ETV Bharat / business

ಮಾರ್ಚ್​​ ವೇಳೆಗೆ 7ನೇ ಆರ್ಥಿಕ ಗಣತಿ ಪೂರ್ಣ... ತಪ್ಪು ಮಾಹಿತಿ ನೀಡಿದರೆ ನಿಮಗೆ ಆಪತ್ತು!

author img

By

Published : Dec 14, 2019, 11:04 AM IST

ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 7ನೇ ಆರ್ಥಿಕ ಗಣತಿಗಾಗಿ ಸಿಎಸ್​​ಸಿ ಇ-ಆಡಳಿತ ಸೇವೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಗಣತಿಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಅಪ್ಲಿಕೇಷನ್‌ ಮೂಲಕ ನಡೆಸಲಾಗುತ್ತಿದೆ. 7ನೇ ಆರ್ಥಿಕ ಗಣತಿಯು 2020ರ ಮಾರ್ಚ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

7th Economic Census
7ನೇ ಆರ್ಥಿಕ ಗಣತಿ

ನವದೆಹಲಿ: ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಮೂಲಕ ರಾಷ್ಟ್ರವ್ಯಾಪಿ ನಡೆಸುತ್ತಿರುವ 7ನೇ ಆರ್ಥಿಕ ಗಣತಿಯು 2020ರ ಮಾರ್ಚ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ಮಹಾನಿರ್ದೇಶಕ (ಸಾಮಾಜಿಕ ಅಂಕಿ-ಅಂಶ) ಎ.ಕೆ.ಸಾಧು ಹೇಳಿದ್ದಾರೆ.

ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 7ನೇ ಆರ್ಥಿಕ ಗಣತಿಗಾಗಿ ಸಿಎಸ್​​ಸಿ ಇ-ಆಡಳಿತ ಸೇವೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಗಣತಿಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಅಪ್ಲಿಕೇಷನ್‌ ಮೂಲಕ ನಡೆಸಲಾಗುತ್ತಿದೆ. ಇದು ಹೆಚ್ಚಿನ ನಿಖರತೆ ಮತ್ತು ಡೇಟಾ ಸುರಕ್ಷತೆಯನ್ನು ಖಚಿತಪಡಿಸಲಿದೆ ಎಂದರು.

ದೆಹಲಿಯಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಯಲು ಸುಮಾರು 3 ತಿಂಗಳು ತೆಗೆದುಕೊಳ್ಳುತ್ತದೆ. ಎಣಿಕೆದಾರರು ಸುಮಾರು 45 ಲಕ್ಷ ಸಂಸ್ಥೆ ಮತ್ತು ಮನೆಗಳನ್ನು ಸಮೀಕ್ಷೆ ಮಾಡಲಿದ್ದಾರೆ. ಸಮೀಕ್ಷೆ ಆರಂಭಿಸಿದ 26ನೇ ರಾಜ್ಯ ದೆಹಲಿಯಾಗಿದ್ದು, ಈಗಾಗಲೇ 20 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ಪ್ರಗತಿಯಲಿದೆ ಎಂದು ಹೇಳಿದರು.

ಜನರ ವಹಿವಾಟಿನ ಆರ್ಥಿಕತೆಗೆ ಸಂಬಂಧಿಸಿದ ದತ್ತಾಂಶ ಸಂಗ್ರಹದ ಆರ್ಥಿಕ ಗಣತಿಯನ್ನು 1977ರಲ್ಲಿ ಆರಂಭಿಸಲಾಯಿತು. ಇದುವರೆಗೂ ಕೇವಲ 6 ಆರ್ಥಿಕ ಗಣತಿಗಳನ್ನು ಮಾತ್ರ ನಡೆಸಲಾಗಿದೆ. ಇದೇ ಪ್ರಥಮ ಬಾರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಸಿ ಗಣತಿ ಮಾಡುತ್ತಿರುವುದು ಸಮೀಕ್ಷೆಯ ಸಮಯ ಈ ಹಿಂದಿನ ಸಮಯಕ್ಕಿಂತ 6 ತಿಂಗಳಗಳು ತಗ್ಗಿಸಿದೆ.

ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳ ಪಟ್ಟಿ ಮಾಡುವುದು, ಉದ್ಯಮ ಕ್ಷೇತ್ರದಲ್ಲಿರುವ ಕಾರ್ಮಿಕರ ವಿವರ ಸಂಗ್ರಹಿಸುವುದು ಗಣತಿಯ ಮೂಲ ಉದ್ದೇಶವಾಗಿದೆ. ಮನೆ, ಕಟ್ಟಡ ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ, ಅವುಗಳ ವಿತರಣೆ, ಮಾರಾಟ, ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಂತಹ ಉದ್ಯಮಗಳ ಪಟ್ಟಿ ಸಮೀಕ್ಷೆಯಲ್ಲಿ ಇರಲಿದೆ.

ಉದ್ದಿಮೆ ಮಾಲೀಕರ ಲಿಂಗವಾರು, ಸಾಮಾಜಿಕ, ಗುಂಪುವಾರು ಮಾಹಿತಿ, ಗಂಡು, ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಳ ಹಣಕಾಸಿನ ಮೂಲ ಸೇರಿದಂತೆ ಹಲವು ವ್ಯವಹಾರಿಕ ಮಾಹಿತಿಗಳನ್ನು ಗಣತಿಯಲ್ಲಿ ಸಂಗ್ರಹಿಸಲಾಗುವುದು. ಗಣತಿದಾರರು ಮನೆಗೆ ಬಂದ ಸಮಯದಲ್ಲಿ ಸರಿಯಾದ ಮಾಹಿತಿ ನೀಡಿಬೇಕು. ಸಂಗ್ರಹಿಸಿದ ಮಾಹಿತಿಯನ್ನು ಕ್ರೋಢೀಕರಿಸಲಾಗುತ್ತದೆ. ಆರ್ಥಿಕ ಗಣತಿಯಲ್ಲಿ ಲಭ್ಯವಾದ ಮಾಹಿತಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಯೋಜನೆಗಳನ್ನು ಸಿದ್ಧಪಡಿಸಲು ಸರ್ಕಾರಗಳಿಗೆ ಸಹಕಾರಿಯಾಗಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.