ETV Bharat / business

ಭಾರತದ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್ ಆಗುವತ್ತ ವಾಟ್ಸ್​​ಆ್ಯಪ್​ - ವಾಟ್ಸ್​​ ಆ್ಯಪ್​ ಪೆ

ಇಂದು, ಗ್ರಾಹಕರಿಗೆ ಬ್ಯಾಂಕ್​ಗಳೊಂದಿಗೆ ಸಂವಹನ ನಡೆಸಲು ಅನುಕೂಲಕರ ಮತ್ತು ತಡೆರಹಿತ ಮಾರ್ಗವಾಗಿ ವಾಟ್ಸ್​​ ಆ್ಯಪ್ ಮಾರ್ಪಟ್ಟಿದೆ. ಇದು ಡಿಜಿಟಲ್ ವೇದಿಕೆಯ ಮೂಲಕ ಹಲವಾರು ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಮೂಲಕ ಭಾರತದ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್ ಆಗುವತ್ತ ವಾಟ್ಸ್​​ಆ್ಯಪ್ ದಾಪುಗಾಲಿಡುತ್ತಿದೆ. ​

WhatsApp on way to become India's digital banking channel
ಭಾರತದ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್ ಆಗುವತ್ತ ವಾಟ್ಸ್​​ಆ್ಯಪ್​
author img

By

Published : Jun 15, 2020, 12:34 PM IST

ನವದೆಹಲಿ : ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಸಮಯದಲ್ಲಿ ಬ್ಯಾಂಕ್​ಗಳ ಡಿಜಿಟಲ್ ಸೇವೆ ಅಥವಾ ಇ-ಕಾಮರ್ಸ್​ ಸೇವೆಗಳನ್ನು ಬಳಸಿಕೊಳ್ಳದ ಗ್ರಾಹಕರಿಗೆ ಬ್ಯಾಂಕಿಂಗ್​ ಸೇವೆ ನೀಡಿದ ಮೊದಲ ಡಿಜಿಟಲ್ ಚಾನೆಲ್ ಆಗಿ ವಾಟ್ಸ್​​ ಆ್ಯಪ್​ ಪೆ ಕಾರ್ಯನಿರ್ವಹಿಸಿದೆ.

ಇಂದು, ವಾಟ್ಸ್​​ಆ್ಯಪ್ ಗ್ರಾಹಕರಿಗೆ ಬ್ಯಾಂಕ್​​ಗಳೊಂದಿಗೆ ಸಂವಹನ ನಡೆಸಲು ಅನುಕೂಲಕರ ಮತ್ತು ತಡೆರಹಿತ ಚಾನಲ್ ಆಗಿ ಮಾರ್ಪಡಲು ಸನ್ನದ್ಧವಾಗಿದೆ. ಇದು ಡಿಜಿಟಲ್ ವೇದಿಕೆಯ ಮೂಲಕ ಹಲವಾರು ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ 2018 ರಲ್ಲಿ ವಾಟ್ಸ್​​ ಆ್ಯಪ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸುವ ಮೂಲಕ, ವಾಟ್ಸ್​​ ಆ್ಯಪ್ ಬ್ಯಾಂಕಿಂಗ್​ ಸೇವೆ ನೀಡಿದ ದೇಶದ ಮೊದಲ ಬ್ಯಾಂಕ್​ ಆಗಿ ಗುರುತಿಸಿಕೊಂಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೋಟಕ್ ಮಹೀಂದ್ರಾ ಬ್ಯಾಂಕ್​ನ ಅಧ್ಯಕ್ಷ ಮತ್ತು ಮುಖ್ಯ ಡಿಜಿಟಲ್ ಅಧಿಕಾರಿ ದೀಪಕ್ ಶರ್ಮಾ, ಕೋಟಕ್​ ಮಹೀಂದ್ರಾ ಬ್ಯಾಂಕ್ ತನ್ನ ವಾಟ್ಸ್​​ ಆ್ಯಪ್ ಬ್ಯಾಂಕಿಂಗ್ ಚಾನೆಲ್‌ನಲ್ಲಿ ಇದುವರೆಗೆ ಸುಮಾರು 20 ಲಕ್ಷ ಗ್ರಾಹಕರಿಗೆ ಸೇವೆ ನೀಡಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020 ರ ಹಣಕಾಸು ವರ್ಷದಲ್ಲಿ ವಾಟ್ಸ್​​ ಆ್ಯಪ್ ಬ್ಯಾಂಕಿಂಗ್ ಉಪಯೋಗಿಸುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಶೇ .98 ರಷ್ಟು ಹೆಚ್ಚಳವಾಗಿದೆ. ನಮ್ಮ ಬಹುಪಾಲು ಗ್ರಾಹಕರು ವಾಟ್ಸ್​​ ಆ್ಯಪ್ ಇಂಟರ್​ ಫೇಸ್​​ನೊಂದಿಗೆ ಪರಿಚಿತರಾಗಿರುವುದರಿಂದ, ನಮ್ಮ ಡಿಜಿಟಲ್ ನಿಷ್ಕ್ರಿಯ ಗ್ರಾಹಕರು ತಮ್ಮ ಮೊದಲ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್ ಆಗಿ ವಾಟ್ಸ್​​ ಆ್ಯಪ್​ನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅದೇ ರೀತಿ, ಹೆಚ್​​ಡಿಎಫ್​ಸಿ ಬ್ಯಾಂಕ್​ ಕೂಡ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ವಾಟ್ಸ್​​ ಆ್ಯಪ್ ಬ್ಯುಸಿನೆಸ್​ ಎಪಿಐಯನ್ನು ಪ್ರಮುಖ ಚಾನೆಲ್‌ಗಳಲ್ಲಿ ಒಂದಾಗಿ ಬಳಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್​ನ ಮುಖ್ಯ ಡಿಜಿಟಲ್ ಅಧಿಕಾರಿ ಅಂಜನಿ ರಾಥೋರ್, ಬ್ಯಾಂಕ್​ನ ಉತ್ಪನ್ನಗಳು ಮತ್ತು ಸೇವೆಗಳನ್ನು ಗ್ರಾಹಕರಿಗೆ ತಲುಪಿಸಲು, ಅಪ್ಲಿಕೇಶನ್ ಲಿಂಕ್‌ಗಳು ಮತ್ತು ವಿಚಾರಣಾ ಸೇವೆಗಳಿಗಾಗಿ ಕಾರ್ಯನಿರ್ವಹಿಸುವ ಸುಮಾರು 8 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ವಾಟ್ಸ್​​ ಆ್ಯಪ್ ದ್ವಿಮುಖ ಗ್ರಾಹಕರ ಬೆಂಬಲಕ್ಕೆ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.

ವಾಟ್ಸ್​​ ಆ್ಯಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಪ್ರಕಾರ, ಬ್ಯುಸಿನೆಸ್​ ಎಪಿಐ ದೊಡ್ಡ ಸಂಸ್ಥೆಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.