ಬೆಂಗಳೂರು: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯದ ಜನತೆಗೆ ಕನ್ನಡದಲ್ಲಿ ಶುಭಾಶಯ ತಿಳಿಸಿದ್ದ ಇಸ್ರೇಲ್, ಇಂದು ಕನ್ನಡಿಗರಿಗೆ ಮತ್ತೊಂದು ಉಡುಗೊರೆ ನೀಡಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯದ ಹೋರಾಟವನ್ನು ಬಲಪಡಿಸಲು ನಗರ ಮೂಲದ ಇಸ್ರೇಲಿ ಕಾನ್ಸುಲೇಟ್ ಸರ್ಕಾರಿ ಆಸ್ಪತ್ರೆಗಳಲ್ಲಿ 25 ಆಕ್ಸಿಜನ್ ಸಾಂದ್ರಕಗಳನ್ನು ದೇಣಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕದ ಕೊರೊನಾ ಹೋರಾಟದ ಒಗ್ಗಟ್ಟಿನ ಪ್ರದರ್ಶನದಲ್ಲಿ ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲೇಟ್ ಜನರಲ್, ರಾಜ್ಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಆಕ್ಸಿಜನ್ ಸಾಂದ್ರಕಗಳನ್ನು ಪೂರೈಸಿದೆ ಎಂದು ದೂತಾವಾಸದ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದರು.
ಮೂರು ವರ್ಷಗಳ ನಂತರ ನಗರದಿಂದ ವರ್ಗಾವಣೆಯಾದ ಕಾನ್ಸುಲ್ ಜನರಲ್ ಡಾನಾ ಕುರ್ಷ್ ಅವರು ಹಿರಿಯ ಸರ್ಕಾರಿ ಅಧಿಕಾರಿ ಮಹೇಂದ್ರ ಜೈನ್ ಅವರನ್ನು ಭೇಟಿ ಮಾಡಿ ಆಗಸ್ಟ್ 3ರಂದು ದೇಣಿಗೆ ಯೋಜನೆಯ ವಿವರಗಳನ್ನು ಅಂತಿಮಗೊಳಿಸಿದರು.
25 ಆಕ್ಸಿಜನ್ ಕಿಟ್ಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಸೊಸೈಟಿಗೆ ಸೋಮವಾರ ಹಸ್ತಾಂತರಿಸಿದರು.
ನಮ್ಮ ಬೆಂಗಳೂರು 2013ರಿಂದ ದಕ್ಷಿಣ ಭಾರತಕ್ಕೆ ಇಸ್ರೇಲಿ ಧೂತವಾಸದ ನೆಲೆಯಾಗಿದೆ. ಕಳೆದ ಮೂರು ವರ್ಷಗಳಿಂದ ನಮ್ಮ ಸ್ವಂತ ಮನೆಯಾಗಿದೆ. ರಾಜ್ಯವನ್ನು ಆರೋಗ್ಯಕರ ಮತ್ತು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಕರ್ನಾಟಕ ಸರ್ಕಾರದ ಪ್ರಯತ್ನಗಳಿಗೆ ಸೇರ್ಪಡೆಗೊಳ್ಳುವುದು ನನ್ನ ನೆಚ್ಚಿನ ಮತ್ತು ಸ್ನೇಹದ ಒಂದು ಸಣ್ಣ ಸಂಕೇತವಾಗಿದೆ ಎಂದು ನಿರ್ಗಮಿತ ರಾಜತಾಂತ್ರಿಕ ಕುರ್ಷ್ ಹೇಳಿದರು.