ ಮತ್ತು ದೇಶೀಯ ಕಂಪನಿಗಳ ನಡುವಿನ ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಸಮಾನತೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರದಲ್ಲಿನ ಕಡಿತ ಮತ್ತು ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) ರದ್ದತಿಯೊಂದಿಗೆ ವಿದೇಶಿ ಮತ್ತು ದೇಶೀಯ ಕಂಪನಿಗಳಿಗೆ ಅನ್ವಯವಾಗುವ ತೆರಿಗೆ ದರಗಳ ನಡುವೆ ಗಮನಾರ್ಹ ಅಸಮಾನತೆ ಸೃಷ್ಟಿಯಾಗುತ್ತಿದೆ ಎಂದು ಯುಕೆ - ಐಬಿಸಿ ಹಣಕಾಸು ಸಂಸ್ಥೆಯು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದಿದೆ.

ಉದ್ಯಮದ ಲೆಕ್ಕಾಚಾರದ ಪ್ರಕಾರ, ವಿದೇಶಿ ಸಂಸ್ಥೆಗಳ ಮೇಲಿನ ತೆರಿಗೆ ದರವು ಭಾರತೀಯ ಕಂಪನಿಗಳಿಗೆ ಶೇ 25.17ರಷ್ಟು ಇದ್ದರೇ ಅವುಗಳ ಮೇಲೆ ಶೇ 43.68ರಷ್ಟಿದೆ.

ದೇಶೀಯ ಕಂಪನಿಗಳು ಮತ್ತು ಭಾರತದಲ್ಲಿ ಶಾಖಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿಗಳಿಗೆ ಲಾಭಾಂಶ ಲೆಕ್ಕಾಚಾರದ ವಿಧಾನವು ವಿದೇಶಿ ಬ್ಯಾಂಕ್​ಗಳ ಶಾಖೆಗಳ ಮೇಲೆ ವಿಧಿಸಲಾದ ಕೆಲವು ನಿರ್ಬಂಧ ಹೊರತುಪಡಿಸಿ ಸಾಮಾನ್ಯವಾಗಿ ಒಂದೇ ಆಗಿರುತ್ತದೆ ಎಂದು ಹೇಳಿದೆ.

ಜಾಗತಿಕವಾಗಿ ಒಂದೇ ಉದ್ಯಮದ ಎಲ್ಲ ರೀತಿಯ ಕಂಪನಿಗಳಲ್ಲಿ ತೆರಿಗೆ ದರ ಸಮಾನತೆ ಹೊಂದಿರುವುದು ಸಾಮಾನ್ಯ ವಿಧಾನವಾಗಿದೆ ಎಂದು ಯುಕೆಐಬಿಸಿಯ ಗ್ರೂಪ್​ ಸಿಇಒ ಜಯಂತ್ ಕೃಷ್ಣ ಹೇಳಿದರು.

ಇದನ್ನೂ ಓದಿ: GDP-8ಕ್ಕೆ ಕುಸಿದರೂ 2030ರಲ್ಲಿ ಸಾಧಿಸುವುದನ್ನು 2022ರಲ್ಲೇ ಸಾಧಿಸುತ್ತೇವೆ: RBI ಮಾಜಿ ಗವರ್ನರ್​ ವಿಶ್ವಾಸ

ಬ್ರಿಕ್ಸ್​ ದೇಶಗಳ ಉದಾಹರಣೆ ತೆಗೆದುಕೊಂಡು, ಭಾರತವನ್ನು ಹೊರತುಪಡಿಸಿ ಎಲ್ಲ ಬ್ರಿಕ್ಸ್​ ದೇಶಗಳು, ಬಹುಪಾಲು ಒಇಸಿಡಿ ರಾಷ್ಟ್ರಗಳು ಮತ್ತು ಹಾಂಕಾಂಗ್​, ಸಿಂಗಾಪುರದಂತಹ ಇತರ ಪ್ರಮುಖ ಹಣಕಾಸು ಕೇಂದ್ರಗಳು ದೇಶೀಯ ಮತ್ತು ವಿದೇಶಿ ಕಂಪನಿಗಳಿಗೆ ಒಂದೇ ರೀತಿಯ ತೆರಿಗೆ ರಚನೆಗಳನ್ನು ಹೊಂದಿವೆ ಎಂದರು.

ಡಿಡಿಟಿ ರದ್ದುಪಡಿಸುವುದು ಸಕಾರಾತ್ಮಕ ಹೆಜ್ಜೆಯಾಗಿದ್ದರೂ ವಿದೇಶಿ ಕಂಪನಿಗಳ ಶಾಖೆಗಳ ಸಾಂಸ್ಥಿಕ ತೆರಿಗೆ ದರ ದೇಶೀಯ ಕಂಪನಿಗಳಿಗೆ ಸರಿಸಮನಾಗಿ ತರಲು ಶಿಫಾರಸು ಮಾಡಲಾಗಿದೆ ಎಂದು ಜಯಂತ್ ಕೃಷ್ಣ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ನಿಯಂತ್ರಕ ಮತ್ತು ವಾಣಿಜ್ಯ ಕಾರಣಗಳಿಂದಾಗಿ ವಿದೇಶಿ ಬ್ಯಾಂಕ್​ಗಳು ಸಾಮಾನ್ಯವಾಗಿ ಭಾರತದಲ್ಲಿ ಒಂದು ಶಾಖೆಯಾಗಿ ಕಾರ್ಯನಿರ್ವಹಿಸುತ್ತವೆ. ಅಂತಹ ಶಾಖೆಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡುವುದರಿಂದ ಒಂದು ಮಟ್ಟದ ವ್ಯಾಪ್ತಿ ಸಿಗುತ್ತದೆ. ಇದು ಶಾಖಾ ಮಾರ್ಗದ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿರುವ ವಿದೇಶಿ ಸಂಸ್ಥೆಗಳಿಂದ ಹೂಡಿಕೆಗೆ ಉತ್ತೇಜನ ನೀಡುತ್ತದೆ ಎಂದು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸುವ ಪ್ರಯತ್ನಕ್ಕೆ ಕಾರ್ಪೊರೇಟ್​ ತೆರಿಗೆಗೆ ಎರಡು ವಿಭಿನ್ನ ತೆರಿಗೆ ದರಗಳ ಸಮಯೋಚಿತ ನಿರ್ಣಯದ ಸಮಯ ಇದಾಗಿದೆ.

2015ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್​ ತೆರಿಗೆಯನ್ನು ಶೇ 25ಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದರು.

2019ರ ಸೆಪ್ಟೆಂಬರ್​ನಲ್ಲಿ ಅವರ ಉತ್ತರಾಧಿಕಾರಿಯಾಗಿ ಬಂದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ನಿಧಾನಗತಿಯ ಆರ್ಥಿಕತೆಯನ್ನು ಬೆಂಬಲಿಸಲು ಖಾಸಗಿ ಹೂಡಿಕೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ ಪರಿಣಾಮಕಾರಿ ಕಾರ್ಪೊರೇಟ್​ ತೆರಿಗೆ ದರವನ್ನು ಶೇ 25.17ಕ್ಕೆ ಇಳಿಸುವ ಮೂಲಕ ಜೇಟ್ಲಿ ಭರವಸೆ ಜಾರಿಗೆ ತಂದರು.

ಈ ಐತಿಹಾಸಿಕ ಕಡಿತವು ವಿದೇಶಿ ಸಂಸ್ಥೆಗಳಿಗೆ ಅನ್ವಯವಾಗುವ ಕಾರ್ಪೊರೇಷನ್ ತೆರಿಗೆ ದರದ ನಡುವೆ ವ್ಯಾಪಕ ಅಂತರ ಬಿಟ್ಟುಕೊಟ್ಟು ಶೇ 43ಕ್ಕಿಂತ ಹೆಚ್ಚು ದರದಲ್ಲಿ ತೆರಿಗೆ ಕಟ್ಟುತ್ತಿವೆ. ಭಾರತೀಯ ಕಂಪನಿಗಳು ಶೇ 25ಕ್ಕಿಂತ ಕಡಿಮೆ ತೆರಿಗೆ ದರಕ್ಕೆ ಒಳಪಟ್ಟಿವೆ.

ಈ ವ್ಯಾಪಕ ಅಂತರವು ದೇಶದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸುವಲ್ಲಿ ಒಂದು ದೊಡ್ಡ ಅಡಚಣೆಯಾಗಿ ಕಂಡು ಬರುತ್ತಿದೆ. 2017ರ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆದ ಪ್ರಮುಖ ತೆರಿಗೆ ಕಡಿತದ ನಂತರ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ಬದಲು ಅಮೆರಿಕದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಲು ಕಾರ್ಪೊರೇಟ್​ಗಳೀಗೆ ಶಾಶ್ವತ ತೆರಿಗೆ ವಿನಾಯಿತಿ ನೀಡಿತು.

ಯುಕೆಐಬಿಸಿಯ ಸಮೂಹ ಅಧ್ಯಕ್ಷ ರಿಚರ್ಡ್ ಹೀಲ್ಡ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಜೆಟ್ ಪ್ರಕಟಣೆಗಳ ಮೂಲಕ ಆರ್ಥಿಕ ಸುಧಾರಣೆ ವೇಗವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಯುಕೆಐಬಿಸಿ ಸ್ವಯಂಚಾಲಿತ ಮಾರ್ಗದಲ್ಲಿ ರಕ್ಷಣಾ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐ ಬಯಸಿದೆ, ಪ್ರಸ್ತುತ ಇದು ಶೇ 74ರಷ್ಟಿದೆ. ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಅಸ್ತಿತ್ವದಲ್ಲಿರುವ ಶೇ 49ರಿಂದ 74ಕ್ಕೆ ಹೆಚ್ಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.