ನವದೆಹಲಿ: ಬಜಾಜ್ ಫಿನ್‌ಸರ್ವ್ ಗ್ರೂಪ್‌ನ ಸಾಲ ಮತ್ತು ಹೂಡಿಕೆ ವಿಭಾಗವಾದ ಬಜಾಜ್ ಫೈನಾನ್ಸ್ ಹಾಗೂ ವೊಡಾಫೋನ್ ಐಡಿಯಾ ಒಪ್ಪಂದ ಮಾಡಿಕೊಂಡಿದ್ದು, ಕೈಗೆಟುಕುವ ಇಎಂಐಗಳಲ್ಲಿ ಸ್ಮಾರ್ಟ್‌ಫೋನ್ ಒದಗಿಸುವ ಕರಾರಿಗೆ ಸಹಿ ಹಾಕಿವೆ. ಟೆಲಿಕಾಂ ಕಂಪನಿಯಿಂದ 6 ತಿಂಗಳು ಮತ್ತು 1 ವರ್ಷದ ಪ್ರಿಪೇಯ್ಡ್ ಯೋಜನೆ ಜತೆಗೆ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ.
ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ರೀಚಾರ್ಜ್ ಸೇರಿದಂತೆ ಒಟ್ಟು ಬಿಲ್ ಮೊತ್ತದ ಆಧಾರದ ಮೇಲೆ ಇಎಂಐ ಲೆಕ್ಕಹಾಕಲಾಗುತ್ತದೆ. ಆ ನಂತರ ಇಎಂಐ ಮೊತ್ತವನ್ನು 6 ರಿಂದ 12 ಮಾಸಿಕ ಕಂತುಗಳಾಗಿ ವಿಂಗಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಾಹಕರು ಆರು ತಿಂಗಳ ಅವಧಿಗೆ 1,197 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ದುಕೊಂಡೇ ಗ್ರಾಹಕರು ಪಾವತಿಸಬೇಕಾದ ಇಎಂಐ ಮೊತ್ತವು ಮುಕ್ತ ಮಾರುಕಟ್ಟೆ ರೀಚಾರ್ಜ್‌ಗಳಲ್ಲಿ ಪಾವತಿಸುವ 249 ರೂ. ಬದಲು 200 ರೂ. ಇರಲಿದೆ. ಒಂದು ವೇಳೆ ಗ್ರಾಹಕರು 12 ತಿಂಗಳ ಅವಧಿಗೆ 2,399 ರೂ.ಗಳ ವಾರ್ಷಿಕ ರೀಚಾರ್ಜ್ ಆರಿಸಿಕೊಂಡರೆ, ಇಎಂಐ ಮೊತ್ತವು ಮುಕ್ತ ಮಾರುಕಟ್ಟೆಯ 299 ರೂ. ರೀಚಾರ್ಜ್ ಬದಲಿಗೆ 200 ರೂ. ಸಿಗುತ್ತದೆ.
6 ತಿಂಗಳ ಮಾನ್ಯತೆಯೊಂದಿಗೆ ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ಮಾಡುವ ವಿಐಎಲ್ ಗ್ರಾಹಕರು ದಿನಕ್ಕೆ 1.5 ಜಿಬಿ ಡೇಟಾದೊಂದಿಗೆ ಅನಿಯಮಿತ ಧ್ವನಿ ಪ್ರಯೋಜನಗಳನ್ನು ರೂ. 1197ಕ್ಕೆ ಪಡೆಯಬಹುದು. 12 ತಿಂಗಳ ರೀಚಾರ್ಜ್ ಸಿಂಧುತ್ವ ಆಯ್ಕೆ ಮಾಡುವ ಗ್ರಾಹಕರು ನಿತ್ಯ 2 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನಗಳನ್ನು 2,399 ರೂ.ಗೆ ಪಡೆಯಬಹುದು.