ಮುಂಬೈ: ಕೋವಿಡ್-19 ಹಿನ್ನಡೆಯಿಂದ ಭಾರತ ಹೊರಬರಲು ಸಹಜ ಹುರುಪು ಮತ್ತು ತಳಮಟ್ಟದಿಂದ ಪರಿಣಾಮಕಾರಿಯಾಗಿ ಜಾರಿಗೆ ತರುವ ದಿಟ್ಟ ಸರ್ಕಾರದ ಸುಧಾರಣೆಗಳ ಅಗತ್ಯವಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಆರ್‌ಬಿಐಗೆ ಬ್ಯಾಲೆನ್ಸ್‌ಶೀಟ್ ವಿಸ್ತರಿಸುವ ಸ್ಥಳವು ಅಗಣಿತವಲ್ಲ (ಇನ್ಫಿನಿಟಿ) ಮತ್ತು ಹಣದುಬ್ಬರವನ್ನು ಮೇಲ್ವಿಚಾರಣೆ ಮಾಡುವಲ್ಲಿ ಕೇಂದ್ರೀಯ ಬ್ಯಾಂಕ್ ಸಾಕಷ್ಟು ಗಮನ ಹರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಳೆದ ಕೆಲವು ವರ್ಷಗಳಿಂದ ಬೆಳವಣಿಗೆಯಲ್ಲಿನ ಕುಸಿತದಿಂದಾಗಿ ಭಾರತವು ತನ್ನ ಗೆಳೆಯರೊಂದಿಗೆ ಹೋಲಿಸಿದ್ರೆ ಪ್ರಸ್ತುತ ಬಿಕ್ಕಟ್ಟಿನ ಸ್ಥಿತಿಯಲ್ಲಿ ಈಗತಾನೇ ಸಂಕಷ್ಟವನ್ನ ಪ್ರವೇಶಿಸಿದೆ ಎಂದರು.
ನಿಜವಾಗಿಯೂ ಧೈರ್ಯಶಾಲಿ ಸರ್ಕಾರದ ಕ್ರಮದಿಂದ ಸಹಜ ಹುರುಪು ಮನೋಭಾವವನ್ನು ಸೃಷ್ಟಿಸಬೇಕಾಗಿದೆ. ದುರದೃಷ್ಟವಶಾತ್ ಈವರೆಗೆ, ಕೃಷಿಯಲ್ಲಿ ಘೋಷಿಸಲ್ಪಟ್ಟ ಕೆಲವು ಕ್ರಮಗಳನ್ನು ಮುಂದಿನ ದಿನಗಳಲ್ಲಿ ನೋಡಬಹುದು ಎಂದು ಲಿಂಕ್ಡ್ಇನ್ ಸಂವಾದದಲ್ಲಿ ರಾಜನ್ ಹೇಳಿದರು. ಭಾರತದಲ್ಲಿ ಗಂಭೀರ ರಾಜಕೀಯ ಸುಧಾರಣೆಗಳನ್ನು ತರುವ ಅಗತ್ಯವಿದೆ. ಅದನ್ನು ನಾವು ಯಾವಾಗಲೂ ಕಪಾಟಿನಲ್ಲಿ ಇಟ್ಟುಕೊಂಡಿದ್ದೇವೆ ವಿನಃ ಅದನ್ನು ಕಾರ್ಯಗತಗೊಳಿಸಲಿಲ್ಲ.
ಕೆಲವೊಮ್ಮೆ ರಾಜಕೀಯ ಒಮ್ಮತ ಬರುವವರೆಗೂ ಕಾಯುತ್ತಿದ್ದೆವು. ರಾಜಕೀಯ ಒಮ್ಮತವನ್ನು ತ್ವರಿತವಾಗಿ ಸ್ಥಾಪಿಸಿ ಅದನ್ನು ಜಾರಿಗೆ ತರಬಹದಾದ ದಿಟ್ಟ ರಾಜಕೀಯ ನಡೆ ತರಬೇಕಿದೆ. ಇಂತಹ ಕ್ರಮಗಳಿಂದ ಭಾರತಕ್ಕೆ ಮುಂದೆ ಹೋಗಲು ಸಹಾಯಕವಾಗುತ್ತದೆ ಎಂದು ಪ್ರತಿಪಾದಿಸಿದರು. ಮುಂದಿನ ಕೆಲ ವರ್ಷಗಳವರೆಗೆ ಇದನ್ನು ಮಾಡಲು ಸಾಧ್ಯವಾದ್ರೆ, ವಾಸ್ತವದಲ್ಲಿ ಜಾರಿಗೆ ತಂದ ಸುಧಾರಣೆಗಳು ಪರಿಣಾಮಕಾರಿಯಾದ ರೀತಿಯಲ್ಲಿ ಸುಧಾರಿಸಬಹುದಾದ್ರೆ, ನಮಗೆ ಸಾಕಷ್ಟು ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ಆತ್ಮನಿರ್ಭರ್ ಅಭಿಯಾನ ಒಂದು ಉತ್ತಮ ಉಪಕ್ರಮ. ಆದರೆ, ಭಾರತವು ಮೊದಲು ಅದರ ನ್ಯೂನ್ಯತೆಗಳನ್ನು ಸರಿಪಡಿಸಬೇಕಾಗಿದೆ. ಬರೀ ಮಾತುಕತೆ ಮತ್ತು ಸಂಕೋಚಿತ ಕ್ರಮದಲ್ಲಿ ಮುಂದುವರಿದ್ರೇ ನಾವು ಜಾರಿ ಬೀಳುತ್ತೇವೆ. ನಿರಂತರ ನಿಧಾನಗತಿಯ ಬೆಳವಣಿಗೆಯ ಪರಿಣಾಮಗಳು ಭಯಪಡಿಸುತ್ತವೆ. ನಮಗೆ ಪ್ರಸ್ತುತ ಪ್ರಬಲ, ನಿರಂತರ, ಬುದ್ಧಿವಂತಿಕೆಯ ಕ್ರಮಗಳು ಬೇಕಿದೆ ಎಂದು ರಾಜನ್ ಕರೆ ನೀಡಿದರು.