ಬ್ರಿಟನ್: ಐರೋಪ್ಯ ಒಕ್ಕೂಟದಿಂದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಕೋಲಾಹಲ ಎದ್ದಿದ್ದು, ಇದರಿಂದಲೇ ಪ್ರಧಾನಿ ಥೆರೆಸಾ ಮೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದಾರೆ. ಬ್ರೆಕ್ಸಿಟ್ ಪರಿಣಾಮದ ಮತ್ತೊಂದು ವರದಿ ಇಂಗ್ಲೆಂಡನ್ನು ಆತಂಕಕ್ಕೀಡು ಮಾಡಿದೆ.
ವಾಣಿಜ್ಯ- ವಹಿವಾಟಿನ ಒಪ್ಪಂದವಿಲ್ಲದೆ ಯುರೋಪಿಯನ್ ಒಕ್ಕೂಟವನ್ನು ತೊರೆದರೆ ಬ್ರಿಟನ್ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಐರ್ಲೆಂಡ್ ತನ್ನ ಗಡಿ ವ್ಯಾಪ್ತಿಯಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಿ ಬಂದರುಗಳನ್ನು ಮುಕ್ತಗೊಳಿಸದಿದ್ದರೇ ಬ್ರಿಟನ್ ಅಗತ್ಯವಾದ ಇಂಧನ, ಆಹಾರ ಮತ್ತು ಔಷಧಿಯ ಕೊರತೆ ಎದುರಿಸಬೇಕಾಗುತ್ತದೆ ಎಂದು ಸರ್ಕಾರದ ಬಳಿಯ ದಾಖಲೆಗಳನ್ನು ಇರಿಸಿಕೊಂಡು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಸೂಕ್ತ ಒಪ್ಪಂದಗಳನ್ನು ಮಾಡಿಕೊಳ್ಳದೆ ಬ್ರೆಕ್ಸಿಟ್ ಅಂಗೀಕೃತಗೊಂಡಿದ್ದೇ ಆದಲ್ಲಿ ಭವಿಷ್ಯದಲ್ಲಿನ ಕೆಟ್ಟ ಪರಿಣಾಮಗಳಿಗೆ ಅವರೂ ಪಾಲುದಾರರು ಎಂದು ಮಾಧ್ಯಮವೊಂದು ಎಚ್ಚರಿಸಿದೆ.
ಇಂಗ್ಲೆಂಡ್ನಲ್ಲಿ ಶೇ 85ರಷ್ಟು ಲಾರಿಗಳ ಮಾಲೀಕರು ಫ್ರೆಂಚ್ ಸುಂಕ ಪದ್ಧತಿಯನ್ನು ಒಪ್ಪಿಕೊಂಡು ಮುಖ್ಯವಾದ ಬಂದರು ಮಾರ್ಗದಲ್ಲಿ ಸರಕು ಸಾಗಣೆಗೆ ಇಚ್ಚಿಸುತ್ತಿಲ್ಲ. ಬದಲಿ ಮಾರ್ಗವಿಲ್ಲದೇ ಈ ಮೊದಲಿನ ಬಂದರುಗಳ ಮೂಲಕ ಸಾಗಣೆ ಮುಂದುವರಿದರೆ ದಟ್ಟಣೆಯ ಪ್ರಮಾಣ ಸುಮಾರು 3 ತಿಂಗಳವರೆಗೂ ಇರಲಿದೆ ಎನ್ನಲಾಗುತ್ತಿದೆ.
ವ್ಯಾಪಕವಾದ ತಪಾಸಣೆ ತಪ್ಪಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳು ಸಮರ್ಥನೀಯವಲ್ಲವೆಂದು ಸಾಬೀತಾಗಿದೆ. ಹೀಗಾಗಿ, ಇಂಗ್ಲೆಂಡ್ ಪ್ರಾಂತ್ಯದ ಉತ್ತರ ಐರ್ಲೆಂಡ್ ಮತ್ತು ಗಣರಾಜ್ಯ ನಡುವಿನ ಕಠಿಣ ಗಡಿಯೇ ತಮ್ಮ ಮುಂದಿರುವ ಆಯ್ಕೆ ಎಂಬುದು ಸರ್ಕಾರದ ಬಯಕೆಯಾಗಿದೆ ಎಂದು ವರದಿ ಮಾಡಿದೆ.