ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೋ, ಇಂದು ತನ್ನ 4ನೇ ತ್ರೈಮಾಸಿಕದ ಫಲಿತಾಂಶ ಘೋಷಿಸಿದ್ದು, ಇಯರ್ ಆನ್ ಇಯರ್ (ವೈಒವೈ) ಅವಧಿಯ ಲಾಭಾಂಶದಲ್ಲಿ ಶೇ 6ರಷ್ಟು ಇಳಿಕೆ ದಾಖಲಿಸಿದೆ.
2020ರ ಮಾರ್ಚ್ 31ಕ್ಕೆ ಕೊನೆಗೊಂಡ ವಿತ್ತೀಯ ವರ್ಷದಲ್ಲಿ ಸಂಸ್ಥೆಯು 2,345.20 ಕೋಟಿ ರೂ. ಲಾಭ ಗಳಿಸಿದೆ. ಈ ಹಿಂದಿನ ವರ್ಷದ ಮಾರ್ಚ್ನಲ್ಲಿ 2,493.90 ಕೋಟಿ ರೂ.ಯಷ್ಟು ಲಾಭ ಗಳಿಸಿತ್ತು. ಈ ತ್ರೈಮಾಸಿಕದ ಆದಾಯ ಶೇ 4.7ರಷ್ಟು ಏರಿಕೆಯನ್ನು ಸಂಸ್ಥೆ ಹೇಳಿಕೊಂಡಿದ್ದು, 15,006 ಕೋಟಿ ರೂ.ಯಿಂದ 15,711 ಕೋಟಿ ರೂ.ಗೆ ಏರಿಕೆಯಾಗಿದೆ.
ಕೊರೊನ ವೈರೈಸ್ ಮಹಾಮಾರಿಯಿಂದ ಸಂಸ್ಥೆಯ ಲಾಭಾಂಶದಲ್ಲಿ ಕಡಿಮೆ ಆಗಿದೆ. ನಮ್ಮ ಅಂದಾಜಿನ ಪ್ರಕಾರ ಶೇ 0.7-0.8ರಷ್ಟು ಕ್ಷೀಣಿಸಿದ್ದು, 14 ರಿಂದ 16 ಬಿಲಿಯನ್ ಡಾಲರ್ನಷ್ಟು ನಷ್ಟವಾಗಿದೆ ಎಂದು ಸಂಸ್ಥೆ ಹೇಳಿದೆ.
ಮಹಾಮಾರಿಯಿಂದ ಜಗತ್ತಿನಲ್ಲಿ ಇನ್ನೂ ಸ್ಪಷ್ಟತೆ ಇಲ್ಲದಿರುವ ಕಾರಣ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಮಾರ್ಗಸೂಚಿಯನ್ನು ಇನ್ನು ಸಂಸ್ಥೆ ನಿರ್ಧರಿಸಿಲ್ಲ ಎಂದು ವಿಪ್ರೋ ಸ್ಪಷ್ಟ ಪಡಿಸಿದೆ.