ETV Bharat / business

ಸಾಲ ನೀಡಲು ಬ್ಯಾಂಕ್​ಗಳು ನಿರಾಕರಿಸಿದ್ರೆ ನನ್ನ ಗಮನಕ್ಕೆ ತನ್ನಿ.. ನಿರ್ಮಲಾ ಸೀತಾರಾಮನ್ - ನಿರ್ಮಲಾ ಸೀತಾರಾಮನ್

ತುರ್ತು ಸಾಲ ಸೌಲಭ್ಯದ ವ್ಯಾಪ್ತಿಗೆ ಬರುವ ಎಂಎಸ್‌ಎಂಇಗಳಿಗೆ ಬ್ಯಾಂಕ್​ಗಳು ಸಾಲ ನಿರಾಕರಿಸುವಂತಿಲ್ಲ. ನಿರಾಕರಿಸಿದರೆ ಅಂತಹ ನಿದರ್ಶನಗಳನ್ನು ವರದಿ ಮಾಡಬೇಕು. ನಾನು ಅದನ್ನು ಪರಿಶೀಲಿಸುತ್ತೇನೆ..

credit
ಸಾಲ
author img

By

Published : Jul 31, 2020, 7:19 PM IST

ನವದೆಹಲಿ : ತುರ್ತು ಸಾಲ ಸೌಲಭ್ಯ ವ್ಯಾಪ್ತಿಯಡಿ ಬರುವ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳ (ಎಂಎಸ್​ಎಂಇ) ಉದ್ಯಮಿಗಳಿಗೆ ಬ್ಯಾಂಕ್​ಗಳು ಸಾಲ ನಿರಾಕರಿಸುವಂತಿಲ್ಲ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಾಕೀತು ಮಾಡಿದರು.

2020ರ ಜುಲೈ 23ರ ವೇಳೆಗೆ ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್​ಗಳು ಶೇ.100ರಷ್ಟು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತ 1,30,491.79 ಕೋಟಿ ರೂ.ಗಳಾಗಿದ್ದು, ಅದರಲ್ಲಿ 82,065.01 ಕೋಟಿ ರೂ. ವಿತರಿಸಲಾಗಿದೆ.

ತುರ್ತು ಸಾಲ ಸೌಲಭ್ಯದ ವ್ಯಾಪ್ತಿಗೆ ಬರುವ ಎಂಎಸ್‌ಎಂಇಗಳಿಗೆ ಬ್ಯಾಂಕ್​ಗಳು ಸಾಲ ನಿರಾಕರಿಸುವಂತಿಲ್ಲ. ನಿರಾಕರಿಸಿದರೆ ಅಂತಹ ನಿದರ್ಶನಗಳನ್ನು ವರದಿ ಮಾಡಬೇಕು. ನಾನು ಅದನ್ನು ಪರಿಶೀಲಿಸುತ್ತೇನೆ ಎಂದು ಉದ್ಯಮ ಚೇಂಬರ್ ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಆತ್ಮನಿರ್ಭಾರ‌ ಭಾರತ ಪ್ಯಾಕೇಜ್​ನ​ ಭಾಗವಾಗಿ ಎಂಎಸ್ಎಂಇಗಳು ಸೇರಿದಂತೆ ಉದ್ಯಮಿಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ. ಶ್ಯೂರಿಟಿ ಇಲ್ಲದೆ ಸಾಲ ನೀಡುವ ಯೋಜನೆ ಘೋಷಿಸಿತ್ತು. ಇದರಡಿ ಎಂಎಸ್​ಎಂಇಗಳು ತ್ವರಿತವಾಗಿ ಸಾಲ ಪಡಿಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.