ನವದೆಹಲಿ: ನೌಕರರ ರಾಜ್ಯ ವಿಮಾ ನಿಗಮದ (ಇಎಸ್ಐಸಿ) ವೇತನದಾರರ ಮಾಹಿತಿ ಪ್ರಕಾರ, 2020ರ ಫೆಬ್ರವರಿಯಲ್ಲಿ ಸುಮಾರು 11.56 ಲಕ್ಷ ಹೊಸ ಸದಸ್ಯರು ಸಾಮಾಜಿಕ ಭದ್ರತಾ ಯೋಜನೆಗೆ ಸೇರ್ಪಡೆ ಆಗಿದ್ದಾರೆ.
2019ರ ಫೆಬ್ರವರಿ ತಿಂಗಳಲ್ಲಿ 12.19 ಲಕ್ಷ ಸದಸ್ಯರು ಸೇರ್ಪಡೆ ಆಗಿದ್ದರು. ಈ ವರ್ಷದ ಅಲ್ಪ ಕ್ಷೀಣಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
2018-19ರ ಅವಧಿಯಲ್ಲಿ ಇಎಸ್‌ಐಸಿ ಹೊಂದಿರುವ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ. 2017ರ ಸೆಪ್ಟೆಂಬರ್ನಿಂದ 2020ರ ಫೆಬ್ರವರಿ ಅವಧಿ ನಡುವೆ ಸುಮಾರು 3.75 ಕೋಟಿ ಹೊಸ ಚಂದಾದಾರರು ಇಎಸ್ಐಸಿ ಯೋಜನೆಗೆ ಸೇರಿದ್ದಾರೆ ಎಂದು ಹೇಳಿದೆ.
2017ರ ಸೆಪ್ಟೆಂಬರ್ - 2018ರ ಮಾರ್ಚ್ ಅವಧಿಯಲ್ಲಿ ಇಎಸ್ಐಸಿಯೊಂದಿಗೆ ಒಟ್ಟು ಹೊಸ ದಾಖಲಾತಿಗಳು 83.35 ಲಕ್ಷಗಳಾಗಿವೆ. ಒಟ್ಟಾರಿ ನಿವ್ವಳ ದಾಖಲಾತಿ10.34 ಲಕ್ಷ ಸೇರ್ಪಡೆ ಆಗಿದ್ದು, ಇದರ ಹಿಂದಿನ ತಿಂಗಳಲ್ಲಿ 10.71 ಲಕ್ಷಗಳಷ್ಟಿದ್ದವು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತಿಳಿಸಿದೆ.