ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬಳಕೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಆದ್ಯತಾ ವಲಯದ ಸಾಲ (ಪಿಎಸ್‌ಎಲ್) ವಿಭಾಗದ ಅಡಿ ಇವಿಗಳಿಗೆ ಹಣಕಾಸು ಒದಗಿಸಲು ಬ್ಯಾಂಕ್ಗಳಿಗೆ ಅವಕಾಶ ನೀಡುವಂತೆ ಕೇಂದ್ರದ ಥಿಂಕ್ ಟ್ಯಾಂಕ್ ನೀತಿ ಆಯೋಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ (ಆರ್‌ಬಿಐ) ಶಿಫಾರಸು ಮಾಡಿದೆ.
ರಾಕಿ ಮೌಂಟೇನ್ ಇನ್ಸ್ಟಿಟ್ಯೂಟ್ (ಆರ್ಎಂಐ) ಸಹಯೋಗದೊಂದಿಗೆ ನೀತಿ ಆಯೋಗ ಸಿದ್ಧಪಡಿಸಿದ ‘ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಫೈನಾನ್ಸಿಂಗ್ ಸಜ್ಜುಗೊಳಿಸುವಿಕೆ’ ಎಂಬ ಶೀರ್ಷಿಕೆಯ ವರದಿ ತಯಾರಿಸಿದ್ದು, ಇವಿ ಹಣಕಾಸು ಏರಿಕೆಗೆ ಹತ್ತು ಪರಿಹಾರಗಳನ್ನು ಥಿಂಕ್ ಟ್ಯಾಂಕ್ ಶಿಫಾರಸು ಮಾಡಿದೆ ಎಂದು ನೀತಿ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿಯಲ್ಲಿ ಶಿಫಾರಸು ಮಾಡಲಾದ 10 ಪರಿಹಾರಗಳಲ್ಲಿ ಆದ್ಯತೆಯ ವಲಯದ ಸಾಲ ನೀಡುವಂತಹ ಹಣಕಾಸು ಸಾಧನಗಳು ಮುಖ್ಯವಾಗಿ ಸೇರಿವೆ ಎಂದಿದೆ.
ಇದನ್ನೂ ಓದಿ: ವಿದೇಶಿ ನಿಧಿಯ ಒಳಹರಿವಿಗೆ ತ್ರಿಶತಕ ಸಿಡಿಸಿದ ಮುಂಬೈ ಷೇರುಪೇಟೆ!
ಈ ಪರಿಹಾರಗಳು ಹಣಕಾಸಿನ ಮಧ್ಯಸ್ಥಿಕೆಗೆ ಹೆಚ್ಚಿನ ಹತೋಟಿ ಪ್ರತಿನಿಧಿಸುತ್ತವೆ. ಅನೇಕ ಭಾರತವನ್ನು ಮೀರಿ ಪ್ರಸ್ತುತ ಅಗತ್ಯ ಎಂದು ನಾವು ನಂಬುತ್ತೇವೆ. ಪಿಎಸ್ಎಲ್ ವರ್ಗದ ಅಡಿಯಲ್ಲಿ ಇವಿಗಳನ್ನು ಸೇರಿಸುವುದರಿಂದ ಈ ವಲಯಕ್ಕೆ ಸಾಲ ಹೆಚ್ಚಿಸಲು ಬ್ಯಾಂಕ್ಗಳು ಉತ್ತೇಜನ ನೀಡುತ್ತವೆ.
ಪ್ರಸ್ತುತ ಆರ್‌ಬಿಐ ಮಾನದಂಡಗಳ ಪ್ರಕಾರ, ಬ್ಯಾಂಕ್ಗಳು ನಿವ್ವಳ ಸಾಲದ ಶೇ 40ರಷ್ಟು ಆದ್ಯತೆಯ ಕ್ಷೇತ್ರಗಳಿಗೆ ಮೀಸಲಿಡಬೇಕು. ಇದಲ್ಲದೇ, ಪಿಎಲ್‌ಎಸ್ ಮಾನದಂಡಗಳು ಬ್ಯಾಂಕ್ಗಳಿಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಾಲ ನೀಡಲು ಅವಕಾಶ ನೀಡುತ್ತವೆ. ಪ್ರಸ್ತುತ ಕೃಷಿ, ವಸತಿ, ಸ್ಟಾರ್ಟ್ ಅಪ್ ಮತ್ತು ಶಿಕ್ಷಣ ಸೇರಿದಂತೆ ಎಂಟು ವಿಭಾಗಗಳು ಪಿಎಸ್ಎಲ್ ಅಡಿಯಲ್ಲಿ ಅರ್ಹತೆ ಪಡೆದಿವೆ. ಆದ್ಯತೆಯ ವಲಯದ ಮಾರ್ಗಸೂಚಿಗಳಲ್ಲಿ ಆದ್ಯತೆಯ ವಲಯದ ಸಾಲಗಳಿಗೆ ಯಾವುದೇ ಆದ್ಯತೆಯ ಬಡ್ಡಿದರ ನೀಡುವುದಿಲ್ಲ.
ಕಾಲ ಕಾಲಕ್ಕೆ ಆರ್‌ಬಿಐನ ಬ್ಯಾಂಕಿಂಗ್ ನಿಯಂತ್ರಣ ಇಲಾಖೆ ಹೊರಡಿಸಿದ ನಿರ್ದೇಶನದಂತೆ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಇರುತ್ತದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.