ETV Bharat / business

ಇಲ್ಲಿ ತನಕ 3.75 ಕೋಟಿ ಇನ್​​ಕಂ ಟ್ಯಾಕ್ಸ್​ ರಿಟರ್ನ್ಸ್​ ಫೈಲ್​: ತೆರಿಗೆ ಕಟ್ಟೊಕ್ಕೆ ಡಿ.__ ಕಡೇ ದಿನ - ಇನ್​ಕಮ್ ಟ್ಯಾಕ್ಸ್​ ರಿಟರ್ನ್ಸ್

3.75 ಕೋಟಿ ತೆರಿಗೆದಾರರು ಈಗಾಗಲೇ 2020-21ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಡಿಸೆಂಬರ್ 21ರವರೆಗೆ ಸಲ್ಲಿಸಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ನೀವು ಸಲ್ಲಿಸಿದ್ದೀರಾ? ಇಲ್ಲದಿದ್ದರೆ ಈಗ ಫೈಲ್ ಮಾಡಿ! ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ITRs
ಐಟಿಆರ್​
author img

By

Published : Dec 22, 2020, 8:44 PM IST

ನವದೆಹಲಿ: ಪ್ರಸಕ್ತ 2020 - 21ರ (2019-20ರ ಆರ್ಥಿಕ ವರ್ಷ) ಡಿಸೆಂಬರ್ 21ರವರೆಗೆ 3.75 ಕೋಟಿ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

3.75 ಕೋಟಿ ತೆರಿಗೆದಾರರು ಈಗಾಗಲೇ 2020-21ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಡಿಸೆಂಬರ್ 21ರವರೆಗೆ ಸಲ್ಲಿಸಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ನೀವು ಸಲ್ಲಿಸಿದ್ದೀರಾ? ಇಲ್ಲದಿದ್ದರೆ ಈಗ ಫೈಲ್ ಮಾಡಿ! ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ಕೃಷಿ ಒಪ್ಪಂದ ನಮ್ಮ ಸಮಸ್ಯೆಗಳಿಗೆ ಫುಲ್​ಸ್ಟಾಪ್ ಹಾಕಬಹುದು: ಬಾಂಗ್ಲಾಗೆ ಭಾರತ ಆಹ್ವಾನ

2.17 ಕೋಟಿ ತೆರಿಗೆ ಪಾವತಿದಾರರು ಐಟಿಆರ್​-1, 79.82 ಲಕ್ಷ ತೆರಿಗೆದಾರರು ಫೈಲಿಂಗ್ ಐಟಿಆರ್ - 4, 43.18 ಲಕ್ಷ ಟ್ಯಾಕ್ಸ್​ಪೇಯರ್​ ಐಟಿಆರ್ -3 ಮತ್ತು 26.56 ಲಕ್ಷ ತೆರಿಗೆದಾರರು ಐಟಿಆರ್ -2 ಸಲ್ಲಿಕೆ ಮಾಡಿದ್ದಾರೆ.

2019-20ರ ಹಣಕಾಸು ವರ್ಷದ (ಮೌಲ್ಯಮಾಪನ ವರ್ಷ 2020-21) ವೈಯಕ್ತಿಕ ತೆರಿಗೆದಾರರು ಐ-ಟಿ ರಿಟರ್ನ್ಸ್ ಸಲ್ಲಿಸುವ ಗಡುವು 2020ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳುತ್ತದೆ. ಆದರೆ, ಲೆಕ್ಕಪರಿಶೋಧನೆಗೆ ಅಗತ್ಯವಿರುವ ತೆರಿಗೆದಾರರಿಗೆ 2021 ಜನವರಿ 31ರ ತನಕ ನೀಡಲಾಗಿದೆ.

ಕೋವಿಡ್​ ಸಾಂಕ್ರಾಮಿಕ ದೃಷ್ಟಿಯಿಂದ ನಿಗದಿತ ದಿನಾಂಕವನ್ನು ಕ್ರಮವಾಗಿ 2020ರ ಜುಲೈ 31 ಮತ್ತು ಅಕ್ಟೋಬರ್ 31ಕ್ಕೆ ವಿಸ್ತರಿಸಲಾಗಿದೆ. 2018-19ರ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2019-20) ತಡವಾಗಿ ಶುಲ್ಕ ಪಾವತಿಸದೆ ಐಟಿಆರ್ ಸಲ್ಲಿಸಲು ಗಡುವು ಮುಗಿದ ನಂತರವೂ ತೆರಿಗೆದಾರರು 5.65 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಸಿದ್ದಾರೆ. ಕಳೆದ ವರ್ಷ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.