ETV Bharat / business

ಕೇಂದ್ರ ಬಜೆಟ್:​ ಸಬ್ಸಿಡಿ 'ಗಿವ್​ ಇಟ್​ಅಪ್'​ನಂತೆ ಸ್ವಯಂಪ್ರೇರಿತ 'ಗುಜುರಿ ನೀತಿ' ತನ್ನಿ- ನಿರ್ಮಲಾಗೆ ಡೀಲರ್ಸ್​ ಡಿಮ್ಯಾಂಡ್​

ತಮ್ಮ ಹಳೆಯ ವಾಹನಗಳನ್ನು ಹೊಸದರೊಂದಿಗೆ ಬದಲಾಯಿಸುವಂತೆ ಒತ್ತಾಯಿಸುವುದಕ್ಕಿಂತ ಜನರನ್ನು ಪ್ರೋತ್ಸಾಹಿಸುವುದು ಹೆಚ್ಚು ಕಾರ್ಯಸಾಧ್ಯವಾಗಿದೆ. ಗ್ರಾಹಕರು ಅನಿಲ ಸಬ್ಸಿಡಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟಿದ್ದರಲ್ಲಿ ನಾವು ಈಗಾಗಲೇ ಇದೇ ರೀತಿಯ ಯಶಸ್ಸು ಕಂಡಿದ್ದೇವೆ ಎಂದು ಫಾಡಾ ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದರು.

Budget
Budget
author img

By

Published : Jan 22, 2021, 12:31 PM IST

Updated : Jan 22, 2021, 6:58 PM IST

ನವದೆಹಲಿ: ಸವಲತ್ತು ಹೊಂದಿದ ಶ್ರೀಮಂತ ಎಲ್‌ಪಿಜಿ ಬಳಕೆದಾರರು ಸ್ವಯಂ ಪ್ರೇರಣೆಯಿಂದ ತಮ್ಮ ಸಬ್ಸಿಡಿ ಬಿಟ್ಟುಕೊಂಡುವಂತೆ ಪ್ರೇರೇಪಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ‘ಗಿವ್ ಇಟ್ ಅಪ್’ (ಸಬ್ಸಿಡಿ ಸಿಲಿಂಡರ್ ವಾಪಸ್​) ಅಭಿಯಾನದ ಯಶಸ್ಸು ಉದಾಹರಣೆ ತೆಗೆದುಕೊಂಡ ವಾಹನ ವಿತರಕರು ಸ್ವಯಂಪ್ರೇರಿತ ಸ್ಕ್ರ್ಯಾಪೇಜ್ ನೀತಿ ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದರು.

‘ಸ್ಟಿಕ್’ (ತೋರ್ಪಡೆ) ಮಾಡುವುದಕ್ಕಿಂತ ‘ಕ್ಯಾರೆಟ್’ (ಮನವೊಲಿಕೆ) ಅಗತ್ಯವನ್ನು ಒತ್ತಿ ಹೇಳಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ಫೆಬ್ರವರಿ 1ರಂದು ಮಂಡಿಸಲಿರುವ 2021-22ರ ಬಜೆಟ್‌ನಲ್ಲಿ ಒಂದು ಯೋಜನೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದೆ.

ತಮ್ಮ ಹಳೆಯ ವಾಹನಗಳನ್ನು ಹೊಸದರೊಂದಿಗೆ ಬದಲಾಯಿಸುವಂತೆ ಒತ್ತಾಯಿಸುವುದಕ್ಕಿಂತ ಜನರನ್ನು ಪ್ರೋತ್ಸಾಹಿಸುವುದು ಹೆಚ್ಚು ಕಾರ್ಯಸಾಧ್ಯವಾಗಿದೆ. ಗ್ರಾಹಕರು ಅನಿಲ ಸಬ್ಸಿಡಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟಿದ್ದರಲ್ಲಿ ನಾವು ಈಗಾಗಲೇ ಇದೇ ರೀತಿಯ ಯಶಸ್ಸು ಕಂಡಿದ್ದೇವೆ ಎಂದು ಫಾಡಾ ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದರು.

2000ರ ಮಾರ್ಚ್ 31ರವರೆಗೆ ನೋಂದಾಯಿತ ಎಲ್ಲ ವಾಹನಗಳಿಗೆ ಈ ನೀತಿ ವಿಸ್ತರಿಸಬೇಕೆಂದು ವಿತರಕರ ಸಂಘವು ಹಣಕಾಸು ಸಚಿವರನ್ನು ಒತ್ತಾಯಿಸಿತು.

2000ರ ಮಾರ್ಚ್ 31ರವರೆಗೆ ನೋಂದಾಯಿಸಲಾದ ಎಲ್ಲ ವಾಹನಗಳು ಆಧುನಿಕ ಫ್ಲೀಟ್ ವಾಹನ ಬದಲಿ ಯೋಜನೆಯಡಿ ಅರ್ಹತೆ ಪಡೆಯಬೇಕು ಎಂದು 'ಈಟಿವಿ ಭಾರತ' ಜತೆ ಮಾತನಾಡುತ್ತಾ ಒತ್ತಾಯಿಸಿದ್ದರು.

ಇದನ್ನೂ ಓದಿ: ಗೂಳಿಯ ಓಟಕ್ಕೆ ಕರಡಿ ಬ್ರೇಕ್: 152 ಅಂಕ ಕುಸಿದ ಸೆನ್ಸೆಕ್ಸ್​

ಈ ಸ್ವಯಂಪ್ರೇರಿತ ಸ್ಕ್ರ್ಯಾಪೇಜ್ ಯೋಜನೆಗೆ ಹಣಕಾಸಿನ ಪ್ರೋತ್ಸಾಹ ಅಗತ್ಯವೂ ಇದೆ. ಇದು ಪ್ರಮುಖ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದೊರೆತ ತಕ್ಷಣದ ಫಲಿತಾಂಶದಂತೆ ನಮ್ಮಲ್ಲಿಯೂ ಯಶಸ್ಸು ಸಾಧಿಸಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದರು.

ಏಕಮುಖಿ ವಿಂಡೋ ಫ್ಲೀಟ್​ ಆಧುನೀಕರಣ ಕಾರ್ಯಕ್ರಮದ ಬದಲಿಗೆ ಹಣಕಾಸಿನ ಪ್ರೋತ್ಸಾಹ ಮತ್ತು ರಿಯಾಯಿತಿ ನೀಡುವ ಮೂಲಕ ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಇಟಲಿಯಲ್ಲಿ ಇದೇ ರೀತಿಯ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದರು.

ಗಿವ್ ಇಟ್ ಅಪ್ ಅಭಿಯಾನ ಯಶಸ್ವಿ ಯೋಜನೆ ಎಂದು ಪರಿಗಣಿಸಲಾಗಿದೆ. 2015ರ ಮಾರ್ಚ್​​ನಲ್ಲಿ ಪ್ರಾರಂಭವಾದಾಗಿನಿಂದ 1 ಕೋಟಿಗೂ ಹೆಚ್ಚು ಎಲ್‌ಪಿಜಿ ಗ್ರಾಹಕರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದಾರೆ.

ಬೇಡಿಕೆ ಹೆಚ್ಚಿಸುವತ್ತ ಗಮನ ಕೊಡಿ

ಅನ್ಲಾಕ್ ಮಾರ್ಗಸೂಚಿಗಳ ಜತೆ ಸರಬರಾಜು ಸುತ್ತಲಿನ ಸಮಸ್ಯೆಗಳನ್ನು ಹೆಚ್ಚಾಗಿ ಪರಿಹರಿಸಲಾಗುತ್ತಿರುವುದರಿಂದ, ವಾಹನ ಮಾರಾಟಗಾರರ ಬೇಡಿಕೆ ಪುನರುಜ್ಜೀವನಗೊಳಿಸುವತ್ತ ಗಮನಹರಿಸಬೇಕೆಂದು ವಾಹನ ವಿತರಕರು ಸೂಚಿಸಿದರು.

ಮುಂಬರುವ 2021ರ ಕೇಂದ್ರ ಬಜೆಟ್ ಸಾಂಕ್ರಾಮಿಕ ಮಂದಗತಿಯಿಂದ ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಬಳಕೆಯ ಬೇಡಿಕೆ ಹೆಚ್ಚಿಸುವ ಕ್ರಮಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಫಾಡಾ ಹೇಳಿದೆ.

Last Updated : Jan 22, 2021, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.