ನವದೆಹಲಿ: ವಂದೇ ಭಾರತ್ ಮಿಷನ್ (ವಿಬಿಎಂ) ಅಡಿ ಗಲ್ಫ್ ರಾಷ್ಟ್ರಗಳಿಂದ 14 ವಿಮಾನಗಳು ಸಂಚರಿಸಲಿದ್ದು, 2,200ಕ್ಕೂ ಅಧಿಕ ಭಾರತೀಯರು ಹಿಂದಿರುಗಲಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ (ಯುಎಇ) 10 ವಿಮಾನಗಳು ಹಾರಾಟ ನಡೆಸಲಿವೆ. 6 ವಿಮಾನಗಳು ದುಬೈನಿಂದ ಕೊಚ್ಚಿ, ಕಣ್ಣೂರು, ಕೋಯಿಕೋಡ್, ತಿರುಚ್ಚಿ, ಬೆಂಗಳೂರು ಹಾಗೂ ಕೋಲ್ಕತ್ತಾಗೆ ತೆರಳಲಿವೆ. ಯುಎಇಯಿಂದ ಕೋಲ್ಕತ್ತಾಗೆ ಇದು ಮೊದಲ ವಿಮಾನವಾಗಿದೆ.
ಅಬುಧಾಬಿಯಿಂದ ನಾಲ್ಕು ವಿಮಾನಗಳು ಮೂಲಕ ಜನರು ಅಮೃತಸರ, ಕೋಯಿಕೋಡ್, ಕೊಚ್ಚಿ ಮತ್ತು ತಿರುವನಂತಪುರಕ್ಕೆ ಹಿಂತಿರುಗಲಿದ್ದಾರೆ.
ದೋಹಾ ಚೆನ್ನೈ ಮತ್ತು ತಿರುವನಂತಪುರಕ್ಕೆ ಎರಡು ವಿಮಾನ, ಮಸ್ಕತ್‌ನಿಂದ ಭುವನೇಶ್ವರ ಮತ್ತು ಕಣ್ಣೂರಿಗೆ ವಿಮಾನ ಹಾರಾಟ ನಡೆಸಲಿವೆ. ತೊಂದರೆಗೀಡಾದ ಕಾರ್ಮಿಕರು, ಪ್ರವಾಸಿಗರು, ಗರ್ಭಿಣಿಯರು, ವೈದ್ಯಕೀಯ ತುರ್ತು ಸೇವೆ ಅಗತ್ಯವಿರುವವರು ಮತ್ತು ಹಿರಿಯ ನಾಗರಿಕರಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ.
ಮಂಗಳವಾರ 2,719 ಭಾರತೀಯರು ವಿವಿಧ ಗಲ್ಫ್ ದೇಶಗಳಿಂದ ವಂದೇ ಭಾರತ್ ವಿಶೇಷ ವಿಮಾನಗಳ ಮೂಲಕ ತವರಿಗೆ ಮರಳಿದ್ದಾರೆ. ಯುಎಇಯಿಂದ ಸುಮಾರು 1,800 ಜನರನ್ನು ವಾಪಸ್ ಕರೆತರಲಾಗಿದೆ.