ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ 416 ಮಂದಿ ಸಾಲ ಪಡೆದು ಹಿಂದುರುಗಿಸದ ಕಾರಣದಿಂದಾಗಿ 1.76 ಲಕ್ಷ ಕೋಟಿ ರೂ. ಬ್ಯಾಂಕ್ಗಳಿಗೆ ನಷ್ಟವಾಗಿದೆ.
ಪ್ರತಿಯೊಂದು ಸಾಲ ವಂಚನೆ ಪ್ರಮಾಣವು 100 ಕೋಟಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ್ದಾಗಿದ್ದು, ಅಷ್ಟು ಹಣ ಬಾಕಿ ಹಣ ಉಳಿಸಿಕೊಂಡಿವೆ. ಪ್ರತಿ ಸಾಲಗಾರನಿಗೆ ಸುಮಾರು 424 ಕೋಟಿ ರೂ.ನಷ್ಟು ವಸೂಲಾಗದ ಸಾಲವಿದೆ (ಎನ್ಪಿಎ) ಎಂದು ಹೇಳಲಾಗುತ್ತಿದೆ.
ದೊಡ್ಡ ಪ್ರಮಾಣದ ಸಾಲಗಳು ಮತ್ತು ಅತಿದೊಡ್ಡ ಸಾಲ ವಂಚಕ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶವು ಮೊದಲ ಬಾರಿಗೆ ಕನಿಷ್ಠ 100 ಕೋಟಿ ರೂ. ದಾಟಿದೆ.
ಎಲ್ಲ ನಿಗದಿತ ವಾಣಿಜ್ಯ ಬ್ಯಾಂಕ್ಗಳಿಗೆ ಬರಬೇಕಾದ ಮೊತ್ತವನ್ನು ಸ್ಪಷ್ಟಪಡಿಸುವಂತೆ ಮತ್ತು ಖಾತೆಗಳನ್ನು ಸರಿಯಾಗಿ ಹೊಂದಿಸುವಂತೆ ಆರ್‌ಬಿಐ ನಿರ್ದೇಶನ ನೀಡಿದ ಬಳಿಕ ಖಾಸಗಿ ಸುದ್ದಿವಾಹಿನಿ ಸಲ್ಲಿಸಿದ ಆರ್ಟಿಐನಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಆರ್‌ಟಿಐ ಪ್ರತ್ಯುತ್ತರದಲ್ಲಿ 2014-15ರಿಂದ ದೇಶದ ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್ಗಳ ವಸೂಲಾಗದ ಮೊತ್ತದಲ್ಲಿ ನಿರಂತರ ಏರಿಕೆಯಾಗಿರುವುದು ಕಂಡುಬಂದಿದೆ. 2015 ಮತ್ತು 2018ರ ನಡುವೆ ಒಟ್ಟು 2.17 ಲಕ್ಷ ಕೋಟಿ ರೂ.ಯಷ್ಟು ವಾಣಿಜ್ಯ ಬ್ಯಾಂಕ್ಗಳ ಬ್ಯಾಡ್ ಲೋನ್ ಇದೆ.