ಜಿನೀವಾ: ಬಹುತೇಕ ರಾಷ್ಟ್ರಗಳಲ್ಲಿ ಅದರಲ್ಲಿ ಮುಖ್ಯವಾಗಿ ಯುರೋಪಿನಲ್ಲಿ ಅಸ್ಟ್ರಾಜೆನೆಕಾದ ಲಸಿಕೆ ಬಳಕೆ ಸ್ಥಗಿತಗೊಳಿಸಿದ ಬಳಿಕ ಅದನ್ನು ಪಡೆದ ಕೆಲವು ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಆತಂಕ ತಂದೊಡ್ಡಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
ಲಸಿಕೆಗಳನ್ನು ಅತ್ಯಧಿಕ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಕೋವಾಕ್ಸಿನ್ ರವಾನಿಸಲಾಗುತ್ತಿದೆ. ಅಸ್ಟ್ರಾಜೆನೆಕಾ ತನ್ನ ಲಸಿಕೆಗಳನ್ನು ಭಾರತ ಮತ್ತು ದಕ್ಷಿಣ ಕೊರಿಯಾದಲ್ಲಿ ಉತ್ಪಾದಿಸುತ್ತಿದೆ. ಯುರೋಪಿನಲ್ಲಿ ತಯಾರಾದ ಬ್ಯಾಚ್‌ಗಳ ಮೇಲೆ ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇವೆಲ್ಲ ಮುನ್ನೆಚ್ಚರಿಕೆ ಕ್ರಮಗಳು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಡಬ್ಲ್ಯುಎಚ್ಯ ಸಹಾಯಕ ಮಹಾ ನಿರ್ದೇಶಕ ಮರಿಯಾಂಜೆಲಾ ಸಿಮಾವೊ ಹೇಳಿದ್ದಾರೆ.
ಯುರೋಪ್ ಮಾತ್ರವಲ್ಲದೇ ಇತರ ಪ್ರದೇಶಗಳ ದೇಶಗಳಿಗೆ ನಾನು ಇದನ್ನು ಹೇಳಲು ಬಯಸುತ್ತೇನೆ. ಇಲ್ಲಿಯವರೆಗೆ ಲಸಿಕೆಗಳು (ವಿತರಣೆಯಲ್ಲಿ) ಯುರೋಪಿಯನ್ ಉತ್ಪಾದನೆಯಿಂದ ಬಂದವು, ಕೋವಾಕ್ಸ್ ಸೌಲಭ್ಯದ ಮೂಲಕ ನೀಡಲಾಗುವ ಲಸಿಕೆಗಳು ಅಲ್ಲ ಎಂದರು.
ಇದನ್ನೂ ಓದಿ: ಕೇರಳ ಎಲೆಕ್ಷನ್ ಕದನದಲ್ಲಿ ಅಂದರ್-ಬಾಹರ್.. ಗೆಲುವಿಗಾಗಿ ಕ್ಷೇತ್ರ, ಅಭ್ಯರ್ಥಿಗಳ ಬದಲಾವಣೆ!
ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಬಹುತೇಕ ಯುರೋಪಿಯನ್ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಕಳೆದ ವಾರ ಡೆನ್ಮಾರ್ಕ್‌ನಿಂದ ಪ್ರಾರಂಭವಾದ ವ್ಯಾಕ್ಸಿನೇಷನ್ ಬಳಿಕ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ಸಂಭವಿಸಿದೆ. ಈ ಬಗೆಗಿನ ತನಿಖೆಗಾಗಿ ಇತ್ತೀಚಿನ ದಿನಗಳಲ್ಲಿ ಅಸ್ಟ್ರಾಜೆನೆಕಾ ಲಸಿಕೆಯ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ನಿಷೇಧದಲ್ಲಿ ಥಾಯ್ಲೆಂಡ್ ಮತ್ತು ಕಾಂಗೋ ಕೂಡ ಸೇರಿವೆ.
ಈ ಘಟನೆಗಳು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿವೆ ಎಂದು ಇದರ ಅರ್ಥವಲ್ಲ. ಆದರೆ, ಅವುಗಳನ್ನು ತನಿಖೆಗೆ ಒಳಪಡಿಸುವುದು ವಾಡಿಕೆಯಾಗಿದೆ. ಇದು ಕಣ್ಗಾವಲು ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ ಹಾಗೂ ಪರಿಣಾಮಕಾರಿ ನಿಯಂತ್ರಣಗಳು ಜಾರಿಯಲ್ಲಿವೆ ಎಂಬುದನ್ನು ತೋರಿಸುತ್ತದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.