ETV Bharat / business

ಆಧಾರ್-ಪ್ಯಾನ್ ಲಿಂಕ್​ ಮಾಡದಿದ್ದರೆ 18 ಕೋಟಿ ಪ್ಯಾನ್​​ ಕಾರ್ಡ್​ ನಿಷ್ಕ್ರಿಯೆ! 58 ಸೆಕೆಂಡ್​​ನಲ್ಲಿ ಜೋಡಣೆ ವಿಧಾನ - ಆದಾಯ ತೆರಿಗೆ

ಮಾರ್ಚ್ 31ರ ಒಳಗೆ ಐಟಿ ಇಲಾಖೆಯು ಆಧಾರ್‌ಗೆ ಸಂಪರ್ಕ ಹೊಂದಿಲ್ಲದಿದ್ದರೆ 180 ದಶಲಕ್ಷಕ್ಕೂ ಅಧಿಕ ಪ್ಯಾನ್‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ನಡೆಸಿ ತೆರಿಗೆ ವಂಚಿಸುತ್ತಿರುವವರ ಪತ್ತೆಗೆ ಐಟಿ ಇಲಾಖೆ ನಿರ್ಧರಿಸಿದೆ. ಪ್ಯಾನ್​- ಆಧಾರ್​ ಜೋಡಣೆಯ ಸಂಬಂಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Pan
ಪ್ಯಾನ್
author img

By

Published : Aug 21, 2020, 7:14 PM IST

ನವದೆಹಲಿ: ಹಲವು ಮನವಿ, ಜ್ಞಾಪನೆಗಳ ಹೊರತಾಗಿಯೂ ತಮ್ಮ ಶಾಶ್ವತ ಖಾತೆ ಸಂಖ್ಯೆಗಳನ್ನು (ಪ್ಯಾನ್‌) ಆಧಾರ್ ಕಾರ್ಡ್‌ಗಳಿಗೆ ಇನ್ನೂ ಲಿಂಕ್ ಮಾಡದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಆದಾಯ ತೆರಿಗೆ (ಐ-ಟಿ) ಇಲಾಖೆ ನಿರ್ಧರಿಸಿದೆ.

ಮಾರ್ಚ್ 31ರ ಒಳಗೆ ಐಟಿ ಇಲಾಖೆಯು ಆಧಾರ್‌ಗೆ ಸಂಪರ್ಕ ಹೊಂದಿಲ್ಲದಿದ್ದರೆ 180 ದಶಲಕ್ಷಕ್ಕೂ ಅಧಿಕ ಪ್ಯಾನ್‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ನಡೆಸಿ ತೆರಿಗೆ ವಂಚಿಸುತ್ತಿರುವವರ ಪತ್ತೆಗೆ ಐಟಿ ಇಲಾಖೆ ನಿರ್ಧರಿಸಿದೆ. ಪ್ಯಾನ್​- ಆಧಾರ್​ ಜೋಡಣೆಯ ಸಂಬಂಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

2020ರ ಜೂನ್ ತನಕ ಭಾರತದಲ್ಲಿ 50.95 ಕೋಟಿ ಪ್ಯಾನ್ ಕಾರ್ಡ್ ಹೊಂದಿರುವವರು ಇದ್ದಾರೆ. ಆದರೆ ಆದಾಯ ತೆರಿಗೆ ರಿಟರ್ನ್ಸ್​ಗೆ (ಐಟಿಆರ್) ಕೇವಲ 6.48 ಕೋಟಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 49.8 ಮಿಲಿಯನ್ ಜನರು ಐಟಿಆರ್ ಸಲ್ಲಿಸುತ್ತಾರೆ. ಆದರೆ ಅವರಲ್ಲಿ ಬಹುತೇಕರು ಶೂನ್ಯ ತೆರಿಗೆ ಹೊಣೆಗಾರಿಕೆ ತೋರಿಸುತ್ತಿದ್ದಾರೆ ಎಂಬ ಆಪಾದನೆಯಿದೆ.

ಈ ಹಿಂದೆ ವಾರ್ಷಿಕ ಮಾಹಿತಿ ರಿಟರ್ನ್ (ಎಐಆರ್) ಎಂದು ಕರೆಯಲಾಗುವ ಸ್ಟೇಟ್ಮೆಂಟ್ ಆಫ್ ಫೈನಾನ್ಶಿಯಲ್ ಟ್ರಾನ್ಸಾಕ್ಷನ್ (ಎಸ್‌ಎಫ್‌ಟಿ) ಬಳಸಿಕೊಂಡು, ಐಷಾರಾಮಿಗಳ ವಸ್ತು ಹಾಗೂ ಸೇವೆಗಳಿಗೆ ವಿಪರೀತ ಖರ್ಚು ಮಾಡುವವರನ್ನು ತೆರಿಗೆ ವ್ಯಾಪ್ತಿಗೆ ತರಲು ತೀರ್ಮಾನಿಸಿದೆ.

ತೆರಿಗೆದಾರರು ನಡೆಸಿದ ಹೆಚ್ಚಿನ ಮೌಲ್ಯದ ವ್ಯವಹಾರಗಳು ಈಗ ಸರ್ಕಾರದ ಪರಿಶೀಲನೆಗೆ ಒಳಪಡುತ್ತವೆ. ಈ ವಿವರಗಳನ್ನು ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳ ಮೂಲಕ ಪರಿಶೀಲಿಸಬಹುದಾಗಿದೆ.

ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್​ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್‌ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಜೋಡಣೆಯ ವಿಧಾನ ಇಲ್ಲಿದೆ.

  • ಲಿಂಕ್‌ ಆಗಿದೆಯೇ ಎಂಬುದು ತಿಳಿಯುವುದು ಹೇಗೆ?
  • ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.incometaxindiaefiling.gov.in)
  • ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್‌ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್‌ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎಂಬ ಅರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಕ್ಲಿಕ್‌ ಮಾಡಿ.
  • ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಕ್ಲಿಕ್‌ ಮಾಡಿ. ಆಗ ನಿಮ್ಮ ಕಾರ್ಡ್‌ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶ ಕಾಣಿಸಲಿದೆ.
  • ಆಧಾರ್- ಪ್ಯಾನ್​ ಲಿಂಕ್ ಮಾಡುವುದು ಹೇಗೆ?
  • https://www.incometaxindiaefiling.gov.ingಗೆ ಭೇಟಿ ನೀಡಿ.
  • ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್​ (Link Aadhar​) ಆಯ್ಕೆ ಕ್ಲಿಕ್ ಮಾಡಿ
  • ಲಿಂಕ್ ಆಧಾರ್ ಡೈಲಾಗ್ ಬಾಕ್ಸ್​ ತೆರೆದುಕೊಳ್ಳುತ್ತದೆ.
  • ಡೈಲಾಗ್​ ಬಾಕ್ಸ್​ನಲ್ಲಿ ಸೂಚಿಸಲಾದ ಪ್ಯಾನ್​ ನಂ, ಆಧಾರ್ ನಂಬರ್​, ಆಧಾರ್​ ಕಾರ್ಡ್​ನಲ್ಲಿ ನಮೂದಿತ ಹೆಸರು ಭರ್ತಿ ಮಾಡಿ.
  • ಕ್ಯಾಪ್ಚ​ ಕೋಡ್​ ಸಂಖ್ಯೆ ನಮೂದಿಸಿ: (ದಿವ್ಯಾಂಗರಿಗೆ ಓಟಿಪಿ ನಂಬರ್​ ಪಡೆಯುವ ಅವಕಾಶವಿದೆ)
  • ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್​ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ.
  • ಎಸ್​ಎಂಎಸ್​ ಮುಖಾಂತರ ಆಧಾರ್ ಜೋಡಣೆ
  • ಅಂತರ್ಜಾಲ ಸಂಪರ್ಕವಿಲ್ಲದೇ ಮೊಬೈಲ್​ ಎಸ್​ಎಂಎಸ್​ ಬಳಸಿ ಪ್ಯಾನ್-ಆಧಾರ್ ಜೋಡಣೆ ಮಾಡಬಹುದು. ಆಧಾರ್​ನ 12 ವಿಶಿಷ್ಟ ಸಂಖ್ಯೆಗಳನ್ನು 567678 ಅಥವಾ 56161ಗೆ ಸಂದೇಶ ರವಾನಿಸಬಹುದು.
  • ಸಂದೇಶ ಕಳುಹಿಸುವ ವಿಧಾನಯುಐಡಿಪ್ಯಾನ್​​<ಸ್ಥಳ>12 ವಿಶೇಷ ಸಂಖ್ಯೆಗಳು<ಸ್ಥಳ>ಪ್ಯಾನ್​ 10 ವಿಶೇಷ ಸಂಖ್ಯೆಗಳು
  • UIDPAN<space>12-digit Aadhaar><space>10-digit PAN
  • ಉದಾ: UIDPAN 444455556666 BBUDA8686Q

ETV Bharat Logo

Copyright © 2025 Ushodaya Enterprises Pvt. Ltd., All Rights Reserved.