ನವದೆಹಲಿ: ವ್ಯವಹಾರ ಚಟುವಟಿಕೆಗಳ ಕ್ರಮೇಣ ಪುನರಾರಂಭ ಮತ್ತು ದೀರ್ಘಾವಧಿಯ ಸಾಲ ಸಹಿಷ್ಣುತೆಯಿಂದ ಹೊರಹೊಮ್ಮಲಿರುವ ಆಸ್ತಿ ಗುಣಮಟ್ಟದ ಅಪಾಯದ ನಡುವೆ ಬ್ಯಾಂಕ್ಗಳು ತಮ್ಮ ಎಲ್ಲ ಗ್ರಾಹಕರಿಗೆ ಎರಡನೇ ಅವಧಿಯ ಬಡ್ಡಿ ನಿಷೇಧವನ್ನು ವಿಸ್ತರಿಸದಿರಬಹುದು ಎನ್ನಲಾಗುತ್ತಿದೆ.
ಮಾರ್ಚ್ 1ರಿಂದ ಮೇ 31ರವರೆಗಿನ ಕಂತು ಅವಧಿಯಲ್ಲಿ ಬಡ್ಡಿ ಮರುಪಾವತಿಯ ನಿಷೇಧ ಪಡೆದ ಗ್ರಾಹಕರಿಗೆ ಸಂಬಂಧಿಸಿದಂತೆ ಬ್ಯಾಂಕ್ಗಳು ತಮ್ಮ ಸಾಲದ ಖಾತೆಯನ್ನು ಮೌಲ್ಯಮಾಪನ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಉತ್ತಮ ಟ್ರ್ಯಾಕ್ ರೆಕಾರ್ಡ್ ಮತ್ತು ಆರೋಗ್ಯಕರ ವ್ಯವಹಾರ ಕಾರ್ಯಾಚರಣೆ ಹೊಂದಿರುವ ಕೆಲವು ಗ್ರಾಹಕರಿಗೆ ಮಾತ್ರ ಎರಡನೇ ಅವಧಿಯ ನಿಷೇಧವನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಮೊದಲ ಸುತ್ತಿನಂತಲ್ಲದೇ ಬ್ಯಾಂಕ್ಗಳು ಈಗ ಹೊಸ / ಹಳೆಯ ಗ್ರಾಹಕರಿಗೆ ಸಾಲ ಮುಂದೂಡಿಕೆಯನ್ನು ಆಯ್ದ ಆಧಾರದಲ್ಲಿ ವಿಸ್ತರಿಸಲಿವೆ. ಹೆಚ್ಚಿನ ಬಡ್ಡಿ ವೆಚ್ಚ ನೀಡಿದರೆ ಉತ್ತಮ ಗ್ರಾಹಕರು ಸಹ ಹಿಂಜರಿಯುತ್ತಾರೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ಪ್ರಕಟಣೆಗಳ ಕುರಿತು ಹಲವು ಬ್ಯಾಂಕರ್‌ಗಳೊಂದಿಗೆ ಚರ್ಚಿಸಿದ ನಂತರ ಸಿದ್ಧಪಡಿಸಿದ ಎಮ್ಕೆ ಗ್ಲೋಬಲ್ ವರದಿಯಲ್ಲಿ ಉಲ್ಲೇಖವಾಗಿದೆ.
ಕೊರೊನಾದ ಕಾರಣಕ್ಕೆ ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅವಧಿ ಸಾಲಗಳು ಮತ್ತು ಕಾರ್ಯನಿರತ ಬಂಡವಾಳ ಸಾಲಗಳ ಮೇಲಿನ ಬಡ್ಡಿಯ ಪಾವತಿಗೆ ಮೂರು ತಿಂಗಳ ವಿನಾಯಿತಿ ಘೋಷಣೆ ಮಾಡಿತ್ತು. ಇದೀಗ ಜೂನ್ 1ರಿಂದ ಆಗಸ್ಟ್ 31ರವರೆಗೆ ಮತ್ತೆ ವಿಸ್ತರಿಸಿದೆ. ಬ್ಯಾಂಕ್ಗಳು ತಮ್ಮ ಎಲ್ಲ ಗ್ರಾಹಕರಿಗೆ ಎರಡನೇ ಅವಧಿಯ ಬಡ್ಡಿ ನಿಷೇಧವನ್ನು ವಿಸ್ತರಿಸದಿರಬಹುದು ಎನ್ನಲಾಗುತ್ತಿದೆ.