ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಮೆಟ್ರೋ ರೈಲು ಪ್ರಯಾಣಕ್ಕೆ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರ ಸ್ವೀಕರಿಸಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣ ಕುರಿತು ದೆಹಲಿ ಸರ್ಕಾರ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿದ್ದೇಯಾ ಎಂಬ ಪ್ರಶ್ನೆಗೆ, ಸಂಸತ್ನಲ್ಲಿ ಇಲ್ಲವೆಂದು ಲಿಖಿತ ಉತ್ತರ ನೀಡಿದ್ದಾರೆ. ಮೆಟ್ರೋ ಹಾಗೂ ನಗರ ಸಂಚಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೆ ತರುವುದಾಗಿ ಎಎಪಿ ಸರ್ಕಾರ ಘೋಷಿಸಿತ್ತು.
-
Delhi CM @ArvindKejriwal after meeting finance min @nsitharaman;
— Rupashree Nanda (@rupashreenanda) June 27, 2019 " class="align-text-top noRightClick twitterSection" data="
*congratulated her for the victory, and also for being given charge of a critical ministry
*assured full cooperation of Delhi Govt
* for speedy devt of Delhi, the country's capital,centre n state must work together pic.twitter.com/MK1vBM9Y3S
">Delhi CM @ArvindKejriwal after meeting finance min @nsitharaman;
— Rupashree Nanda (@rupashreenanda) June 27, 2019
*congratulated her for the victory, and also for being given charge of a critical ministry
*assured full cooperation of Delhi Govt
* for speedy devt of Delhi, the country's capital,centre n state must work together pic.twitter.com/MK1vBM9Y3SDelhi CM @ArvindKejriwal after meeting finance min @nsitharaman;
— Rupashree Nanda (@rupashreenanda) June 27, 2019
*congratulated her for the victory, and also for being given charge of a critical ministry
*assured full cooperation of Delhi Govt
* for speedy devt of Delhi, the country's capital,centre n state must work together pic.twitter.com/MK1vBM9Y3S
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಉಚಿತ ಪ್ರಯಾಣ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಮೆಟ್ರೋ ರೈಲು ನಿಗಮ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮಹಿಳೆಯರಿಗೆ ಈ ಸೇವೆ ಒದಗಿಸಲು ಬದ್ಧವಾಗಿರವುದಾಗಿ ಭರವಸೆ ನೀಡಿದ್ದಾರೆ.
ನಮ್ಮ ಮನವಿಯ ಮೇರೆಗೆ ದೆಹಲಿ ಮೆಟ್ರೋ ಪ್ರಸ್ತಾವನೆ ಸಲ್ಲಿಸಿದೆ. ಅವರ ಪ್ರಸ್ತಾವ ನಮಗೆ ಒಪ್ಪಿಗೆ ಆಗಿದೆ. ಆದರೂ ದೆಹಲಿ ಸರ್ಕಾರ ಯೋಜನೆಯನ್ನು ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.