ETV Bharat / business

ಭಾರತದ ವಿರುದ್ಧ ಸೇಡಿಗೆ ಅನ್ನ, ಆಹಾರವಿಲ್ಲದೇ ಪರದಾಡುತ್ತಿರುವ ಪಾಕಿಸ್ತಾನಿಯರು..!

ಭಾರತದ ಆಹಾರ ಆಮದಿನ ಮೇಲಿನ ನಿಷೇಧವು ಪಾಕಿಸ್ತಾನದಲ್ಲಿ ಹಣದುಬ್ಬರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈಗಾಗಲೇ ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಿಯರು ನಿತ್ಯದ ಸಾಮಗ್ರಿಗಳ ಖರೀದಿಗೆ ಪರದಾಡುವಂತಾಗಿದೆ. ಏರುತ್ತಿರುವ ದಿನಸಿ ಪದಾರ್ಥಗಳ ಬೆಲೆ, ಹೀರಿಕೊಳ್ಳುತ್ತಿರುವ ವೆಚ್ಚದಿಂದ ಮನೆಯ ಬಜೆಟ್​ ನಿರ್ವಹಿಸುವುದು ದುರ್ಬಲವಾಗುತ್ತಿದೆ ಎಂದು ವ್ಯಾಪಾರಿಗಳು ಮತ್ತು ಜನರು ಅಲವತ್ತುಕೊಳ್ಳುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 9, 2019, 11:16 PM IST

ಇಸ್ಲಾಮಾಬಾದ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370 ವಿಧಿಯನ್ನು ರದ್ದುಪಡಿಸಿದ ನಂತರ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿರುವ ಪಾಕಿಸ್ತಾನದಲ್ಲಿ ಎಲ್ಲ ವಿಧದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಬಹುದೆಂದು ಪಾಕಿಸ್ತಾನದಾದ್ಯಂತ ಜನರು ಭಯಭೀತರಾಗಿದ್ದಾರೆ.

ಭಾರತದ ಆಹಾರ ಆಮದಿನ ಮೇಲಿನ ನಿಷೇಧವು ಪಾಕಿಸ್ತಾನದಲ್ಲಿ ಹಣದುಬ್ಬರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈಗಾಗಲೇ ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಿಯರು ನಿತ್ಯದ ಸಾಮಗ್ರಿಗಳ ಖರೀದಿಗೆ ಪರದಾಡುವಂತಾಗಿದೆ. ಏರುತ್ತಿರುವ ದಿನಸಿ ಪದಾರ್ಥಗಳ ಬೆಲೆ, ಹೀರಿಕೊಳ್ಳುತ್ತಿರುವ ವೆಚ್ಚದಿಂದ ಮನೆಯ ಬಜೆಟ್​ ನಿರ್ವಹಿಸುವುದು ದುರ್ಬಲವಾಗುತ್ತಿದೆ ಎಂದು ವ್ಯಾಪಾರಿಗಳು ಮತ್ತು ಜನರು ಅಲವತ್ತುಕೊಳ್ಳುತ್ತಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಪ್ರಮಾಣವು ನಮ್ಮ ದೈನಂದಿನ ಅಡುಗೆ ವೆಚ್ಚ ದುಬಾರಿಗೊಳಿಸುತ್ತಿದೆ. ಆದಾಯದಲ್ಲೂ ಹೆಚ್ಚಳವಿಲ್ಲದೇ ಹಾಲಿನಿಂದ ತರಕಾರಿ, ಮಾಂಸದವರೆಗೆ ಎಲ್ಲವೂ ದುಬಾರಿಯಾಗಿದೆ. ಭಾರತದೊಂದಿಗೆ ವ್ಯಾಪಾರ ಸಂಬಂಧ ಕಡಿಗೊಳಿಸಿದ್ದು, ನಮ್ಮ ದೈನಂದಿನ ಆಹಾರ ಸಾಮಗ್ರಿಗೆ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಪಾಕ್​ನ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದೊಂದಿಗಿನ ವ್ಯಾಪಾರ ಸಂಬಂಧ ಕಡಿದುಕೊಂಡಿದ್ದರಿಂದ ಬೀದಿ ಬದಿಯ ವ್ಯಾಪಾರಿಗಳ ಜೀವನವನ್ನೇ ಕಸಿದುಕೊಂಡಂತಾಗಿದೆ. ಪಾಕ್​ ರಾಜಕೀಯ ನಾಯಕರ ನಡೆಯಿಂದ ಸ್ಥಳೀಯ ಮಾರುಕಟ್ಟೆಗಳು ನೆಲಕಚ್ಚುತ್ತಿವೆ. ಇದರ ನೇರ ಪರಿಣಾಮ ಸಣ್ಣ- ಸಣ್ಣ ಮಾರುಕಟ್ಟೆಗಳ ಬೀರಿದೆ ಎಂದು ವ್ಯಾಪಾರಸ್ಥರು ಅಳಲುತೊಡಿಕೊಳ್ಳುತ್ತಿದ್ದಾರೆ.

ಈದ್‌ ಹಬ್ಬಕ್ಕೆ ಇನ್ನೂ 3-4 ದಿನಗಳಷ್ಟೆ ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ಗಿಜುಗುಡುತ್ತಿದ್ದ ಮಾರುಕಟ್ಟೆಗಳೆಲ್ಲ ಮಂದವಾಗಿ ಕಾಣುತ್ತವೆ. ನಾವು ತರಕಾರಿ, ಈರುಳ್ಳಿಯಂತಹ ಪದರ್ಥಾಗಳಿಗೆ ಭಾರತವನ್ನು ಅವಲಂಬಿಸಿದ್ದೇವೆ. ಈದ್‌ನಲ್ಲಿ ಈ ಆಹಾರ ಪದರ್ಥಾಗಳು ಬೇಯಿಸಿ ತಿನ್ನಲು ತುಂಬಾ ಅವಶ್ಯಕವಾಗಿದೆ. ಈರುಳ್ಳಿಯ ಬೆಲೆ ಸೇರಿದಂತೆ ಹಲವು ಅವಶ್ಯ ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಾಗಲಿವೆ. ಇಮ್ರಾನ್ ಖಾನ್ ನಾವೆಲ್ಲರೂ ಏನು ತಿನ್ನಬೇಕೆಂದು ಬಯಸುತ್ತೀಯಾ? ಹುಲ್ಲಾ? ಎಂದು ಈರುಳ್ಳಿ ಮಾರಾಟಗಾರ ಇಫ್ತಿಖರ್ ಆಕ್ರೋಶವಾಗಿ ಪ್ರಶ್ನಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.