ETV Bharat / business

ಸರ್ಕಾರಕ್ಕೆ ಸಾವಿರ ಕೋಟಿ ರೂ. ಎಜಿಆರ್​​ ಮೊತ್ತ ಪಾವತಿಸಿದ ವೊಡಾಫೋನ್-ಐಡಿಯಾ!

ಕಂಪನಿಯು ನಿನ್ನೆ (ಜುಲೈ 17ರಂದು) ಎಜಿಆರ್ ಬಾಕಿಗಾಗಿ ಟೆಲಿಕಾಂ ಇಲಾಖೆಗೆ 1,000 ಕೋಟಿ ರೂ. ಪಾವತಿಸಿದೆ. ಕಂಪನಿಯು ಈ ಹಿಂದೆ 3 ಕಂತುಗಳಲ್ಲಿ 6,854 ಕೋಟಿ ರೂ.ಯೊಂದಿಗೆ ಕಂಪನಿಯು ಒಟ್ಟಾರೆ 7,854 ಕೋಟಿ ರೂ. ಎಜಿಆರ್ ಬಾಕಿ ಪಾವತಿಸಿದೆ ಎಂದು ಹೇಳಿದೆ.

author img

By

Published : Jul 18, 2020, 7:31 PM IST

Voda Idea
ವೊಡಾ- ಐಡಿಯಾ

ನವದೆಹಲಿ: ಟೆಲಿಕಾಂ ಆಪರೇಟರ್ ವೊಡಾಫೋನ್- ಐಡಿಯಾ, 7,854 ಕೋಟಿ ರೂ. ಶಾಸನಬದ್ಧ ಬಾಕಿ ಮೊತ್ತದ ಪೈಕಿ 1,000 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಿದೆ ಎಂದು ತಿಳಿಸಿದೆ.

ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಪಾವತಿಯ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆದಿತ್ತು. ಈ ಹಿಂದೆ ಕಂಪನಿಯು 6,854 ಕೋಟಿ ರೂ.ಗಳನ್ನು ಮೂರು ಕಂತುಗಳಲ್ಲಿ ಠೇವಣಿ ಇರಿಸಿತ್ತು ಎಂದು ವೊಡಾಫೋನ್- ಐಡಿಯಾ ನಿಯಂತ್ರಕ ಫೈಲಿಂಗ್​​ನಲ್ಲಿ ತಿಳಿಸಿದೆ.

ಕಂಪನಿಯು ನಿನ್ನೆ (ಜುಲೈ 17ರಂದು) ಎಜಿಆರ್ ಬಾಕಿಗಾಗಿ ಟೆಲಿಕಾಂ ಇಲಾಖೆಗೆ 1,000 ಕೋಟಿ ರೂ. ಪಾವತಿಸಿದೆ. ಕಂಪನಿಯು ಈ ಹಿಂದೆ 3 ಕಂತುಗಳಲ್ಲಿ 6,854 ಕೋಟಿ ರೂ.ಯೊಂದಿಗೆ ಒಟ್ಟಾರೆ 7,854 ಕೋಟಿ ರೂ. ಎಜಿಆರ್ ಬಾಕಿ ಪಾವತಿಸಿದೆ ಎಂದು ಹೇಳಿದೆ.

ಸರ್ಕಾರಕ್ಕೆ ಸಲ್ಲಿಸಬೇಕಿರುವ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಸಂಬಂಧಿತ ಬಾಕಿ ಪಾವತಿಸುವ ಸಂಸ್ಥೆಗಳ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ಕಳೆದ 10 ವರ್ಷಗಳ ಹಣಕಾಸು ಸ್ಟೇಟ್​ಮೆಂಟ್​ ಮತ್ತು ಖಾತೆಗಳ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಜೂನ್ 18ರಂದು ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.