ETV Bharat / business

ಚೀನಾ ದಾದಗಿರಿಗೆ ಮತ್ತೊಂದು ಏಟು: ಶೇ 75ರಷ್ಟು ಟೈರ್ ಆಮದಿಗೆ ಬಿಗ್​ ಬ್ರೇಕ್ - ಭಾರತ ಚೀನ ಇತ್ತೀಚಿನ ಸುದ್ದಿ

ರೇಡಿಯಲ್ ಮತ್ತು ಟ್ಯೂಬ್‌ಲೆಸ್ ಸೇರಿದಂತೆ ಕಾರು, ಬಸ್​, ಲಾರಿ ಮತ್ತು ಮೋಟರ್ ಸೈಕಲ್‌ಗಳಿಗೆ ಬಳಸುವ ಟೈರ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ಸರ್ಕಾರ ನಿರ್ಬಂಧಿಸಿದೆ.

imported tyres
ಟೈರ್
author img

By

Published : Jun 15, 2020, 7:00 PM IST

ನವದೆಹಲಿ: ದೇಶದ ಒಟ್ಟು ಟೈರ್ ಆಮದು ಪೈಕಿ ಶೇ 75ರಷ್ಟು ಮೌಲ್ಯವನ್ನು ವಾಣಿಜ್ಯ ಸಚಿವಾಲಯವು ನಿರ್ಬಂಧಿತ ಪಟ್ಟಿಗೆ ಸೇರ್ಪಡೆ ಮಾಡಿದೆ.

ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಪ್ರಯಾಣಿಕರ ವಾಹನ, ಬಸ್​​/ ಲಾರಿ ಮತ್ತು ದ್ವಿಚಕ್ರ ವಾಹನಗಳ ಕೆಲವು ಹೊಸ ನ್ಯೂಮ್ಯಾಟಿಕ್ ಟೈರ್‌ಗಳನ್ನು ಆಮದು ಮಾಡಿಕೊಳ್ಳುವ ಮುಕ್ತ ವಹಿವಾಟು ಪಟ್ಟಿಯಿಂದ ನಿರ್ಬಂಧಿತ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಇನ್ನು ಮುಂದೆ ಆಮದುದಾರರಿಗೆ ಟೈರ್​ಗಳನ್ನು ಆಮದು ಮಾಡಿಕೊಳ್ಳಲು ಡಿಜಿಎಫ್‌ಟಿಯಿಂದ ಅನುಮತಿ ಅಗತ್ಯವಿರುತ್ತದೆ ಎಂದು ಹೇಳಿದೆ.

ಜೆ ಎಂ ಫಿನಾನ್ಷಿಯಲ್‌ ಸಂಶೋಧನಾ ವರದಿಯ ಪ್ರಕಾರ, ಆಮದುದಾರರು ಅನುಮೋದನೆ ಔಪಚಾರಿಕತೆ ಪೂರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಕಿರು ಅವಧಿಯ ಆಮದು ಗಮನಾರ್ಹವಾಗಿ ಕಡಿಮೆಯಾಗಬಹುದು.

ದೀರ್ಘಾವಧಿಯ ಪ್ರಭಾವ ನಿರ್ಣಯಿಸಲು ಅಧಿಸೂಚನೆಯ ಕುರಿತು ಹೆಚ್ಚಿನ ಸ್ಪಷ್ಟತೆಗಾಗಿ ನಾವು ಎದುರು ನೋಡುತ್ತಿದ್ದೇವೆ. ಪರವಾನಗಿ ಅನುಮೋದನೆಯು ಆಮದು ಮಾಡಿದ ಟೈರ್‌ಗಳ ಭವಿಷ್ಯದ ಲಭ್ಯತೆ ನಿರ್ಧರಿಸುತ್ತದೆ. ಪ್ರಸ್ತುತ ಕೆಲವು ಎಸ್‌ಕೆಯುಗಳನ್ನು ಆಮದು ಮಾಡಿಕೊಳ್ಳುವ ಮೈಕೆಲಿನ್, ಬ್ರಿಡ್ಜ್‌ಸ್ಟೋನ್‌ನಂತಹ ಎಂಎನ್‌ಸಿಗಳು ತಮ್ಮ ದೇಶಿಯ ಸೌಲಭ್ಯಗಳಲ್ಲಿ ಉತ್ಪಾದಿಸಲು ಪ್ರಾರಂಭಿಸಬಹುದು ಎಂದಿದೆ.

2019ರ ಕ್ಯಾಲೆಂಡರ್ ವರ್ಷದಲ್ಲಿ ಭಾರತವು 27 ಬಿಲಿಯನ್ ರೂ.ಯಷ್ಟು ಟೈರ್‌ಗಳನ್ನು ಆಮದು ಮಾಡಿಕೊಂಡಿದೆ. ಇದು ದೇಶಿಯ ಬಳಕೆಯ ಶೇ 5ರಷ್ಟಿದೆ. ಇದರಲ್ಲಿ 75 ಪ್ರತಿಶತದಷ್ಟು ಟೈರ್ ಆಮದು ನಿರ್ಬಂಧಿತ ಪಟ್ಟಿಗೆ ಸೇರಿಸಲಾದ ವರ್ಗಗಳು ಇವೆ.

ನಿರ್ಬಂಧಿತ ಪಟ್ಟಿಯಲ್ಲಿ ಸೇರಿಸಲಾದ ಉತ್ಪನ್ನಗಳು ಮುಂದಿನ ವರ್ಷಗಳಲ್ಲಿ ಗಮನಾರ್ಹ ಆಮದು ಕಡಿತಕ್ಕೆ ಸಾಕ್ಷಿಯಾಗಲಿದೆ ಎಂಬುದನ್ನು ಹಿಂದಿನ ಅನುಭವವು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

2022ರ ಹಣಕಾಸು ವರ್ಷಕ್ಕಾಗಿ ನಾಲ್ಕು ಸನ್ನಿವೇಶಗಳ ಇ-ನೋ (e-no) ರೂಪಿಸಿದ್ದು, ಇದು ಆಮದಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚೀನಾದಿಂದ 5 ಬಿಲಿಯನ್ ರೂ. ಆಮದನ್ನು ಅನುಮತಿಸುವುದಿಲ್ಲ. ಚೀನಾ ಮತ್ತು ಥಾಯ್​ಲ್ಯಾಂಡ್​​ಗಳಿಂದ 7 ಬಿಲಿಯನ್ ರೂ. ಟ್ರಕ್ ಟೈರ್​ಗಳ ಆಮದಿಗೆ ನಿಷೇಧವಿದೆ. ನಿರ್ಬಂಧಿತ ವಿಭಾಗದಲ್ಲಿ 20 ಬಿಲಿಯನ್ ರೂ. ಸಹ ಸೇರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.