ನವದೆಹಲಿ: ಕೇಂದ್ರ ಸರ್ಕಾರ ತನ್ನ ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಳಿದ ಒಂದು ದಿನದ ನಂತರ, 'ಉದ್ದೇಶಿತ ಬದಲಾವಣೆಯು ಫೇಸ್‌ಬುಕ್‌ನೊಂದಿಗೆ ಬಳಕೆದಾರರ ಡೇಟಾ ಹಂಚಿಕೊಳ್ಳುವುದಿಲ್ಲ. ಈ ವಿಷಯದ ಕುರಿತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ತಾನು ಮುಕ್ತ' ಎಂದು ವಾಟ್ಸ್ಆ್ಯಪ್ ಹೇಳಿದೆ.
ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ ಆಕ್ರಮಣಕಾರಿ ಬದಲಾವಣೆಗಳ ಕುರಿತು ಕೇಂದ್ರ ಸರ್ಕಾರ ಮಂಗಳವಾರ ವಾಟ್ಸ್ಆ್ಯಪ್ಗೆ 14 ಪ್ರಶ್ನೆಗಳನ್ನು ಕೇಳಿತ್ತು.
ಇದನ್ನೂ ಓದಿ: ಕರೆಂಟ್ಗೆ ಶಾಕ್ ಕೊಟ್ಟ ಎಲೆಕ್ಟ್ರಿಕ್ ಪವರ್ ಬೇಡಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿತ!
ಹೊಸ ಅಪ್ಡೇಟಾ ಫೇಸ್‌ಬುಕ್ ಜತೆಗೆ ಯಾವುದೇ ಬಳಕೆದಾರರ ಮಾಹಿತಿ ಹಂಚಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ವಿಸ್ತರಣೆ ಮಾಡುವುದಿಲ್ಲ ಎಂಬುದನ್ನು ಹೇಳಲು ಬಯಸುತ್ತೇವೆ. ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಪಾರದರ್ಶಕತೆ ಮತ್ತು ಹೊಸ ಆಯ್ಕೆಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಅವರು ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಬಹುದು ಮತ್ತು ಇನ್ನಷ್ಟು ಬೆಳೆಯಬಹುದು ಎಂದು ವಾಟ್ಸ್ಆ್ಯಪ್ ವಕ್ತಾರರು ತಿಳಿಸಿದ್ದಾರೆ.
ವಾಟ್ಸ್ಆ್ಯಪ್ ಯಾವಾಗಲೂ ವೈಯಕ್ತಿಕ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಭದ್ರಪಡಿಸುತ್ತದೆ. ಇದರಿಂದಾಗಿ ವಾಟ್ಸ್ಆ್ಯಪ್ ಅಥವಾ ಫೇಸ್‌ಬುಕ್ ಎರಡೂ ಬಳಕೆದಾರರ ಸಂದೇಶಗಳನ್ನು ನೋಡುವುದಿಲ್ಲ. ನಾವು ತಪ್ಪು ಮಾಹಿತಿಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸಾದ ಸಿದ್ಧರಿರುತ್ತೇವೆ ಎಂದು ಭರವಸೆ ನೀಡಿದ್ದಾರೆ.