ನವದೆಹಲಿ: ಕೊರೊನಾ ಮುಂಚಿನ ಅವಧಿಯಲ್ಲಿ ಪ್ರತಿ ಉದ್ಯೋಗದ ಸರಾಸರಿ ಅರ್ಜಿಗಳಿಗೆ ಹೋಲಿಸಿದರೆ ಪ್ರಸ್ತುತ ದಿನಗಳಲ್ಲಿ ಪ್ರತಿ ಉದ್ಯೋಗದ ಅರ್ಜಿಗಳ ಪ್ರಮಾಣ ಶೇ.48ರಷ್ಟು ಏರಿಕೆಯಾಗಿದೆ ಎಂದು ಆನ್‌ಲೈನ್ ನೇಮಕಾತಿ ವೇದಿಕೆ ಕ್ವಿಕರ್ಜಾಬ್ಸ್ ವರದಿ ಮಾಡಿದೆ.
ಭಾರತದಲ್ಲಿನ ಮೆಟ್ರೊರಹಿತ ಪ್ರದೇಶಗಳಲ್ಲಿನ ಉದ್ಯೋಗ ಅರ್ಜಿಗಳಿಗೆ ಹೋಲಿಸಿದರೆ ಮೆಟ್ರೊ ನಗರಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ, ಪ್ರತಿ ಉದ್ಯೋಗಕ್ಕೆ ಅರ್ಜಿಗಳ ಪ್ರಮಾಣದಲ್ಲಿ ವ್ಯಾಪಕ ಏರಿಕೆ ಕಂಡು ಬಂದಿದೆ ಎಂದು ಬ್ಲೂ-ಕಾಲರ್ ಉದ್ಯಮದ ಮೇಲೆ ಕೋವಿಡ್ -19ರ ಪರಿಣಾಮ ಎಂಬ ವರದಿಯಲ್ಲಿ ತಿಳಿಸಿದೆ.
ಡೇಟಾ ಎಂಟ್ರಿ/ಬ್ಯಾಕ್ ಆಫೀಸ್ (ಶೇ.115ರಷ್ಟು), ಡೆಲಿವರಿ ಎಕ್ಸಿಕ್ಯೂಟಿವ್ಸ್ (ಶೇ.139ರಷ್ಟು), ಚಾಲಕ (ಶೇ.122ರಷ್ಟು), ಶಿಕ್ಷಕ (ಶೇ.108ರಷ್ಟು),ಮಾರ್ಕೆಟಿಂಗ್ (ಶೇ.179ರಷ್ಟು) ಮತ್ತು ಮಾರಾಟ (ಶೇ.187ರಷ್ಟು) ಇದೆ ಎಂದು ವರದಿ ಹೇಳಿದೆ.
ಅಂತಾರಾಷ್ಟ್ರೀಯ ವಿಮಾನ ರದ್ಧತಿ ಮತ್ತು ಅನೇಕ ರಾಷ್ಟ್ರಗಳ ಪ್ರವೇಶ/ನಿರ್ಗಮನದ ನಿಷೇಧದಿಂದ ವಿದೇಶಗಳಲ್ಲಿ ಕೆಲಸದ ಉದ್ಯೋಗಾಕಾಂಕ್ಷಿಗಳ ಅರ್ಜಿಗಳಲ್ಲಿ ಶೇ.65ರಷ್ಟು ಕುಸಿತ ಕಂಡಿದೆ. ವರ್ಕ್ ಫ್ರಮ್ ಹೋಮ್ಗೆ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಆದ್ಯತೆಯ ಆಯ್ಕೆಯಾಗಿದ್ದು, ಇದರ ವೇತನದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.