ನವದೆಹಲಿ: ಕಳೆದ ವರ್ಷ ಮಾರ್ಚ್-ಸೆಪ್ಟೆಂಬರ್ ಅವಧಿಯಲ್ಲಿ ಯೆಸ್ ಬ್ಯಾಂಕಿನ ಠೇವಣಿ ಸ್ಥಿರತೆಯಲ್ಲಿ ಕುಸಿತ ಕಂಡಿದ್ದು, ಗ್ರಾಹಕರು ಬ್ಯಾಂಕಿನ ಮೇಲಿನ ವಿಶ್ವಾಸ ಕಳೆದುಕೊಂಡಿದ್ದ ಪ್ರತಿಬಿಂಬವಾಗಿ 18,100 ಕೋಟಿ ರೂ.ಯಷ್ಟು ವಾಪಸ್ ತೆಗೆದುಕೊಂಡಿದ್ದಾರೆ.
ಯೆಸ್ ಬ್ಯಾಂಕ್ ಮೇಲೆ ಏಪ್ರಿಲ್ 3ರವರೆಗೆ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದೆ. ಈ ಸಮಯದಲ್ಲಿ ಗ್ರಾಹಕರು 50,000 ರೂ.ಗಿಂತ ಹೆಚ್ಚಿನದನ್ನು ಹಿಂಪಡೆಯುವಂತಿಲ್ಲ. 2019ರ ಮಾರ್ಚ್ ಕೊನೆಯಲ್ಲಿ 2,27,610 ಕೋಟಿ ರೂ. ಠೇವಣಿ ಇರಿಸಲಾಗಿದೆ (2018-19ನೇ ಹಣಕಾಸು ವರ್ಷ).
ಆದರೆ, ಪ್ರಸಕ್ತ ಹಣಕಾಸು ವರ್ಷದ (2019-20) ಜೂನ್ ಅಂತ್ಯದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಇದು 2,25,902 ಕೋಟಿ ರೂ.ಗೆ ಇಳಿದಿದೆ. ಸೆಪ್ಟೆಂಬರ್ 20ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ 2,09,497 ಕೋಟಿ ರೂ.ಗೆ ತಲುಪಿದೆ.
2019ರ ಮಾರ್ಚ್ನಿಂದ ಸೆಪ್ಟೆಂಬರ್ ನಡುವಿನ ಠೇವಣಿಗಳ ವ್ಯತ್ಯಾಸವು 18,110 ಕೋಟಿ ರೂ.ಯಷ್ಟಿದೆ. ಮೂರನೇ ತ್ರೈಮಾಸಿಕದಲ್ಲಿ ಅದರ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬವಾಗಲಿದೆ ಎಂದು ಬ್ಯಾಂಕ್ ಘೋಷಿಸಿದ್ದರಿಂದ ಸೆಪ್ಟೆಂಬರ್ ನಂತರದ ಡೇಟಾ ಲಭ್ಯವಿಲ್ಲ.