ನವದೆಹಲಿ: ಸಂಸ್ಥೆ/ ಕಂಪನಿಗಳು ನೀಡುವ ಸರಕು ಮತ್ತು ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ವ್ಯಾಪಾರ ಕ್ಯಾಟಲಾಗ್ ಪತ್ತೆಗೆ ಸುಲಭವಾಗುವಂತೆ ವಾಟ್ಸ್ಆ್ಯಪ್ ಅಪ್ಲಿಕೇಷನ್‌ನಲ್ಲಿ ಹೊಸ ಶಾಪಿಂಗ್ ಬಟನ್ ಸೇರಿಸಲಾಗಿದೆ ಎಂದು ಫೇಸ್‌ಬುಕ್ ಸಹೋದರ ಪ್ಲಾಟ್ಫರ್ಮ್ ತಿಳಿಸಿದೆ.
ನಿತ್ಯ 175 ದಶಲಕ್ಷಕ್ಕೂ ಅಧಿಕ ಜನರು ವಾಟ್ಸ್ಆ್ಯಪ್ ಬಿಸಿನೆಸ್ ಖಾತೆಗೆ ಸಂದೇಶ ಕಳುಹಿಸುತ್ತಾರೆ. ಭಾರತದಲ್ಲಿ 3 ಮಿಲಿಯನ್‌ಗಿಂತಲೂ ಅಧಿಕ ಜನರು ಸೇರಿದಂತೆ ಪ್ರತಿ ತಿಂಗಳು 40 ದಶಲಕ್ಷಕ್ಕೂ ಹೆಚ್ಚು ಜನರು ವ್ಯವಹಾರದ ಕ್ಯಾಟಲಾಗ್ ವೀಕ್ಷಿಸುತ್ತಾರೆ.
ನಾವು ಶಾಪಿಂಗ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಬಯಸುತ್ತೇವೆ. ರಜಾದಿನದ ಶಾಪಿಂಗ್ ಋತುವಿಗೆ ಸಿದ್ಧವಾಗಿ ಬಳಕೆದಾರರು ದೂರದಿಂದಲೇ ಖರೀದಿ ಮಾಡಲು ಸಹಾಯಕವಾದ ಮಾರ್ಗಗಳು ಬೇಕಾಗುತ್ತವೆ. ವ್ಯವಹಾರಗಳ ಡಿಜಿಟಲ್ ಪರಿಕರಗಳ ಮಾರಾಟ ಬಯಸುತ್ತವೆ ಎಂದು ವಾಟ್ಸ್ಆ್ಯಪ್ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯವಹಾರದ ಕ್ಯಾಟಲಾಗ್ ಅನ್ನು ಜನರು ಸುಲಭವಾಗಿ ಕಂಡುಕೊಳ್ಳಲು ಫೇಸ್‌ಬುಕ್ ಒಡೆತನದ ಕಂಪನಿಯು ವಾಟ್ಸ್ಆ್ಯಪ್‌ನಲ್ಲಿ ಹೊಸ ಶಾಪಿಂಗ್ ಬಟನ್ ಅನ್ನು ಹೊರತರುತ್ತಿದೆ. ಆದ್ದರಿಂದ ಯಾವ ಸರಕು ಅಥವಾ ಸೇವೆಗಳನ್ನು ನೀಡುತ್ತದೆ ಎಂಬುದು ತಿಳಿಯಬಹುದು. ವ್ಯವಹಾರದ ಕ್ಯಾಟಲಾಗ್ ಹೊಂದಿದೆಯೇ ಎಂಬುದನ್ನು ತಿಳಿಯಲು ಬಳಕೆದಾರರು ವ್ಯವಹಾರದ ಪ್ರೊಫೈಲ್‌ಗೆ ಕ್ಲಿಕ್ ಮಾಡಬೇಕಾಗಿತ್ತು.