ಲಂಡನ್: ಪರಾರಿಯಾದ ಮದ್ಯದ ಉದ್ಯಮಿ ವಿಜಯ್ ಮಲ್ಯ ಬ್ರಿಟನ್ನಲ್ಲೇ ಬೀಡುಬಿಡಲು ಇಂಗ್ಲೆಂಡ್ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಮತ್ತೊಂದು ಸುತ್ತಿನ ಮನವಿ ಮಾಡಿದ್ದಾರೆ.
ಲಂಡನ್‌ನ ಯುಕೆ ಹೈಕೋರ್ಟ್‌ನಲ್ಲಿ ಶುಕ್ರವಾರ ಉದ್ಯಮಿಗಳ ದಿವಾಳಿತನದ ವಿಚಾರಣೆಯ ಸಂದರ್ಭದಲ್ಲಿ ಮಲ್ಯ ಅವರ ಕಾನೂನು ಪ್ರತಿನಿಧಿ ಈ ಹೇಳಿಕೆ ನೀಡಿದ್ದಾರೆ.
2013ರಲ್ಲಿನ ದಿವಾಳಿಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಬಂಧ ಭಾರತೀಯ ಬ್ಯಾಂಕ್ಗಳ ಒಕ್ಕೂಟಕ್ಕೆ ಒಂದು ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದಷ್ಟು ಸಾಲ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರದ ಪ್ರಯತ್ನದ ವಿರುದ್ಧ ಹೋರಾಡುತ್ತಿರುವ 65 ವರ್ಷದ ಮಲ್ಯ, ಸ್ಥಳೀಯವಾಗಿ ಲಭ್ಯವಿರುವ ಎಲ್ಲಾ ಕಾನೂನು ಕಾರ್ಯವಿಧಾನಗಳ ಮೊರೆ ಹೋಗಿ ದಣಿದಿದ್ದಾರೆ.
ಇದನ್ನೂ ಓದಿ: ಗಬ್ಬಾದಲ್ಲಿ ಕಾಂಗರೂ ಬೇಟೆಯಾಡಿದ ಆರು ಯುವ ಕ್ರಿಕೆಟಿಗರಿಗೆ 10 ಲಕ್ಷದ ಕಾರ್ ಗಿಫ್ಟ್ ಕೊಟ್ಟ ಮಹೀಂದ್ರಾ!
ಯುಕೆ ಗೃಹ ಕಾರ್ಯದರ್ಶಿ ಪಟೇಲ್ ಹಸ್ತಾಂತರಿಸುವ ಬಗ್ಗೆ ಔಪಚಾರಿಕವಾಗಿ ಸಹಿ ಹಾಕುವ ನಿರೀಕ್ಷೆಯಲ್ಲಿದ್ದು, ಸದ್ಯ ಅವರು ಜಾಮೀನಿನ ಮೇಲೆ ಉಳಿದುಕೊಂಡಿದ್ದಾರೆ. ತಾಂತ್ರಿಕತೆಯಿಂದಾಗಿ ಹಸ್ತಾಂತರಕ್ಕೆ ಸಹಿ ಹಾಕಲು ವಿಳಂಬವಾಗುತ್ತಿದೆ ಎಂದು ಗೃಹ ಕಚೇರಿ ಈ ಹಿಂದೆ ಹೇಳಿತ್ತು.
ಮಾನವ ಹಕ್ಕುಗಳ ದೃಷ್ಟಿಕೋನದಿಂದ ರಾಜಕೀಯ ಆಶ್ರಯದವರೆಗೆ ಹಲವು ಕಾರಣಗಳಿಗಾಗಿ ಮಲ್ಯ ಅವರು ಬ್ರಿಟನ್ನಲ್ಲಿ ಉಳಿಯಲು ಆಶ್ರಯ ಕೋರಿದ್ದಾರೆ ಎಂಬ ವದಂತಿಗಳಿವೆ.
ಹಸ್ತಾಂತರ ಕಾರ್ಯ ಎತ್ತಿಹಿಡಿಯಲಾಗಿದೆ. ಆದರೆ, ಅವರು (ವಿಜಯ್ ಮಲ್ಯ) ಇನ್ನೂ ಇಲ್ಲಿಯೇ ಇದ್ದಾರೆ. ನಿಮಗೆ ತಿಳಿದಿರುವಂತೆ ಅವರು ರಾಜ್ಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಮಾರ್ಗವಿದೆ ಎಂದು ಶುಕ್ರವಾರ ಯುಕೆ ಹೈಕೋರ್ಟ್‌ನಲ್ಲಿ ಮಲ್ಯ ಪರ ವಕೀಲ ಫಿಲಿಪ್ ಮಾರ್ಷಲ್ ಹೇಳಿದರು.