ETV Bharat / business

'ವಾಟ್ಸ್​ಆ್ಯಪ್​ನ 10ನೇ ವಾರ್ಷಿಕೋತ್ಸವ..' ಈ ಮೆಸೇಜ್​ ಬಂದ್ರೆ ಎಚ್ಚರ! - ಸೈಬರ್ ಭದ್ರತಾ ಸಂಸ್ಥೆ ಇಸೆಟ್

1,000 ಜಿಬಿ ಉಚಿತ ಇಂಟರ್​ನೆಟ್ ಡೇಟಾ ಎಂಬ ವಾಟ್ಸ್​ಆ್ಯಪ್ ಸಂದೇಶದ ಲಿಂಕ್​ ವೈರಲ್ ಆಗುತ್ತಿದ್ದು, ಈ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಸೈಬರ್ ಭದ್ರತಾ ಸಂಸ್ಥೆ ಇಸೆಟ್​ ಎಚ್ಚರಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Jul 30, 2019, 9:36 PM IST

ನವದೆಹಲಿ: ಸಾಮಾಜಿಕ ಜಾಲತಾಣದ ಮೆಸೇಂಜರ್​ ತಂತ್ರಾಂಶ ವಾಟ್ಸ್​ಆ್ಯಪ್​ ಸೇವೆಯು ಜಾರಿಗೆ ಬಂದು ಈ ವರ್ಷಕ್ಕೆ 10 ವರ್ಷ ಕಳೆಯಲಿದೆ. ಇದನ್ನೇ ನೆಪ ಮಾಡಿಕೊಂಡ ಹ್ಯಾಕಿಂಗ್​ ವಂಚಕರು 1,000 ಜಿಬಿ ಉಚಿತ ಇಂಟರ್​ನೆಟ್​ ಆಮಿಷಯೊಡ್ಡುವ ಲಿಂಕ್​ ಹರಿಬಿಟ್ಟಿದ್ದಾರೆ.

1,000 ಜಿಬಿ ಉಚಿತ ಇಂಟರ್​ನೆಟ್ ಡೇಟಾ ಎಂಬ ವಾಟ್ಸ್​ಆ್ಯಪ್ ಸಂದೇಶದ ಲಿಂಕ್​ ಒಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಸೈಬರ್ ಭದ್ರತಾ ಸಂಸ್ಥೆ ಇಸೆಟ್​ ಎಚ್ಚರಿಸಿದೆ.

ಪ್ರಸಿದ್ಧ ಬ್ರ್ಯಾಂಡ್​ಗಳ ಹೆಸರಲ್ಲಿ ನಡೆಯುವ ಇಂತಹ ಉಚಿತ ಕೊಡುಗೆಗಳನ್ನು ವ್ಯವಸ್ಥಿತವಾಗಿ ಪ್ರಚಾರಪಡಿಸುತ್ತಾರೆ. ವಾಟ್ಸ್​ಆ್ಯಪ್​ಗಳಲ್ಲಿ ಹರಿದಾಡುತ್ತಿರುವ 1,000 ಜಿಬಿ ಡೇಟಾ ಯುಆರ್​ಎಲ್​ ಅಧಿಕೃತವಾಗಿಲ್ಲ ಎಂದು ಬ್ಲಾಗ್ ಸಂಶೋಧಕರು ಹೇಳಿದ್ದಾರೆ.

ಒಂದು ವೇಳೆ ಬಳಕೆದಾರ ಲಿಂಕ್​ ಕ್ಲಿಕ್​ ಮಾಡಿದರೆ ಸಮೀಕ್ಷೆಯ ರೂಪದಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರಿಸುತ್ತಾ ಹೋದಂತೆ ದೊಡ್ಡ ಮೊತ್ತದ ಬಹುಮಾನದ ಭಾಗವಾಗಿ ಇತರೆ 30 ಜನರಿಗೆ ಲಿಂಕ್​ ಕಳುಹಿಸುವಂತೆ ಕೋರುತ್ತಾರೆ. ಇದು ವೈರಲ್​ನ ವ್ಯಾಪ್ತಿ ವಿಸ್ತಾರ ಪಡೆದುಕೊಳ್ಳುತ್ತದೆ.

2017 ರಲ್ಲಿ ಇದೇ ರೀತಿಯ ವಾಟ್ಸ್​ಆ್ಯಪ್​ ಹಗರಣವೊಂದು ನಡೆದು, ಉಚಿತ ಇಂಟರ್​ನೆಟ್ ಆಮಿಷಯೊಡ್ಡಲಾಯಿತು. ಈ ವೇಳೆ ಪ್ರೀಮಿಯಂ ಮತ್ತು ದುಬಾರಿ ಎಸ್‌ಎಂಎಸ್ ಸೇವೆಗಳಿಗೆ ಬಳಕೆದಾರರು ಒಳಗಾಗಿದ್ದರು. ಈ ರೀತಿ ಬಳಕೆದಾರರು ಆಯ್ಕೆ ಮಾಡಿಕೊಳ್ಳುವ ಮೂಲಕ ಫೋನ್‌ಗಳಲ್ಲಿ ತೃತೀಯ ಅಪ್ಲಿಕೇಷನ್​ಗಳು ಸೇರಿಕೊಂಡವು.

2018ರಲ್ಲಿ, 'ಉಚಿತ ಅಡಿಡಸ್' ಬೂಟುಗಳು ಎಂಬ ವಂಚನೆಯ ಲಿಂಕ್​ ಹರಿದಾಡಿತ್ತು ಎಂದು ಬ್ಲಾಗ್ ಸಂಶೋಧಕರು ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.